News & Events
“ಫಾರ್ಮ್ ಟ್ರೈನಿಂಗ್ ಮತ್ತು ಲರ್ನಿಂಗ್” ಕಾರ್ಯಕ್ರಮ
ಮೂಡುಬಿದಿರೆ: ” ಇಂದಿನ ಯುವ ಜನತೆ ತಮ್ಮ ಸ್ವಂತ ಭೂಮಿಯಲ್ಲಿ ವ್ಯವಸಾಯ ಮಾಡುವುದನ್ನು ಬಿಟ್ಟು, ಇನ್ನೊಬ್ಬರ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿ ಅವರ ಗುಲಾಮರಾಗುತ್ತಿರುವುದು ಖೇದಕರ ಎಂದು ಹವ್ಯಾಸಿ ಪತ್ರಕರ್ತ ವಿಶ್ವಾಸ್ ಭಾರಧ್ವಾಜ್ ಹೇಳಿದರು. ಅರುಣ್ಯ ಫೌಂಡೇಶನ್ ಮಂಗಳೂರು ಹಾಗೂ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಮತ್ತು ಪದವಿ ಕಾಲೇಜಿನ ಕಾಮರ್ಸ್-ಪ್ರೋಫೆಶನಲ್ ವಿಭಾಗದ ಒಡಂಬಡಿಕೆಯ ನೆಲೆಯಲ್ಲಿ ಬಾರಾಡಿ ಬೀಡಿನ ಶೃಂಗ-ಶ್ಯಾಮಾಲದಲ್ಲಿ ಆಯೋಜನೆಗೊಂಡಿದ್ದ “ಫಾರ್ಮ್ ಟ್ರೈನಿಂಗ್ ಮತ್ತು ಲರ್ನಿಂಗ್” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷಿಯನ್ನೇ ನಂಬಿ ಅದರಲ್ಲೇ ಬಂಡವಾಳ
‘’ನೇಚರ್ ಆ್ಯಂಡ್ ಸ್ನೇಕ್’’ ವಿಶೇಷ ಉಪನ್ಯಾಸ
ಮೂಡುಬಿದಿರೆ: ಮನುóಷ್ಯ ತನ್ನ ಸ್ವಾರ್ಥಪರ ಕ್ರಿಯೆಗಳಿಂದ ಪ್ರಕೃತಿಯನ್ನು ನಾಶ ಮಾಡುತ್ತಾ ಬಂದಿದ್ದು, ಇಂದು ನಮ್ಮ ವಾತಾವರಣ ಎನ್ನುವುದು ‘’ವಾತಾರಾವಣ’’ವಾಗಿ ಮಾರ್ಪಟ್ಟಿದೆ ಎಂದು ಪರಿಸರವಾದಿ ಹಾಗೂ sಸರೀಸೃಪ ತಜ್ಞ ಗ್ಝೇವಿಯರ್ ಕಿರಣ್ ಪಿಂಟೋ ತಿಳಿಸಿದರು. ಅವರು ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್‍ನ ವತಿಯಿಂದ ‘’ನೇಚರ್ ಆ್ಯಂಡ್ ಸ್ನೇಕ್’’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ನಮ್ಮ ಪರಿಸರದಲ್ಲಿ ಒಟ್ಟು 84 ಲಕ್ಷಕ್ಕೂ ಅಧಿಕ ಜೀವರಾಶಿಗಳಿದ್ದು, ಮನುಷ್ಯ ಅವುಗಳಲ್ಲಿ
“ಅಲ್ಪಾವಧಿ ತರಬೇತಿ ಕೋರ್ಸಗಳ’’ ಉದ್ಘಾಟನೆ
ಮೂಡುಬಿದಿರೆ: ಮಂತ್ರಕ್ಕೆ ಉಪಯೋಗಿಸದ ಅಕ್ಷರವಿಲ್ಲ, ಔಷಧಿಗೆ ಉಪಯೋಗಿಸದ ಎಲೆಗಳಿಲ್ಲ. ಹಾಗೆಯೇ ಯಾವುದಕ್ಕೂ ಉಪಯೋಗಕ್ಕೆ ಬಾರದ ವ್ಯಕ್ತಿಯಿಲ್ಲ. ಎಲ್ಲರಲ್ಲೂ ಸ್ತುಪ್ಥ ಪ್ರತಿಭೆ ಅಡಗಿರುತ್ತದೆ, ಅದನ್ನು ಹೊರತೆಯುವಲ್ಲಿ ನಾವು ಕಾರ್ಯ ಪ್ರವೃತ್ತರಾಗಬೇಕು ಎಂದು ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಎಂದು ಹೇಳಿದರು. ಆಳ್ವಾಸ್ ಪದವಿ ಕಾಲೇಜಿನಲ್ಲಿ ನಡೆದ ಅಲ್ಪಾವಧಿ ತರಬೇತಿ ಕೋರ್ಸಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. “ಹವ್ಯಾಸವನ್ನೇ ವೃತ್ತಿಯನ್ನಾಗಿಸಬೇಕು. ಯಾವ ವೃತ್ತಿಯೂ ನಿಕೃಷ್ಟವುವಲ್ಲ ಹಾಗೆಯೆ ಶ್ರೇಷ್ಠವುವಲ್ಲ. ಎಲ್ಲಾ ವೃತ್ತಿಗೂ ತನ್ನದೇ ಆದ ಗೌರವವಿದೆ. ನಮ್ಮ
ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಬೇಕು : ಡಾ ಜಯಕುಮಾರ್ ಶೆಟ್ಟಿ
ಮೂಡುಬಿದಿರೆ: ನಾವಿಂದು ಅನಗತ್ಯ ಕಾಲ್ಪನಿಕ ಬಂಧನದಲ್ಲಿ ನಮ್ಮನ್ನು ನಾವು ಬಂಧಿಯನ್ನಾಗಿಸಿಕೊಂಡಿದ್ದೇವೆ. ಅಂತಹ ಸೆರೆಯಿಂದ ನಮ್ಮನ್ನು ನಾವು ಮುಕ್ತವಾಗಿಸಿಕೊಳ್ಳಬೇಕು. ಆಗ ನಾವು ಜೀವನದಲ್ಲಿ ಎತ್ತರದ ಸ್ಥಾನವನ್ನು ತಲುಪಬಹುದು ಎಂದು ಉಜಿರೆಯ ಅರ್ಕುಳ ಚ್ಯಾರಿಟೇಬಲ್ ಟ್ರಸ್ಟ್‍ನ ಕಾರ್ಯದರ್ಶಿ ಡಾ ಜಯಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ಕಾಮರ್ಸ್ ವೃತ್ತಿಪರ ಕೋರ್ಸು ಹಾಗೂ ಅರ್ಕುಳ ಚ್ಯಾರಿಟೇಬಲ್ ಟ್ರಸ್ಟ್‍ನ ಜಂಟಿ ಆಶ್ರಯದಲ್ಲಿ ನಡೆದ “ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ” ಉದ್ಘಾಟಸಿ ಮಾತನಾಡಿದರು. “ಪದವಿ ವಿದ್ಯಾಭ್ಯಾಸ ಪಡೆಯುವಾಗಲೇ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ
ಮಿಜಾರು, ನ.27: `ಇಂಜಿನಿಯರಿಂಗ್ ಎಂಬುದು ತುಂಬಾ ಸೃಜನಶೀಲ ಕ್ಷೇತ್ರ. ಇಂಜಿನಿಯರ್‍ಗಳಾದವರು ತಮ್ಮ ಸ್ಪೆಶಲೈಸೇಶನ್‍ಗಳಿಗೆ ಸೀಮಿತರಾಗದೇ ಈ ವಿಸ್ತಾರ ಕ್ಷೇತ್ರದ ಎಲ್ಲಾ ಆಯಾಮಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ನಾವು ಕಲಿತ ವಿಷಯಗಳಿಗಿಂತ ವಿಭಿನ್ನವಾದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅಂತಹ ಯಾವುದೇ ಸಂದರ್ಭ ಬಂದರೂ ಅದನ್ನು ಸ್ವೀಕರಿಸಿ ಅದರಲ್ಲಿ ನಮ್ಮ ಕಾರ್ಯಕ್ಷಮತೆಯನ್ನು ಸಾಬೀತುಪಡಿಸುವ ಅಗತ್ಯತೆ ಇರುತ್ತದೆ’ ಎಂದು ಸುರತ್ಕಲ್ ಎನ್‍ಐಟಿಕೆಯ ನಿರ್ದೇಶಕ ಡಾ.ಕರನಂ ಉಮಾಮಹೇಶ್ವರ ಹೇಳಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಶನ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್
ಆಳ್ವಾಸ್ ವಿಕಿಪೀಡಿಯ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಕೊಡುಗೆ
ಮೂಡುಬಿದಿರೆ: ಸ್ಥಳೀಯ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ವಿಷಯಗಳನ್ನು ವಿಕಿಪೀಡಿಯಾದಲ್ಲಿ ಸೇರಿಸುವ ಸಲುವಾಗಿ ಭಾರತೀಯ ವಿಕಿ ಸಮುದಾಯಗಳಿಗೆ ವಿಕಿಮೀಡಿಯ ಫೌಂಡೇಶನ್ ಮತ್ತು ಗೂಗಲ್ ಸದಾ ಬೆಂಬಲ ನೀಡುತ್ತಿದೆ. ಈ ನಿಟ್ಟಿನಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆ್ಯಂಡ್ ಸೊಸೈಟಿಯ ಸಹಕಾರದೊಂದಿಗೆ ಪ್ರಾಜೆಕ್ಟ್ ಟೈಗರ್ 2.0 ಯೋಜನೆಯಡಿಯಲ್ಲಿ ವಿಕಿಸಮುದಾಯಗಳಿಗೆ ಸ್ಥಳೀಯ ಮಾಹಿತಿಯನ್ನು ಸೇರಿಸಬೇಕೆಂಬ ಉದ್ದೇಶದಿಂದ ಆಯ್ದ ವಿಕಿ ಸಂಪಾದಕರಿಗೆ ಲ್ಯಾಪ್‍ಟಾಪ್ ಮತ್ತುಇಂಟರ್ನೆಟ್ ವಿತರಿಸಿ ಪ್ರೋತ್ಸಾಹಿಸಲಾಯಿತು. ಆಳ್ವಾಸ್ ವಿಕಿಪೀಡಿಯಾ ಅಸೋಸಿಯೇಷನ್ ವಿದ್ಯಾರ್ಥಿಗಳು ಕನ್ನಡ ಹಾಗೂ ತುಳು ವಿಕಿಪೀಡಿಯಾಕ್ಕೆ ಮಾಹಿತಿಗಳನ್ನು ಸೇರಿಸುತ್ತಿದ್ದಾರೆ. ಪ್ರಾಜೆಕ್ಟ್
ಆಳ್ವಾಸ್ ಬ್ಲಂಡ್ ಬ್ಯಾಂಕ್ ಕಾರ್ಯಾಗಾರ
ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್‍ನ ಭಾಗವಾಗಿರುವ ಆಳ್ವಾಸ್ ರೋಟರಿ ಬ್ಲಡ್ ಬ್ಯಾಂಕ್‍ನಿಂದ ಒಂದು ದಿನದ ಕಾರ್ಯಾಗಾರವನ್ನು ಆಳ್ವಾಸ್ ಕಾಲೇಜು ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಾಗಾರವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿದ್ದ ಭಾರತೀಯ ವಾಯು ಸೇನೆಯ ಅಧಿಕಾರಿ ರಾಹುಲ್ ಶಿಂಧೆ ರಕ್ತದಾನ ಒಂದು ಉತ್ತಮ ಸಾಮಾಜಿಕ ಸೇವಾ ಕೈಂಕರ್ಯ ಎಂದರು. ಭಾರತದ ಅಂಗಾಂಗ ದಾನ ಸಂಸ್ಥೆ(ಆರ್ಗನ್ ಡೊನೇಶನ್ ಇಂಡಿಯಾ ಫೌಂಡೇಶನ್)ಯ ಅಧ್ಯಕ್ಷ ಲಾಲ್ ಗೊಯೆಲ್ ಮಾತನಾಡಿ, ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ
ಕ್ರೀಡೆ ಆರೋಗ್ಯಕರ ಮನೋರಂಜನೆ: ಡಾ. ವಿನಯ್ ಆಳ್ವ
ಮೂಡುಬಿದಿರೆ: ಕ್ರೀಡಾಜ್ಯೋತಿಯು ಕತ್ತಲೆಯನ್ನು ದೂರ ಮಾಡುತ್ತದೆ. ವಿದ್ಯಾರ್ಥಿಗಳು ಮಾಡುವ ಪ್ರಮಾಣವು ಒಗ್ಗಟ್ಟು ಮತ್ತು ಸಾಮರಸ್ಯತೆಯನ್ನು ಸೂಚಿಸುತ್ತದೆ. ಕ್ರೀಡಾ ದಿನದ ಪ್ರತಿಯೊಂದು ವಿಚಾರಗಳು ಅದರದ್ದೇ ಆದ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಹೊಂದಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ. ವಿನಯ್ ಆಳ್ವ ಹೇಳಿದರು. ಮೂಡುಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ ಆಳ್ವಾಸ್ ಕನ್ನಡ ಮಾಧ್ಯಮ ಹಾಗೂ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯು ಆರೋಗ್ಯಕರ ಮನೋರಂಜನೆ. ದೇಹದ ಸ್ವಾಸ್ಥ್ಯತೆಯೊಂದಿಗೆ ಮನಸಿಗೆ
ಕಲಿಸುವಿಕೆಯಲ್ಲಿ ಕಲಿಯುವುವಿಕೆ ಹೆಚ್ಚು: ನಾಡೋಜ ಡಾ. ಬಿ ಟಿ. ರುದ್ರೇಶ್
ಮೂಡುಬಿದಿರೆ: ಯಶಸ್ಸು ಗಳಿಸುವುದು ಯಾವುದನ್ನು ಮಾಡಬೇಕುನ್ನುವುದರಿಂದ ಅಲ್ಲ ಬದಲಾಗಿ ಏನನ್ನು ಮಾಡಬಾರದು ಎಂದು ತಿಳಿದುಕೊಳ್ಳುವುದರಿಂದ. ಕಲಿಕೆಯ ಪೂರ್ಣತೆಯು ಕೇಳುವುದಂಕ್ಕಿಂತಲೂ ಕಲಿಸುವಿಕೆಯಲ್ಲಿ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕಲಿಸುವಂತವರಾಗಬೇಕು ಎಂದು ಕರ್ನಾಟಕ ಹೋಮಿಯೋಪತಿ ಮಂಡಳಿಯ ಅಧ್ಯಕ್ಷ, ನಾಡೋಜಡಾ. ಬಿ ಟಿ. ರುದ್ರೇಶ್ ಹೇಳಿದರು. ಮಿಜಾರಿನ ಆಳ್ವಾಸ್ ಹೋಮಿಯೊಪತಿ ಮೆಡಿಕಲ್ ಕಾಲೇಜಿನ ವತಿಯಿಂದ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಂಕಗಳು ಅಥವಾ ರ್ಯಾಂಕ್ ಮಾನ್ಯತೆಯನ್ನು ತಂದುಕೊಡುವುದಿಲ್ಲ, ಸಮಾಜದಲ್ಲಿ ವೈದ್ಯನ ಕಾರ್ಯಕ್ಷಮತೆಯನ್ನು ಮಾತ್ರ ಜನರು ಗುರುತಿಸುತ್ತಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ಸ್ಟಾರ್ಟ್‍ಅಪ್
* ಉದ್ಯಮದ ಜೊತೆಗೆ ಸಾಮಾಜಿಕ ಕಾಳಜಿ * ಬಡ ವಿದ್ಯಾರ್ಥಿಗಳಿಗೆ ನೆರವಿನ ಉದ್ದೇಶ ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂರ್ಟಪ್ರನಶಿಪ್ ಡೆವಲೆಪ್ ಮೆಂಟ್ ಸೆಲ್‍ನ ವತಿಯಿಂದ ಸ್ಟೂಡೆಂಟ್ ಸ್ಟಾಟ್-ಅಪ್ ನಲ್ಲಿ `ಹೋಮ್ಜಾ’ ಎನ್ನುವ ಕಂಪೆನಿಯೊಂದನ್ನು ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸ್ಥಾಪಿಸಿ ಯುವ ಉದ್ಯಮಿಗಳಿಗೆ ಸ್ಪೂರ್ತಿಯಾಗಿದ್ದಾರೆ. ಉದ್ಯಮ, ಉದ್ಯೋಗ ಸೃಷ್ಟಿಯ ಜೊತೆಗೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ದೃಷ್ಟಿಯಿಂದ ಕಂಪೆನಿಯನ್ನು ಮೂಡುಬಿದಿರೆಯಲ್ಲಿ ಸ್ಥಾಪಿಸಿದ್ದಾರೆ. ಯುವರ್ ಪರ್ಪೆಕ್ಟ್ ಹೋಮ್ ಮೇಕರ್ ಅಡಿಬರಹದೊಂದಿಗೆ `ಹೋಮ್ಜಾ’ ಕಂಪೆನಿಯನ್ನು ವಿದ್ಯಾರ್ಥಿ ಸ್ರಜನ್‍ದಾಸ್ ಸ್ಥಾಪಿಸಿದ್ದು, ಮಂಗಳವಾರ ಕಾಲೇಜಿನ