News & Events
ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಶ್ವಿನಿ ಜೈನ್ ಪ್ರಥಮ ರ್ಯಾಂಕ್
ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾನಿಲಯವು 2017-18ನೇ ಸಾಲಿನ ಮೇ ತಿಂಗಳಲ್ಲಿ ನಡೆಸಿದ ಸ್ನಾತಕೋತ್ತರ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಅಶ್ವಿನಿ ಜೈನ್ ಪ್ರಥಮ ರ್ಯಾಂಕ್ ಗಳಿಸುವುದರ ಜೊತೆಗೆ ಎರಡು ಚಿನ್ನದ ಪದಕ ಹಾಗೂ ಮೂರು ನಗದು ಬಹುಮಾನಕ್ಕೆ ಪುರಸ್ಕೃತರಾಗಿದ್ದಾರೆ. ಡಾ. ಟಿ.ಎಮ್.ಎ ಪೈ ಎಂಡೋವ್‍ಮೆಂಟ್ ಹಾಗೂ ರಾಮಕೃಷ್ಣ ಮಲ್ಯ ಟ್ರಸ್ಟ್‍ನಿಂದ ಚಿನ್ನದ ಪದಕಗಳು, ದಕ್ಷಿಣ ಕನ್ನಡ ಚಿಲ್ಡ್ರನ್ಸ್ ಫಿಲ್ಮ್ ಫೆಸ್ಟಿವಲ್, ಪಬ್ಲಿಕ್ ರಿಲೇಶನ್ಸ್ ಸೊಸೈಟಿ ಆಫ್ ಇಂಡಿಯಾ ಕ್ಯಾಶ್ ಪ್ರೈಜ್
ಆಳ್ವಾಸ್‍ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಮೂಡಬಿದಿರೆ: ಅಂಬೇಡ್ಕರ್ ಎಂಬ ಮಹಾನ್ ಚೇತನ ಸಂಘರ್ಷದ ಅನುಭವದಿಂದ ಹುಟ್ಟಿಕೊಂಡ ವ್ಯಕಿತ್ವ. ಅವರ ಮನಸ್ಸಿನಲ್ಲಿ ಅಂದು ಮೂಡಿದ ಸಮಾನತೆಯ ಪ್ರಜ್ಞೆ ,ಭವ್ಯ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಪಕ ಡಾ ಯೋಗೀಶ್ ಕೈರೋಡಿ ನುಡಿದರು. ಅವರು ಆಳ್ವಾಸ್ ಪದವಿ ಕಾಲೇಜಿನ ಐಕ್ಯೂಎಸಿವತಿಯಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಮ್ಮ ಇಂದಿನ ದಿನ ನಿತ್ಯದ ಜೀವನ ನಮ್ಮ ಸಂವಿಧಾನದ ತಳಹದಿಯ ಮೇಲೆ ನಿಂತಿದೆ. ಅಂದು ಅಂಬೇಡ್ಕರ್
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ
ಮೂಡುಬಿದಿರೆ: ಜೀವನದಲ್ಲಿ ಮಾನವಿಕ ಮೌಲ್ಯಗಳು, ಸಾಮಾಜಿಕ ಪ್ರಜ್ಞೆ ಹಾಗೂ ಜೀವನ ಕೌಶಲ್ಯಗಳನ್ನುಬೆಳೆಸಿಕೊಳ್ಳುವುದು ಅಗತ್ಯಎಂದು ಬೆಂಗಳೂರು ಎಚ್.ಎ.ಎಲ್‍ನ ಜನರಲ್ ಮ್ಯಾನೇಜರ್ ಪ್ರಕಾಶ್.ಕೆ ಎಂದು ಹೇಳಿದರು. ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಹನ್ನೊಂದನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಪುಸ್ತಕ ಮತ್ತು ಇಂಟರ್ನೆಟ್‍ಗಳಿಂದ ಮಾತ್ರವಲ್ಲದೇ ಸಮಾಜ ಹಾಗೂ ಅನುಭವಸ್ಥರಿಂದಲೂ ಜ್ಞಾನ ಸಂಪಾದನೆ ಮಾಡುವುದು ಅಗತ್ಯ. ವಿದ್ಯಾರ್ಥಿ ಜೀವನದಲ್ಲಿ ಪಡೆದುಕೊಂಡ ಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗಲೇ ಧ್ಯೇಯದ ಕಡೆಗೆ ಸಾಗಬಹುದು. ಕಠಿಣ ಪರಿಶ್ರಮದಿಂದ ಗುರಿಯನ್ನು ಸುಲಭವಾಗಿ ಸಾಧಿಸಬಹುದು. ಜೀವನದಲ್ಲಿ ಸಮಾಜ,
ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜರಿಗೆ ಆಳ್ವಾಸ್‍ನಿಂದ 2 ಲಕ್ಷ ಪ್ರೋತ್ಸಾಹಧನ
ಮೂಡುಬಿದಿರೆ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜರಿಗೆ ಆಳ್ವಾಸ್ ಸಂಸ್ಥೆಯಿಂದ 2ಲಕ್ಷ ರೂ ಪ್ರೋತ್ಸಾಹಧನ ನೀಡುವುದಾಗಿ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಘೋಷಿಸಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತು ಯೋಜನೆಯಡಿ ಉಚಿತ ಶಿಕ್ಷಣ ನೀಡುವುದಲ್ಲದೆ ಅತ್ಯತ್ತಮ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಾ ಬಂದಿದೆ. ಈ ಹಿಂದೆಯೂ ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂಸ್ಥೆಯ ಹಳೆ
ಮಂಗಳೂರು ವಿಶ್ವ ವಿದ್ಯಾಲಯದಿಂದ ವಿನಾಯಕ ಭಟ್ಟರಿಗೆ ಪಿಎಚ್‍ಡಿ ಪ್ರದಾನ
ಮೂಡಬಿದಿರೆ: “ಭಗವದ್ಗೀತೆಯಲ್ಲಿ ಮನೋನಿರ್ವಹಣೆ ಹಾಗೂ ನಿರ್ವಹಣಾ ವಿಜ್ಞಾನ” ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ವಿನಾಯಕ ಭಟ್ಟ ಗಾಳಿಮನೆ ಅವರಿಗೆ ಮಂಗಳೂರು ವಿಶ್ವವಿದ್ಯಾಲುವು ಪಿಎಚ್‍ಡಿ ಪ್ರದಾನ ಮಾಡಿದೆ. ವಿದ್ವಾಂಸ ಜಿ.ಎನ್ ಭಟ್ಟ ಹರಿಗಾರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧ ಇದಾಗಿದ್ದು, ಕಳೆದ ವರ್ಷ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ವಿನಾಯಕ ಭಟ್ಟ ಗಾಳಿಮನೆ ಲೇಖಕರಾಗಿ, ತಾಳಮದ್ದಲೆ ಅರ್ಥದಾರಿಯಾಗಿ ಈಗಾಗಲೇ ಹೆಸರು ಮಾಡಿದ್ದು, ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಪದವಿ ಸಂಸ್ಕøತ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂಲತಃ ಸಿದ್ಧಾಪುರ ತಾಲೂಕಿನ ಗಾಳಿಮನೆಯ
ಮಾನವಿಕ ವಿಭಾಗದ ಶಿಕ್ಷಕ ಪಾಲಕ ಸಭೆ
ವಿದ್ಯಾಗಿರಿ: ಶೈಕ್ಷಣಿಕ ಜೀವನವು ವಿದ್ಯಾರ್ಥಿ, ಹೆತ್ತವರು ಮತ್ತು ಶಿಕ್ಷಕ ಹೀಗೆ ಮೂರು ಬಿಂದುಗಳ ಸಮನ್ವಯತೆಯ ಪ್ರತಿಬಿಂಬ. ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಶಿಕ್ಷಕ ಹಾಗೂ ಪಾಲಕರ ಜವಬ್ದಾರಿ ಪ್ರಮುಖವಾಗಿರುತ್ತದೆ ಎಂದು ಆಳ್ವಾಸ್ ಕಾಲೇಜಿನ ಪದವಿ ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ. ಎಸ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಮಾನವಿಕ ವಿಭಾಗದ ಶಿಕ್ಷಕ ಪಾಲಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕ-ಪಾಲಕ ಜೊತೆಗೆ ಕಾಲೇಜು ಕೂಡ ಬಹುಮುಖ್ಯ ಪಾತ್ರವಹಿಸುತ್ತದೆ. ಪದವಿಯ ಹಂತದಲ್ಲಿ ಪಠ್ಯ ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳ
ಕೆ.ಎಸ್.ಇ.ಎ ಅಂತರ್ ಕಾಲೇಜು ಕ್ರಿಕೆಟ್: ಆಳ್ವಾಸ್‍ಗೆ ಪ್ರಶಸ್ತಿ
ಮೂಡುಬಿದಿರೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ಅಂತರ್ ಕಾಲೇಜು ಹಾರ್ಡ್‍ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರ ತಂಡ ತಮ್ಮ ನಿಗದಿತ 50 ಓವರ್‍ಗಳಲ್ಲಿ 93 ರನ್‍ಗಳಿಗೆ ತನ್ನ ಎಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತು. ಆಳ್ವಾಸ್ ತಂಡವು 4 ವಿಕೆಟ್ ನಷ್ಟಕ್ಕೆ 93 ರನ್‍ಗಳ ಗುರಿಯನ್ನು 18 ಓವರ್‍ಗಳಲ್ಲಿ ಗಳಿಸಿತು. ಆಳ್ವಾಸ್ ಪರವಾಗಿ ಅಭಿಲಾಷ್
ಸರಿಯಾಗಿ ಆಲಿಸುವಿಕೆಯೇ ಕಲೆ ಮನಶಾಸ್ತ್ರಜ್ಞರಿಗೆ ಅಗತ್ಯ: ಅಕ್ಷರ ದಾಮ್ಲೆ
ಮೂಡಬಿದಿರೆ: ಮನಃಶಾಸ್ತ್ರಜ್ಞರಾಗ ಬಯಸುವವರು ಮೊದಲಿಗೆ ಇತರರ ಮಾತುಗಳನ್ನು ಶಾಂತಚಿತ್ತವಾಗಿ ಕೇಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. “ಸರಿಯಾಗಿ ಆಲಿಸುವಿಕೆಯೇ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವ ಅಗತ್ಯತೆ ಎಂದು ಮನಶಾಸ್ತ್ರಜ್ಞ ಅಕ್ಷರ ದಾಮ್ಲೆ ಅಭಿಪ್ರಾಯ ಪಟ್ಟರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ವತಿಯಿಂದ ಸೋಮವಾರ ಒಂದು ದಿನದ ಉಪನ್ಯಾಸ ಕಾರ್ಯಗಾರವನ್ನು ಆಯೋಗಿಸಲಾಗಿತ್ತು. ಮನಃಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಅಕ್ಷರ ದಾಮ್ಲೆ ಮಾತನಾಡಿ ಮನಃಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸಲು ಬಯಸುವವರು ಮೊದಲಿಗೆ ಒಳ್ಳೆಯ ಕೇಳುಗರಾಗಬೇಕು. ಮನೋ ರೋಗಿಗಳ ಮನಸ್ಥಿತಿಯನ್ನು ಅರಿಯುವುದು, ಹಾಗೂ ಅವರ ಭಾವನೆಗಳಿಗೆ ಸ್ಪಂದಿಸುವ
ಆಳ್ವಾಸ್‍ನಲ್ಲಿ ಇಂಫಿರಿಯಮ್ 2019 ಫೆಸ್ಟ್
ಮೂಡುಬಿದಿರೆ: ಮಿಜಾರಿನಲ್ಲಿರುವ ಅಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯುನ್ಮಾನ ವಿಭಾಗದ ಇವಿಯೋನಿಕ್ಸ್ ಪ್ರಸ್ತುತ ಪಡಿಸಿದ ಇಂಫಿರಿಯಮ್ 2019 ಫೆಸ್ಟ್‍ಗೆ ಕಾಲೇಜಿನ ಸಭಾಂಗಣದಲ್ಲಿ ಚಾಲನೆಯನ್ನು ನೀಡಲಾಯಿತು. ಮಂಗಳೂರು ಇನ್ಪೋಸಿಸ್ ಟೆಕ್ನಾಲಜಿಸ್ ಲಿಮಿಟೆಡ್‍ನ ಸಿನೀಯರ್ ಟೆಕ್ನಾಲಜಿ ಅರ್ಚಿಟೆಕ್ಟ್ ವಿಜಯ್ ಕೆ ಹೆಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಟ್ರಸ್ಟಿ ವಿವೇಕ್ ಅಳ್ವ, ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಡಾ. ದತ್ತಾತ್ರೇಯ, ವಿಭಾಗದ ಮುಖ್ಯಸ್ಥ ಡಾ.ಡಿ.ವಿ. ಮಂಜುನಾಥ್, ವಿದ್ಯಾರ್ಥಿ ಪ್ರತಿನಿದಿ ಧೀರಜ್ ಶೆಟ್ಟಿ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ
ಅಖಿಲ ಭಾರತ ಶಿಖಾರೋಹಣ ಶಿಬಿರ
ಬೇಸಿಕ್ ಶಿಖಾರೋಹಣ ಕೋರ್ಸ್ ಪದವಿ ಪಡೆದ ಆಳ್ವಾಸ್ ವಿದ್ಯಾರ್ಥಿಗಳು ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ 06 kar air squadron nc ಮಂಗಳೂರು ಕೆಡೆಟ್, ಕೀರ್ತಿನಾಥ್ ಹಾಗೂ ವಿಕಾಸ್ ಎಂ., ಮಾ.2ರಿಂದ 29ರವರೆಗೆ ಡಾರ್ಜಿಲಿಂಗ್‍ನಲ್ಲಿ ನಡೆದ ಅಖಿಲ ಭಾರತ ಶಿಖಾರೋಹಣ ಶಿಬಿರದಲ್ಲಿ ಭಾಗವಹಿಸಿದರು. ಕೀರ್ತಿನಾಥ್ ಅವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಹಾಗೂ ವಿಕಾಸ್.ಎಂ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಿಖಾರೋಹಣ ಶಿಬಿರದಲ್ಲಿ ಹಿಮಾಲಯ ಪರ್ವತದಲ್ಲಿ ರೊಕ್ ಕ್ಲಮಿಂಗ್, ರ್ಯಾಪೆಲ್ಲಿಂಗ್, ಲೀಡ್