News & Events
ಗೋಡೆಯ ನಿಯತಕಾಲಿಕೆಗಳನ್ನು ಸಿದ್ದ ಪಡಿಸುವ ಕಾರ್ಯಗಾರ
ಮೂಡಬಿದಿರೆ: ಆಳ್ವಾಸ್ ಕಾಲೇಜು ಪದವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಹಂಡೇಲು ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗೋಡೆಯ ನಿಯತಕಾಲಿಕೆಗಳನ್ನು ಸಿದ್ದ ಪಡಿಸುವ ಕಾರ್ಯಗಾರವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಅಲ್ಲಿಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಿಕೊಡಲಾಯಿತು. ಸುಶಾಂತ್ ತೃತೀಯ ಬಿ. ಎ. ಪತ್ರಿಕೋದ್ಯಮ ವಿದ್ಯಾರ್ಥಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಮತ್ತು ಆಳ್ವಾಸ್ ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು. ಪತ್ರಿಕೋದ್ಯಮ ಉಪನ್ಯಾಸಕಿಯಾದ ಸ್ವಾತಿ ಶೆಟ್ಟಿ ಉಪಸ್ಥಿತರಿದ್ದರು.
ಆಳ್ವಾಸ್ `ಟ್ರಡಿಶ್‍ನಲ್ ಡೇ-2019′
ಮೂಡಬಿದಿರೆ: ನಮ್ಮ ಸಂಸ್ಕೃತಿ ನಮಗೆ ಅರ್ಥವಾಗಬೇಕಾದರೆ ನಮ್ಮ ಭಾಷೆಯಲ್ಲಿ ನೆಲೆನಿಲ್ಲಬೇಕು ಆಗ ಮಾತ್ರ ನಮ್ಮ ಪರಂಪರೆ ಸಂಸ್ಕೃತಿಯನ್ನು ನಾವು ಆಳವಾಗಿ ತಿಳಿದುಕೊಳ್ಳಲು ಸಾಧ್ಯ ಎಂದು ನಟಿ ಪದ್ಮಶ್ರೀ ಪುರಸ್ಕೃತೆ ಬಿ.ಜಯಶ್ರೀ ಹೇಳಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಿಜಾರು ಎಐಇಟಿ ಆವರಣದಲ್ಲಿ ನಡೆದ ಟ್ರಡಿಶ್‍ನಲ್ ಡೇ-2019′ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ಸಂಸ್ಕøತಿ ಹಾಗೂ ಪರಂಪರೆಯ ವೈವಿಧ್ಯತೆಯನ್ನು ನಾವು ಈ ಕಾಲೇಜಿನಲ್ಲಿ ಜೀವಂತವಾಗಿ ನೋಡಬಹುದು. ಈ ರೀತಿ ವಿವಿಧ ಸಂಸ್ಕøತಿಗಳ ಆನಾವರಣದಿಂದ ಸಂಸ್ಕೃತಿ ಮತ್ತು ಪರಂಪರೆಯ ಕೊಡುಕೊಳ್ಳುವಿಕೆಯಾಗಿ ನಮ್ಮ
`ನ್ಯೂ ಮೀಡಿಯಾ’ ಕಾರ್ಯಾಗಾರ
ಮೂಡಬಿದಿರೆ: ನಮ್ಮ ಆಲೋಚನೆಗಳನ್ನು ಎಂದಿಗೂ ಯಾವುದೋ ಒಂದು ಚೌಕಟ್ಟಿಗೆ ಸೀಮಿತಗೊಳಿಸಬಾರದು. ನಮ್ಮ ಗುರಿಯನ್ನು ತಲುಪವವರೆಗೂ ವಿವಿಧ ಆಯಾಮಗಳಲ್ಲಿ ಪ್ರಯತ್ನಿಸಬೇಕು ಎಂದು ಬೆಂಗಳೂರಿನ ಇನ್‍ಡೂಡಲ್ ಮೀಡಿಯಾದ ಸುದೀಪ್ ಶೆಣೈ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತರ ಪ್ರತಿಕೋದ್ಯಮ ವಿಭಾಗದಲ್ಲಿ ಆಯೋಜಿಸಿದ್ದ `ನ್ಯೂ ಮೀಡಿಯಾ’ ಕಾರ್ಯಾಗಾರದಲ್ಲಿ ಇವರು ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೇ ವಿಭಿನ್ನವಾದ ಕೌಶಲ್ಯವನ್ನು ಬೆಳೆಸಿಕೊಂಡು ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಗಾರದಲ್ಲಿ ನ್ಯೂ ಮೀಡಿಯಾದಲ್ಲಿರುವ ಅವಕಾಶಗಳ ಬಗ್ಗೆ ತಿಳಿಸುತ್ತಾ, ಸಾಮಾಜಿಕ ಜಾಲತಾಣದ ನಿರ್ವಹಣೆ, ಜಾಹಿರಾತು
“ಗುಂಪು ಆಪ್ತ ಸಮಾಲೋಚನೆ”
ಮೂಡಬಿದಿರೆ: “ನಮಗೆ ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರವನ್ನು ನಾವು ಕಂಡುಕೊಳ್ಳಬಹುದು. ಎಲ್ಲಾ ಸಮಸ್ಯೆಗಳು ವಿಭಿನ್ನವಾಗಿರುವುದರಿಂದÀ ಪರಿಹಾರಗಳೂ ವಿಭಿನ್ನವಾಗಿರುತ್ತವೆ” ಎಂದು ಮಂಗಳೂರು ರೋಶಿನಿ ನಿಲಯ ಕಾಲೇಜಿನ ಉಪನ್ಯಾಸಕಿ ಡಾ. ಆಡ್ರಿ ಪಿಂಟೋ ಹೇಳಿದರು. ಆಳ್ವಾಸ್ ಕಾಲೇಜಿನ ಮನಃಶಾಸ್ತ್ರ ವಿಭಾಗವು ಆಯೋಜಿಸಿದ್ದ “ಗುಂಪು ಆಪ್ತ ಸಮಾಲೋಚನೆ” ಎಂಬ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಇವರು ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು “ಗುಂಪು ಆಪ್ತ ಸಮಾಲೋಚನೆಯಿಂದ ನಮ್ಮಲ್ಲಿರುವ ಶಕ್ತಿಯನ್ನು ನಾವು ಹೇಗೆ ಹೆಚ್ಚಿಸಿಕೊಳ್ಳಬಹುವುದು, ನಮ್ಮ ಭಾವನೆಯನ್ನು ಹೇಗೆ ಸರಿಯಾದ
ಪಾಚಿ ಗಿಡಗಳ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕು: ಡಾ. ಡಿ.ಕೆ ಉಪ್ರೇತಿ
ಮೂಡುಬಿದಿರೆ: ಪಾಚಿ ಗಿಡಗಳು ಅಥವಾ ಕಲ್ಲುಹೂವುಗಳು ಅನೇಕ ಔಷಧೀಯ ಮತ್ತು ವಾಣಿಜ್ಯೋದ್ಯಮಗಳಲ್ಲಿ ವ್ಯಾಪಕ ಬಳಕೆಯಿದ್ದರೂ ಇದರ ಸಂರಕ್ಷಣೆಗೆ ಕನಿಷ್ಠ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ ಇದರಿಂದಾಗಿ ಕಲ್ಲುಹೂವುಗಳ ಕುರಿತಾದ ಸಂಶೋಧನೆ ಹೆಚ್ಚಾಗಿ ಕಂಡುಬರುತ್ತಿಲ್ಲ ಎಂದು ಲಕ್ನೋದ ಸಿಎಸ್‍ಐಆರ್ ನ ವಿಜ್ಞಾನಿ ಡಾ. ದಲೀಪ್ ಕುಮಾರ್ ಉಪ್ರೇತಿ ಹೇಳಿದರು. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮತ್ತು ಲಕ್ನೋದ ನ್ಯಾಶನಲ್ ಬೊಟಾನಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಇದರ ಜಂಟಿ ಆಶ್ರಯದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪಶ್ಚಿಮ ಘಟ್ಟಗಳಲ್ಲಿರುವ
ಆಳ್ವಾಸ್‍ನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳ ಶಿಕ್ಷಕ ರಕ್ಷಕ ಸಭೆ
ಮೂಡಬಿದಿರೆ: “ಮಕ್ಕಳು ಎಷ್ಟೇ ದೊಡ್ಡವರಾದರು, ಅವರ ಪ್ರತಿಯೊಂದು ಚಲನವಲನಗಳ ಬಗ್ಗೆ ಗಮನ ನೀಡಬೇಕಾದ್ದು ಪಾಲಕರು ಜವಬ್ದಾರಿ ಮತ್ತು ಇದನ್ನು ಅವರು ತಪ್ಪದೇ ಪಾಲಿಸಬೇಕು” ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಅಭಿಪ್ರಾಯಪಟ್ಟರು. ಆಳ್ವಾಸ್ ಕಾಲೇಜಿನ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವತಿಯಿಂದ ಕಾಲೇಜಿನ ಪುಟ್ಟಣ್ಣ ಕಣಗಾಲ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 2019ನೇ ಸಾಲಿನ ಶಿಕ್ಷಕ-ರಕ್ಷಕ ಸಭೆಯನ್ನುದ್ದೇಶಿಸಿ ಮಾತನಾಡಿದರು. “ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮುಖ್ಯವಾದದ್ದು. ಅವರು ಮಾಡುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಬೆಂಬಲಿಸಿ,
ಶಿಕ್ಷಣ ಎಂಬುದು ಪ್ರಭಾವಶಾಲಿ ಆಯುಧ: ಪ್ರೊ. ಪ್ರೀತಿ ಕೀರ್ತಿ ಡಿಸೋಜ
ಮೂಡಬಿದಿರೆ: ಶಿಕ್ಷಣ ಎಂಬುದು ಪ್ರಭಾವಶಾಲಿ ಆಯುಧ. ವಿದ್ಯಾರ್ಥಿ ಜೀವನದಿಂದಲೇ ಮುಂದಿನ ಭವಿಷ್ಯದ ಯೋಜನೆಯೊಂದಿಗೆ ಹೆಜ್ಜೆ ಹಾಕಿದರೆ ಪ್ರತಿಯೊಬ್ಬರು ಕೂಡ ಗುರಿಯನ್ನು ಸಾಧಿಸಬಹುದು ಎಂದು ರಾಯಲ್ ವಿಶ್ವವಿದ್ಯಾಲಯದ ಪ್ರೊ. ಪ್ರೀತಿ ಕೀರ್ತಿ ಡಿಸೋಜ ತಿಳಿಸಿದರು. ಆಳ್ವಾಸ್ ಕಾಲೇಜಿನ ಮ್ಯಾನೆಂಜ್‍ಮೆಂಟ್ ಮತ್ತು ಹೆಚ್‍ಆರ್‍ಡಿ ವಿಭಾಗದ ವತಿಯಿಂದ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ತರಭೇತಿಯಲ್ಲಿ ಮಾತನಾಡಿದ ಅವರು ಕೇವಲ ಗುರಿ ಇದ್ದರೆ ಸಲಾದು ಸರಿಯಾದ ಯೋಜನೆಯು ಮುಖ್ಯ. ಸ್ಪಷ್ಟ ಗುರಿಯೊಂದಿಗೆ ಪರಿಶ್ರಮವು ಮೇಳೈಸಿದರೆ ಗುರಿಯನ್ನು ಸುಲಭವಾಗಿ ತಲಪಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯು ಇತರರ ಸಂಸ್ಕೃತಿ
ಆಳ್ವಾಸ್‍ನಲ್ಲಿ ಶಜಿಬೂ ಚೆರೋಬಾ
ಮೂಡಬಿದ್ರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಿಜಾರು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮಣಿಪುರಿ ಹೊಸವರ್ಷ ಆಚರಣೆಯ ಹಬ್ಬವಾದ ಶಜಿಬೂ ಚೆರೋಬಾವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಎಂಎಲ್‍ಸಿ ಗಣೇಶ್ ಕಾರ್ಣಿಕ್ ‘ಒಂದು ಧೃಡವಾದ ಗುರಿಯೆಡೆಗೆ ಸರಿಯಾದ ಹೆಜ್ಜೆಯನ್ನಿಡುತ್ತ ನಡೆಯಿರಿ, ನಿಮ್ಮ ವಿಕಸನಕ್ಕೆ ಸಲ್ಲದ ವಿಷಯಗಳ ಬಗ್ಗೆ ಯೋಚಿಸಬೇಡಿ. ಪ್ರತಿಯೊಬ್ಬರಲ್ಲೂ ಸಾಧಿಸುವ ಸಾಮಥ್ರ್ಯವಿರುತ್ತದೆ, ಇಲ್ಲಿ ನಮ್ಮ ಆಯ್ಕೆಗಳು ಅತಿಮುಖ್ಯವಾಗುತ್ತವೆ’ ಎಂದರು. ಹಬ್ಬಗಳು ಸಂಸ್ಕೃತಿಯ ಮುಖವಾಣಿ, ನಾವು ಎಷ್ಟೇ ಸಾಂಸ್ಕೃತಿಕ-ಸಾಮಾಜಿಕವಾಗಿ ಎಷ್ಟೇ ಮುಂದುವರಿದಿದ್ದರೂ ಹಬ್ಬಗಳ ಆಚರಣೆಯನ್ನು ಮರೆಯಬಾರದು ಎಂದು ಅವರು
“ಪ್ರಾಕ್ಟಿಕಲ್ ಆಡಿಟಿಂಗ್ ಆ್ಯಂಡ್ ಜಿಸಿಟಿ”
ವಿದ್ಯಾಗಿರಿ: ಯಾವುದೇ ಕೆಲಸವನ್ನು ಮಾಡುವ ಮೊದಲು ಯೋಜನೆ ಅತ್ಯವಶ್ಯಕ. ಯೋಜನೆಯ ಜೊತೆಗೆ ಸವಾಲುಗಳನ್ನು ಎದುರಿಸಿ ಮುನ್ನಡೆಯುವ ಮಾರ್ಗವನ್ನು ತಿಳಿದಿರಬೇಕೆಂದು ಮಂಗಳೂರಿನ ಪ್ರಾಕ್ಟಿಸಿಂಗ್ ಚಾರ್ಟೆಡ್ ಅಕೌಟೆಂಟ್ ಯಶಸ್ವಿನಿ ಕೆ. ಅಮೀನ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಿಕಾಮ್ ಹೆಚ್‍ಆರ್‍ಡಿ ಪದವಿ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದು “ಪ್ರಾಕ್ಟಿಕಲ್ ಆಡಿಟಿಂಗ್ ಆ್ಯಂಡ್ ಜಿಎಸ್‍ಟಿ” ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಆಡಿಟ್ ಎನ್ನುವುದು ಸಂಪೂರ್ಣ ಯೋಜನೆಯಾಗಿದ್ದು, ಪ್ರತಿಯೊಂದು ಹಂತದಲ್ಲಿಯೂ ದಾಖಲೆಗಳನ್ನು ಪರಿಶೀಲಿಸುವುದು ಅತ್ಯಗತ್ಯ. ಅಡಿಟ್‍ನ
ಆಳ್ವಾಸ್ ಸೃಷ್ಠಿ ಕ್ಲಬ್‍ನಿಂದ ವರುಣ ಕಾರ್ಯಕ್ರಮ
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸೃಷ್ಠಿ ಕ್ಲಬ್‍ನ ಸಹಯೋಗದಲ್ಲಿ ವರುಣ ಕಾರ್ಯಕ್ರಮ ನಡೆಯಿತು. ಕೇರಳದ ಕೋಟಿಕೊಡೆ ಫಾರೂಕ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಿಶೋರ್ ಕುಮಾರ್ ಕಾರ್ಯಕ್ರಮಕ್ಕೆ ಎಐಟಿಇ ಸಭಾಂಗಣದಲ್ಲಿ ಚಾಲನೆ ನೀಡಿ, ಮಾನವ ಪರಿಸರದ ಒಂದು ಭಾಗ. ಅದರೆ ಮಾನವನು ಇಡೀ ಪರಿಸರವೇ ನನ್ನ ನಿಯಂತ್ರಣದಲ್ಲಿದೆ ಎನ್ನುವ ಮೂರ್ಖ ಧೋರಣೆಯಿಂದಾಗಿ ಪರಸರದಲ್ಲಿ ಅಸಮತೋಲ ಕಾಡುತ್ತಿದೆ. ಪರಿಸರವನ್ನು ರಕ್ಷಿಸುವುದರ ಜೊತೆಗೆ ಸಮಾಜದಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕಾಗಿದೆ, ಮುಂದಿನ ದಿನಗಳಲ್ಲಿ ಅನೇಕ