News & Events
ಆಳ್ವಾಸ್ ಕಾಲೇಜಿನಲ್ಲಿ ನೂತನ ಒಡಂಬಡಿಕೆಗೆ ಸಹಿ
ಮೂಡುಬಿದಿರೆ: ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಹಾಗೂ ಪದವಿ ಕಾಲೇಜಿನ ಕಾಮರ್ಸ್ ಪ್ರೊಫೆಶನಲ್ ವಿಭಾಗಗಳ ನಡುವೆ ನೂತನ ಒಡಂಬಡಿಕೆಗೆ ಸಹಿ ಹಾಕಲಾಯಿತು. ಒಡಂಬಡಿಕೆಯ ಮೂಲ ಉದ್ದೇಶ ಶೈಕ್ಷಣಿಕ ವಿನಿಮಯವಾಗಿದ್ದು, ಇದು ವಿದ್ಯಾರ್ಥಿಗಳ ವೃತ್ತಿ ಜೀವನ ಹಾಗೂ ಕೌಶಲ್ಯಗಳ ಬೆಳವಣಿಗೆ ಸಹಕಾರಿಯಾಗಲಿದೆ. ಒಡಂಬಡಿಕೆಯ ಪ್ರಕಾರ ಕಾಮರ್ಸ್ ವಿದ್ಯಾರ್ಥಿಗಳಿಗೆ ಅಲ್ಪಾವಧಿ ಪತ್ರಿಕೋದ್ಯಮ ಸಂಬಂಧಿತ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬೇಸಿಕ್ ಅಕೌಟಿಂಗ್‍ನಂತಹ ವಾಣಿಜ್ಯ ಸಂಬಂಧಿತ ಕೋರ್ಸ್‍ಗಳನ್ನು ನೀಡಲಾಗುತ್ತದೆ. ಇದರೊಂದಿಗೆ ವಿದ್ಯಾರ್ಥಿಗಳಿಗೆ ಫೋಟೋಗ್ರಫಿ, ನಿರೂಪಣೆ, ಡಿಜಿಟಲ್ ಮಾರ್ಕೆಟಿಂಗ್‍ಳಂತಹ ವಾರಾಂತ್ಯ ತರಗತಿಗಳನ್ನು
‘ಆಳ್ವಾಸ್ ದೀಪಾವಳಿ’
ವಿದ್ಯಾಗಿರಿ: ವಿದ್ಯಾರ್ಥಿಗಳಾದವರು ಕಲಿಕೆಯಿಂದಾಗಿ ತಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಮರೆಯಬಾರದು, ಅವುಗಳನ್ನು ಉಳಿಸಿ ಬೆಳೆಸಿಕೊಂಡು ಸಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದರು. ಆಳ್ವಾಸ್ ಕಾಲೇಜಿನ ನುಡಿಸಿರಿ ವೇದಿಕೆಯಲ್ಲಿ ನಡೆದ ‘ಆಳ್ವಾಸ್ ದೀಪಾವಳಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ತಮ್ಮ ಊರು, ಭಾಷೆ, ದೇಶದ ಕುರಿತಂತೆ ಅಭಿಮಾನ ಬೆಳೆಸಿಕೊಳ್ಳಬೇಕು. ಜಾತಿ, ಧರ್ಮ, ಬೇದ ಭಾವಗಳನ್ನು ತೊರೆದು ಒಂದಾಗಿ ಹಬ್ಬಗಳನ್ನು ಆಚರಿಸುತ್ತಾ ಸಾಮರಸ್ಯದ ಬದುಕನ್ನು ನಡೆಸಬೇಕು ಎಂದರು. ಆಳ್ವಾಸ್ ದೀಪಾವಳಿ ಅಂಗವಾಗಿ
ರಾಜೀವ್‍ಗಾಂಧಿ ಆರೋಗ್ಯ ವಿವಿ 20ನೇ ವಾರ್ಷಿಕ ಅಥ್ಲೆಟಿಕ್ ಆಳ್ವಾಸ್ ಹಾಸ್ಪಿಟಲ್ ಅಡ್ಮಿಮಿನಿಷ್ಟ್ರೇಶನ್ ಕಾಲೇಜು ಮುನ್ನಡೆ ನಾಲ್ಕು ಹೊಸ ಕೂಟ ದಾಖಲೆ
ಮೂಡುಬಿದಿರೆ: ಬೆಂಗಳೂರು ರಾಜೀವ್‍ಗಾಂಧಿ ಆರೋಗ್ಯ ವಿವಿ ಮತ್ತು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿಮಂಗಳವಾರ ಪ್ರಾರಂಭಗೊಂಡಿರುವ 20ನೇ ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನ ಮೊದಲ ದಿನ ಆಳ್ವಾಸ್ ಹಾಸ್ಪಿಟಲ್ ಅಡ್ಮಿಮಿನಿಷ್ಟ್ರಶನ್ ಕಾಲೇಜು 71 ಅಂಕಗಳನ್ನು ಗಳಿಸಿ ಮುನ್ನಡೆ ಸಾಧಿಸಿದೆ. ಸುಳ್ಯ ಕೆ.ವಿ.ಜಿ ಡೆಂಟಲ್ ಕಾಲೇಜು 21 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಮೊದಲ ದಿನ ಒಟ್ಟು ನಾಲ್ಕು ಹೊಸ ಕೂಟ ದಾಖಲೆಗಳಾಗಿವೆ. ಮಹಿಳಾ ವಿಭಾಗದ ಡಿಸ್ಕಸ್ ತ್ರೋನಲ್ಲಿ ಆಳ್ವಾಸ್ ಹಾಸ್ಪಿಟಲ್ ಅಡ್ಮಿಮಿನಿಷ್ಟ್ರೇಶನ್ ಕಾಲೇಜಿನ ಅನಿಶಾ ದಹಿಯಾ 36.89
ರಾಜೀವ್‍ಗಾಂಧಿ ಆರೋಗ್ಯ ವಿವಿ 20ನೇ ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ಚಾಲನೆ
ಮೂಡುಬಿದಿರೆ: ಬೆಂಗಳೂರು ರಾಜೀವ್‍ಗಾಂಧಿ ಆರೋಗ್ಯ ವಿವಿ ಮತ್ತು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂರು ದಿನಗಳು ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯಲಿರುವ 20ನೇ ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್‍ಶಿಪ್ 2019 ಮಂಗಳವಾರ ಆರಂಭಗೊಂಡಿತು. ರಾಜೀವ್‍ಗಾಂಧಿ ವಿವಿಯ ರಿಜಿಸ್ಟ್ರಾರ್ ಶಿವಾನಂದ ಕಪಾಶಿ ಕ್ರೀಡಾಕೂಟವನ್ನು ಉದ್ಘಾಟಿಸಿ, ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ತಮ್ಮ ಸಾಧನೆ ಮಾಡಬೇಕು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಮಿಂಚಬೇಕೆಂದು ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜೀವ್‍ಗಾಂಧಿ ಆರೋಗ್ಯ ವಿವಿಯ ಡೆಪ್ಯುಟಿ
ಆಳ್ವಾಸ್‍ನ ವೈಷ್ಣವಿ ಗೋಪಾಲ್‍ಗೆ ರಾಜ್ಯಮಟ್ಟದ ಎನ್‍ಸಿಸಿ ಚಿನ್ನದ ಪದಕ
ಮೂಡುಬಿದಿರೆ: ಎನ್‍ಸಿಸಿ ಜ್ಯೂನಿಯರ್ ಅಂಡರ್ ಆಫೀಸರ್, ಆಳ್ವಾಸ್ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ರಾಜ್ಯಮಟ್ಟದ ಉತ್ತಮ ಎನ್‍ಸಿಸಿ ಕೆಡೆಟ್- ಚಿನ್ನದ ಪದಕವನ್ನು ಪಡೆದಿರುತ್ತಾರೆ. ದೆಹಲಿಯಲ್ಲಿ 2020ರ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಆಯ್ಕೆ ಶಿಬಿರದ ಹಿರಿಯ ವಿಭಾಗದಲ್ಲಿ ಬೆಸ್ಟ್ ಕೆಡೆಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ. ಮೂಡುಬಿದಿರೆಯಲ್ಲಿ ನಡೆದ ಮೂರು ಹಂತದ ಶಿಬಿರದಲ್ಲಿ ಪ್ರಥಮ ಸ್ಥಾನ ಪಡೆದು, ಬೆಂಗಳೂರಿನ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದರು. ಈಕೆ ಶೈಕ್ಷಣಿಕ,
ಇನ್‍ಸಿಗ್ನಿಯಾ-ಯುವಜನೋತ್ಸವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಚಾಂಪಿಯನ್
ಮೂಡುಬಿದಿರೆ: ಧಾರವಾಡದ ಎಸ್.ಡಿ.ಎಮ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಇನ್ ಸಿಗ್ನಿಯಾ-ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ 20ನೇ ಅಂತರ್ ಕಾಲೇಜು ಯುವಜನೋತ್ಸವದಲ್ಲಿ ಮೂಡುಬಿದಿರೆ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜ್ ಚಾಂಪಿಯನ್ ಪ್ರಶಸ್ತಿ ಪಡೆಯಿತು. ವೈಯಕ್ತಿಕ ವಿಭಾಗದ ಫೆÇಟೋಗ್ರಾಫಿ ಸ್ಪರ್ಧೆಯಲ್ಲಿ ಆಳ್ವಾಸ್ ಮೆಕ್ಯಾನಿಕಲ್ ವಿಭಾಗದ ವಿಷ್ಣು ವಿನೋದ್ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ಐ.ಎಸ್.ಸಿ ವಿಭಾಗ ನಿಖಿಲ್ ಅಚಾರ್ಯ ಪ್ರಥಮ ಸ್ಥಾನ ಪಡೆದಿದ್ದಾರೆ. ಜಾನಪದ ಅರ್ಕೆಸ್ಟ್ರಾದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಪ್ರಥಮ, ಏಕಾಂಕ ನಾಟಕದಲ್ಲಿ ಪ್ರಥಮ, ತಂಡ ವಿಭಾಗದ ಡೊಳ್ಳು ಕುಣಿತ, ಮೈಮ್ ಹಾಗೂ
ಆಳ್ವಾಸ್ ರೋಷ್ಟ್ರಂ ಸರಣಿ ಉಪನ್ಯಾಸ
ಮೂಡುಬಿದಿರೆ: ತನ್ನ ಮೇಲೆ ನಂಬಿಕೆ ಇಲ್ಲದಿರುವವನಿಗೆ ಇನ್ನೊಬ್ಬರ ಮೇಲೆಯೂ ನಂಬಿಕೆ ಇರುವುದಿಲ್ಲ. ನಾವು ಮಾಡುವ ಕೆಲಸಗಳ ಸಾದಕ-ಭಾದಕಗಳನ್ನು ಅವಲೋಕಿಸಬೇಕು. ವಿದ್ಯೆಯ ಜೊತೆ ವಿನಯವು ನಮ್ಮದಾದರೆ ನಾವು ವ್ಯಕ್ತಿ ಪರಿಪೂರ್ಣ ವ್ಯಕ್ತಿಗಳಾಗುತ್ತೇವೆ ಎಂದು ಗುಜರಾತ್ ರಾಜ್‍ಕೋಟ್‍ನ ರಾಷ್ಟ್ರಕಥಾ ಶಿಬಿರದ ಸ್ವಾಮಿ ಧರ್ಮಬಂದು ನುಡಿದರು. ಆಳ್ವಾಸ್ ರೋಷ್ಟ್ರಂ ಕ್ಲಬ್‍ನ ವತಿಯಿಂದ ನಡೆದ ಸರಣಿ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾವು ಪ್ರತಿಯೊಬ್ಬರೊಂದಿಗೆ ಬೆರೆತು ಬಾಳಬೇಕು. ಅವಾಗ ಜ್ಞಾನದ ಹಂಚಿಕೆಯಾವುದಲ್ಲದೆ ಅನೇಕ ವಿಷಯಗಳ ಮನವರಿಕೆ ಅಗುತ್ತದೆ ಎಂದರು. ಮ್ಯಾನೆಜಿಂಗ್ ಟ್ರಸ್ಟಿ
ಅರುವ ಕೊರಗಪ್ಪ ಶೆಟ್ಟಿ ಕಲಾ ಜೀವನ ಕೃತಿಬರಹ ಮತ್ತು ಚಿತ್ರ ಆಹ್ವಾನ
ಮೂಡುಬಿದಿರೆ: ತೆಂಕುತಿಟ್ಟಿನ ಅಗ್ರಗಣ್ಯ ಕಲಾವಿದರಲ್ಲಿ ಒಬ್ಬರಾದ ಅರುವ ಕೊರಗಪ್ಪ ಶೆಟ್ಟಿಯವರು ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಕಳೆದ ಆರು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದವರು. ಸದ್ಯ 80ರ ಹರೆಯದ ಹೊಸ್ತಿನಲ್ಲಿರುವ ಇವರ ಕುರಿತು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಲಾ ಜೀವನಕೃತಿಯನ್ನು ಪ್ರಕಟಿಸುವ ಹಂಬಲದಲ್ಲಿದೆ. ಆದುದರಿಂದ ಅರುವ ಕೊರಗಪ್ಪ ಶೆಟ್ಟಿಯವರ ಅಭಿಮಾನಿಗಳು ಹಾಗೂ ಆಸಕ್ತರು ಇವರ ಕುರಿತು ಮೌಲ್ಯಧಾರಿತ ಲೇಖನ ಹಾಗೂ ಅವರ ಯಕ್ಷಗಾನ ಪಾತ್ರಗಳ ಭಾವಚಿತ್ರವನ್ನು ಮಿಂಚAಚೆ ಚಿಡಿuvಚಿ80@gmಚಿiಟ.ಛಿom ಗೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ,
ಎನ್ ಸಿ.ಸಿ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭ
ಮೂಡುಬಿದಿರೆ: ಎನ್ ಸಿ.ಸಿ ಯಲ್ಲಿ ದೊರೆತಂತಹ ಶಿಕ್ಷಣವನ್ನು ಮಕ್ಕಳು ಎಂದಿಗೂ ಮರೆಯದೆ ತಮ್ಮ ಜೀವನದುದ್ದಕ್ಕೂ ಅನುಸರಿಸಬೇಕು ಆಗ ಉತ್ತಮ ನಾಗರೀಕನಾಗಿ ಬೆಳೆಯಲು ಸಾಧ್ಯ ಎಂದು ಕ್ಯಾಂಪ್ ಕಮಾಂಡೆಂಟ್ ಕರ್ನಲ್ ಬದ್ರಿಪ್ರಸಾದ್ ಹೇಳಿದರು. ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದ ಆಳ್ವಾಸ್ ಕಾಲೇಜಿನ ಎನ್.ಸಿ.ಸಿ ವಿಭಾಗದಿಂದ ಆಯೋಜಿಸಲಾದ ೨೧ ಕರ್ನಾಟಕ ಬಿ.ಎನ್.ಸಿ.ಸಿ ಉಡುಪಿ ಇದರ ಹತ್ತು ದಿನಗಳ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾಗಿರಿ ಆವರಣದಲ್ಲಿ ಈ ಬಾರಿ ನಡೆಯುತ್ತಿರುವ ಮೂರನೆ ಕ್ಯಾಂಪ್ ಇದಾಗಿದ್ದು,
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ
ಮೂಡುಬಿದಿರೆ: ಒಂದು ಭಾಷೆಯನ್ನು ಪ್ರೀತಿಸುವುದು ಎಂದರೆ ಬೇರೆ ಭಾಷೆಯನ್ನು ನಿರಾಕರಿಸುವುದಲ್ಲ. ಪ್ರತಿಯೊಂದು ಭಾಷೆಗೆ ಅದರದ್ದೇ ಮಹತ್ವ ಇದೆ. ನೀಟ್ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕೂಡ ಒಂದು ಅವಿಭಾಜ್ಯ ಅಂಗವೆಂದು ಪರಿಗಣಿಸಿದಲ್ಲಿ, ಅದು ಕನ್ನಡ ಉಳಿವಿಗೆ ಸಹಕಾರಿಯಾಗುತ್ತದೆ ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಸುಧಾರಾಣಿ ಹೇಳಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕನ್ನಡ ಸಂಘದ ವತಿಯಿಂದ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಋತುಮಾನ ವೆಬ್‍ತಾಣ, ಬುಕ್ ಬ್ರಹ್ಮ, ಮೈಲಾಗ್ ಬುಕ್, ರಾಗಕ್ಷರದಂತಹ