News & Events
ರಾಷ್ಟ್ರೀಯ ಸೈನ್ಯ ದಳದ ವಾರ್ಷಿಕ ಕಾರ್ಯಕ್ರಮ
ಮೂಡಬಿದಿರೆ: ಭಾರತದ ರಾಷ್ಟ್ರೀಯ ಸೈನ್ಯ ದಳವು ಯುವಜನತೆಯನ್ನು ಸರಿಯಾದ ಮಾರ್ಗದಲ್ಲಿ ಮುಂದುವರಿಯಲು ಅವಕಾಶ ಕಲ್ಪಿಸಿಕೊಡುವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಕಮಾಂಡರ್ ಮಹೇಶ್ ಎನ್ ನಾಯಕ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ರಾಷ್ಟ್ರೀಯ ಸೈನ್ಯ ದಳದ ಮೂರು ದಳಗಳ ವಾರ್ಷಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಮ್ಮ ದೇಶದಲ್ಲಿ ನಿಜವಾದ ದೇಶಪ್ರೇಮದ ಭಾವನೆ ಕೆಲವೇ ಕೆಲವು ಜನರಲ್ಲಿ ಮಾತ್ರ ಇದ್ದು, ವಿವಿಧ ಧರ್ಮ, ಜಾತಿ, ಪಂಗಡ ಹಾಗೂ ವರ್ಗಗಳಿರುವ ಭಾರತದಂತಹ ದೇಶಕ್ಕೆ ಇದು ಅತ್ಯಂತ ಆತಂಕಕಾರಿಯಾಗಿದೆ. ಇಂದಿನ ಯುವ
“ಡಿಜಿಟಲೈಸೇಶನ್ ಇನ್ ಮ್ಯಾನೇಜ್‍ಮೆಂಟ್ ಆ್ಯಂಡ್ ಬುಸಿನೆಸ್ ಪ್ರಾಕ್ಟಿಸ್”
ವಿದ್ಯಾಗಿರಿ: ಉದ್ಯಮ ಮತ್ತು ವ್ಯಾಪಾರ ಸುಲಭದ ದಾರಿಯಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಉದ್ಯಮಶೀಲತೆಯ ಕೌಶಲ ದೊರಯುವುದಿಲ್ಲ ಎಂದು ಬೆಂಗಳೂರಿನ ಉದ್ಯಮಿ ದೀಪಕ್ ಎಮ್. ತುರಾಮುರಿ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಎಂ.ಕಾಂ. ಹೆಚ್.ಆರ್.ಡಿ ವಿಭಾಗದಿಂದ ಆಯೋಜಿಸಿದ್ದ “ಡಿಜಿಟಲೈಸೇಶನ್ ಇನ್ ಮ್ಯಾನೇಜ್‍ಮೆಂಟ್ ಆ್ಯಂಡ್ ಬುಸಿನೆಸ್ ಪ್ರಾಕ್ಟಿಸ್” ಎಂಬ ಒಂದುದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. “ಒಂದು ಯಶಸ್ವಿ ಉದ್ಯಮ ನಡೆಯಬೇಕಾದರೆ ಹೊಸ ಹೊಸ ಆಲೋಚನೆಗಳ ಜೊತೆಗೆ ವಿಭಿನ್ನ ಬಗೆಯ ಯೋಜನೆಗಳ ಆವಿಷ್ಕಾರ ಅಗತ್ಯ. ಪ್ರಸ್ತುತ ದಿನಗಳಲ್ಲಿ ಜನರ
ಸಮಾಜಕ್ಕೆ ಹಿಂತಿರುಗುವ, ಹಿಂತಿರುಗಿಸುವ ಪ್ರಯತ್ನ ಅಗತ್ಯ: ಅಬ್ದುಲ್ ಘಾನಿ
ಮೂಡಬಿದಿರೆ: “ನಮಗೆ ಬದುಕುವ ಸಾಮಥ್ರ್ಯ ಹಾಗೂ ಅವಕಾಶ ದೊರಕಿದ್ದು ಪ್ರಕೃತಿಯಿಂದ. ಆದರೆ ಕಾಲ ಬದಲಾದಂತೆ, ಮಾನವ ಪ್ರಕೃತಿಯನ್ನೇ ತುಳಿದು ಮುಂದೆ ಸಾಗುವ ಪ್ರಯತ್ನದಲ್ಲಿದ್ದಾನೆ. ಸಮಾಜದ ಹೊರತು ಮಾನವನ ಜೀವನ ಕಷ್ಟಸಾಧ್ಯ ಎಂಬುದರ ಅರಿವು ನಮಗಿರಬೇಕು. ಸಮಾಜದಿಂದ ಪಡೆದದ್ದನ್ನು, ಸಮಾಜಕ್ಕೆ ಹಿಂತಿರುಗಿಸುವ ಪ್ರಯತ್ನ ಅಗತ್ಯ” ಎಂದು ಭಾರತದ `ಹಸಿರು ಮಾನವ’ ಅಬ್ದುಲ್ ಘಾನಿ ಹೇಳಿದರು. ಆಳ್ವಾಸ್ ಪದವಿ ಕಾಲೇಜಿನ ಮಾನವಿಕ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ “ಆರ್ಟ್ ಎಕ್ಸೂಬರೆನ್ಸ್: ಕಾಸ್ಮೋಸ್ 2019” ಅಂತರ್ ಕಾಲೇಜು ಫೆಸ್ಟ್‍ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ
ಭಾವ ತೀವ್ರತೆಯೊಂದೆ ಕಾವ್ಯದ ರಹಸ್ಯವಲ್ಲ: ಬಸವರಾಜ ಕಲ್ಗುಡಿ
ವಿದ್ಯಾಗಿರಿ: ಭಾವದ ತೀವ್ರತೆ ಕಾವ್ಯದ ಒಂದು ವಸ್ತುವಾಗದೆ, ಸಂಘರ್ಷದ ಸ್ಥಿತಿಯಲ್ಲಿ ಇದ್ದಾಗ ಕಾವ್ಯ ಹುಟ್ಟುತ್ತದೆ ಎಂದು ಖ್ಯಾತ ವಿರ್ಮಶಕ ಡಾ. ಬಸವರಾಜ ಕಲ್ಗುಡಿ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ ಬೆಳಗಾವಿ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ನಡೆದ “ಕಾವ್ಯ-ವಿಮರ್ಶಾ ಶಿಬಿರ”ದ ಕೊನೆಯ ದಿನವಾದ ಇಂದು, ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. “ಬದುಕು ಬೇರೆಯಲ್ಲ, ಕಾವ್ಯ ಬೇರೆಯಲ್ಲ ಹಾಗಾಗಿ ಕಾವ್ಯವನ್ನು ಓದುತ್ತಾ ಅದರಲ್ಲಿರುವ ಸತ್ವವನ್ನು ಗ್ರಹಿಸುತ್ತಾ, ಜೀವನದಲ್ಲಿ
ಆಳ್ವಾಸ್ ವಾರ್ಷಿಕೋತ್ಸವ
ವಿದ್ಯಾಗಿರಿ: ಜಗತ್ತಿನಲ್ಲಿ ಬದುಕಲು ಕೇವಲ ಶಿಕ್ಷಣ ಸಾಕಾಗುತ್ತದೆ, ಆದರೆ ಬಾಳಲು ಶಿಕ್ಷಣದ ಜೊತೆಗೆ ಸಂಸ್ಕೃತಿ ಅವಶ್ಯ ಎಂದು ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ್ ಶೆಟ್ಟಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಬದುಕು ಎನ್ನುವುದು ಅತ್ಯಮೂಲ್ಯ. ಅದರ ಹಾದಿಯಲ್ಲಿ ಸಾಗುವಾಗ ಪ್ರಮಾದಗಳು ಸಹಜ, ಅವುಗಳನ್ನು ತಿದ್ದಿ ನಡೆಯುವುದೇ ಜೀವನ. ಜೀವನದಲ್ಲಿ ಸಾಧನೆ ಅತ್ಯಗತ್ಯ. ಪೋಷಕರ ಹಾಗೂ ಶಿಕ್ಷಕರ ಆಶಿರ್ವಾದವಿಲ್ಲದೇ ಸಾಧನೆ ಮಾಡಲು ಆಸಾಧ್ಯ. ವಿಜ್ಞಾನಕ್ಕೆ ನಿಲುಕದ್ದು, ಪ್ರಜ್ಞಾನಕ್ಕೆ ಲಭಿಸುತ್ತದೆ.
ಆಳ್ವಾಸ್ ಸಮಾಜಕಾರ್ಯ ವಿದ್ಯಾರ್ಥಿಗಳಿಂದ ಮಾಹಿತಿ ಕಾರ್ಯಕ್ರಮ
ಮೂಡುಬಿದಿರೆ: ಪುತ್ತಿಗೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆಳ್ವಾಸ್ ಕಾಲೇಜಿನ ತೃತೀಯ ಸಮಾಜಕಾರ್ಯ ವಿದ್ಯಾರ್ಥಿಗಳಾದ ಗುರುರಾಜ್, ನಿತಿನ್, ಹಾರ್ದಿಕ್, ಶ್ರೀದರ್ ಹಾಗೂ ನಿತ್ಯಾನಂದ ಮಾಹಿತಿ ಕಾರ್ಯಕ್ರಮವನ್ನು ಸೋಮವಾರ ನಡೆಸಿಕೊಟ್ಟರು. ಆಳ್ವಾಸ್ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಮದುಮಾಲ ಕೆ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿಧ್ಯಾರ್ಥಿಗಳ ಕಲಿಕೆಯಲ್ಲಿ ಹಾಗೂ ಬೆಳವಣಿಗೆಯಲ್ಲಿ ಪೆÇೀಷಕರ ಪಾತ್ರ ವಿಷಯದ ಕುರಿತು ಮಾತನಾಡಿದರು. ಮಕ್ಕಳದ ಆರೋಗ್ಯದ ಬಗ್ಗೆ ಪೋಷಕರು ಕಾಳಜಿವಹಿಸಬೇಕು. ಮಹಿಳೆಯರು ತಮ್ಮ ಹಕ್ಕಿನ ಬಗ್ಗೆ ಅರಿತು, ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬಹುದು
ಇರುವೈಲಿನಲ್ಲಿ ಮಹಿಳಾ ದಿನಾಚರಣೆ
ಮೂಡುಬಿದಿರೆ: ಹೆಣ್ಣು-ಗಂಡು ಎಂಬ ತಾರತಮ್ಯದ ಅಸಮಾನತೆಯ ಭಾವನೆಯನ್ನು ನಮ್ಮ ಮನೆಯಿಂದಲೇ ಹೊಗಲಾಡಿಸಬೇಕು. ನಮ್ಮ ಜೀವನದ ನಿರ್ಧಾರವನ್ನು ಮತ್ತೊಬ್ಬರು ನಿರ್ಧಾರಿಸಲು ಅವಕಾಶವನ್ನು ನೀಡಬಾರದು.ನಮ್ಮಜೀವನದಲ್ಲಿ ಮುಂದೆ ಏನಾಗಬೇಕೆಂಬ ದೃಢ ಸಂಕಲ್ಪವನ್ನು ಮಾಡಬೇಕೆಂದು ಆಳ್ವಾಸ್ ಕಾಲೇಜಿನ ಸಮಾಜಶಾಸ್ತ್ರದ ಮುಖ್ಯಸ್ಥ ಡಾ.ಮಧುಮಾಲ ತಿಳಿಸಿದರು. ಇರುವೈಲಿನ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಆಳ್ವಾಸ್ ಕಾಲೇಜಿನ ಅಂತಿಮ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಅಂಕಿತಾ ಸಂಯೋಜನೆಯಲ್ಲಿ ಆಯೋಜಿಸಲಾದ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮತ್ತು ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಹಿಳೆಯರನ್ನು ಮತ್ತು ಮಕ್ಕಳನ್ನುದೇಶಿಸಿ
ಜಪಾನ್ ಸಮ್ಮೆಳನದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ತಂಡ
ಮೂಡುಬಿದಿರೆ: ಜಪಾನ್‍ನಲ್ಲಿ ನಡೆದ 8ನೇ `ಇಂಟರ್‍ನ್ಯಾಷನಲ್ ಇಂಜಿನಿಯರಿಂಗ್ ಸಿಂಪೊಸಿಯಮ್ 2019’ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮೂವರು ಪ್ರಾಧ್ಯಾಪಕರು ಒಳಗೊಂಡಂತೆ 18 ವಿದ್ಯಾರ್ಥಿಗಳ ತಂಡ ಭಾಗವಹಿಸಿತು. ಜಪಾನಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ಕುಮಮೊಟೊ ಆಯೋಜಿಸಿದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ 4ನೇ ವರ್ಷದ ವಿದ್ಯಾರ್ಥಿಗಳಿ ವಿಚಾರ ಮಂಡಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಯೋಧ ನಮನ ಕಾರ್ಯಕ್ರಮ
ಮಂಡ್ಯ: ಆಳ್ವಾಸ್ ನುಡಿಸಿರಿ ವಿರಾಸತ್ ಘಟಕ ಮಂಡ್ಯ ಹಾಗೂ ಮಂಡ್ಯ ನಾಗರೀಕರ ವೇದಿಕೆ ಇವರ ಸಹಯೋಗದಲ್ಲಿ ಯೋಧ ನಮನ ಮತ್ತು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಶುಕ್ರವಾರ ಮಂಡ್ಯದ ಸರ್ಕಾರಿ ಮೈದಾನ ದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ ಎಸ್ ಪುಟ್ಟರಾಜು, ಈ ನಾಡಿನ ಮೂಲೆ ಮೂಲೆಗಳಲ್ಲಿ ತಮ್ಮ ವಿದ್ಯಾರ್ಥಿಗಳ ತಂಡದೊಂದಿಗೆ ಮೌಲ್ಯಯುತವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡುತ್ತಿರುವ ಆಳ್ವಾಸ್
ಕನ್ನಡ ಡಿಂಡಿಮ ವಿಚಾರ ಸಂಕಿರಣ
ಮೂಡಬಿದಿರೆ: ಮಕ್ಕಳ ನಿರ್ಲಕ್ಷ್ಯದಿಂದ ಅನಾಥಶ್ರಮ ಸೇರುತ್ತಿರುವ ತಂದೆ ತಾಯಿಯ ಪರಸ್ಥಿತಿಯೆ ಇಂದು ಕನ್ನಡ ಭಾಷೆಗೂ ಬಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು. ಆಳ್ವಾಸ್ ಕನ್ನಡ ಸಂಸ್ಕ್ರತಿ ಅಧ್ಯಯನ ಕೇಂದ್ರ ಮತ್ತು ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕನ್ನಡ ಡಿಂಡಿಮ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಇಂಗ್ಲೀಷ್ ಭಾಷೆ ಮುಖ್ಯ ಆದರೆ ಕನ್ನಡ ಭಾಷೆವನ್ನು ಮರೆಯಬಾರದು. ಶಾಲೆಗಳಲ್ಲಿ ಮಾತ್ರವಲ್ಲ ಹೆತ್ತವರು ಕೂಡ ಬಾಲ್ಯದಿಂದಲೇ ಮಕ್ಕಳಿಗೆ ಕನ್ನಡವನ್ನು ಕಲಿಸಬೇಕು.