News & Events
ಮರೆಯಾಗುತ್ತಿವೆ ಮಾನವೀಯ ಮೌಲ್ಯಗಳು
• ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಜಸ್ಟೀಸ್ ಸಂತೋಷ್ ಹೆಗ್ಡೆ ವಿಷಾದ • ಭ್ರಷ್ಟಾಚಾರ ನಿರ್ಮೂಲನೆಗೆ ಕರೆ ವಿದ್ಯಾಗಿರಿ: ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕಾರ ಹಾಗೂ ಸಂಪತ್ತುಗಳೆಂಬ ಮೋಹದಲ್ಲಿ ಸಿಲುಕಿದ್ದು, ಜೀವನದಲ್ಲಿ ತೃಪ್ತಿ ಹಾಗೂ ಮಾನವೀಯತೆಗಳೆಂಬ ಮೌಲ್ಯಗಳನ್ನು ಮರೆಯುತ್ತಿದ್ದಾರೆ ಎಂದು ನಿವೃತ್ತ ಲೋಕಾಯುಕ್ತ ಜಸ್ಟೀಸ್ ಎನ್. ಸಂತೋಷ್ ಹೆಗ್ಡೆ ವಿಷಾದಿಸಿರು. ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಆಡಿಟೋರಿಯಂನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ವೇದಿಕೆಯಡಿಯಲ್ಲಿ ನಡೆದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವನಲ್ಲಿ ಬಯಕೆಗಳು ಸಾಮಾನ್ಯ, ಆದರೆ, ಇಂದಿನ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆವೆ ಮಣ್ಣಿನ ಕಲಾಕೃತಿ ಕಾರ್ಯಾಗಾರ
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲಲಿತಾ ಕಲಾ ಕ್ಲಬ್ ವತಿಯಿಂದ `ಆವೆ ಮಣ್ಣಿನ ಕಲಾಕೃತಿಗಳ ಒಂದು ದಿನದ ಕಾರ್ಯಗಾರ ಅಯೋಜಿಸಲಾಯಿತು. ಕಲಾವಿದ ವೆಂಕಿ ಪಲಿಮಾರು ಉಡುಪಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಮಣ್ಣಿನ ಕಲಾಕೃತಿಗಳಿಗೆ ಇಂದು ಅಗಾಧವಾದ ಬೇಡಿಕೆಯಿದೆ. ವಿದ್ಯಾರ್ಥಿಗಳು ಮಣ್ಣಿನ ಹಾಗೂ ಇತರ ಕಲಾಕೃತಿಗಳ ಬಗ್ಗೆ ಹೆಚ್ಚಿನ ಆಸಕ್ತಿವಹಿಸಬೇಕು ಎಂದರು. ಕಾಲೇಜಿನ ಅನೇಕ ವಿದ್ಯಾರ್ಥಿಗಳಿಗೆ ಮಣ್ಣಿನ ಬಳಕೆಯನ್ನು ಕಲೆಯಲ್ಲಿ ಹೇಗೆ ಬಳಸಲಾಗುತ್ತದೆ ಮತ್ತು ಅದನ್ನು ಯಾವ ರೀತಿಯಲ್ಲಿ ಹದ ಮಾಡಬಹುದೆಂದು ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಮಣ್ಣಿನ
`ವೈಲ್ಡ್ ಇನ್ ಲೆನ್ಸ್’
ವಿದ್ಯಾಗಿರಿ: ನಾವು ಆಯ್ಕೆ ಮಾಡಿವ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕು. ಆಗಲೇ ನಾವು ಅತ್ಯಧಿಕ ಜ್ಞಾನವನ್ನು ಪಡೆದುಕೊಳ್ಳಬಹುದು. ಛಾಯಾಗ್ರಹಣವೆನ್ನುವುದೊಂದು ಹವ್ಯಾಸವಾದ್ದರಿಂದ ಅದನ್ನು ಬದುಕಿಗಾದಾರವಾಗುವಂತೆ ಬೆಳೆಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ರೊಟೇರಿಯನ್ ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ನಡೆದ `ವೈಲ್ಡ್‍ಇನ್ ಲೆನ್ಸ್’ ಎಂಬ ಎರಡು ದಿನದ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿಭಾಗದ ವಿದ್ಯಾರ್ಥಿಗಳಾದ ವಿಶ್ವತೇಜ್.ಎಸ್.
“ಪೋಲಿಸ್ ಕಾನ್ಸ್ಟೇಬಲ್ ಮತ್ತು ಪೋಲೀಸ್ ಸಬ್‍ಇನ್ಸ್‍ಪೆಕ್ಟರ್ ನೇಮಕಾತಿ ಕಾರ್ಯಗಾರ’’
ವಿದ್ಯಾಗಿರಿ:ಸಾಧನೆ ಎಂಬುದು ಪೂರ್ವ ಸಿದ್ಧತೆಗಳು ಪ್ರತಿಫಲ. ಯುವಜನತೆ ಸಕಲ ಪೂರ್ವ ಸಿದ್ದತೆಯೊಂದಿಗೆ ಸಾಧನೆಯ ದಾರಿಯಲ್ಲಿ ಅಚಲರಾಗಿ ಸಾಗಬೇಕು ಎಂದು ಮೂಡಬಿದಿರೆ ಪೋಲೀಸ್ ಠಾಣಾ ಇನ್ಸ್‍ಪೆಕ್ಟರ್ ಬಿ ಎಸ್ ದಿನೇಶ್‍ಕುಮಾರ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮೂಡಬಿದಿರೆ ಪೋಲಿಸ್ ಠಾಣಾ ವತಿಯಿಂದ“ಪೋಲಿಸ್ ಕಾನ್ಸ್ಟೇಬಲ್ ಮತ್ತು ಪೋಲೀಸ್ ಸಬ್‍ಇನ್ಸ್‍ಪೆಕ್ಟರ್ ನೇಮಕಾತಿ” ಕುರಿತಂತೆ ಮಾಹಿತಿ ಕಾರ್ಯಗಾರವನ್ನು ಆಯೋಜಿಸಲಾಯಿತು. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪೋಲೀಸ್ ಇಲಾಖೆಯ ಉದ್ಯೋಗದಲ್ಲಿ ಸೇರಬೇಕು. ಸೇನೆಯವರಿಗೆ ಮೀಸಲಾಗಿದ್ದ ಕ್ಯಾಂಟಿನ್ ಸೌಲಭ್ಯ ಈಗ ಪೋಲೀಸ್ ಇಲಾಖೆಗೂ ಒದಗಿಸಲಾಗಿದೆ
‘ಬೇಟಿ ಬಚವೋ ಬೇಟಿ ಪಡಾವೊ’ ಕಾರ್ಯಕ್ರಮ
ವಿದ್ಯಾಗಿರಿ: ದಿನದಿಂದ ದಿನೇ ಬೆಳವಣಿಗೆಯತ್ತ ಸಾಗುತ್ತಿರುವ ಜಗತ್ತಿನಲ್ಲಿ ರಕ್ಷಣೆಯೆಂಬುದು ಮಾಯವಾಗುತ್ತಿದೆ. ಅದು ಕೇವಲ ಹೆಣ್ಣಿನ ರಕ್ಷಣೆ ಮಾತ್ರವಲ್ಲ, ಮಕ್ಕಳ ರಕ್ಷಣೆ, ಪರಿಸರರಕ್ಷಣೆ, ದೇಶದ ರಕ್ಷಣೆ ಹೀಗೆ ಎಲ್ಲಾ ವಿಭಾಗದಲ್ಲೂ ರಕ್ಷಣೆಯ ಕೊರತೆ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಆಳ್ವಾಳ್ ಪದವಿ ಕಾಲೇಜಿ ಪ್ರಾಂಶುಪಾಲ ಕುರಿಯನ್ ತಿಳಿಸಿದರು. ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗವು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಆಯೋಜಿಸಿದ್ದ ‘ಬೇಟಿ ಬಚವೋ ಬೇಟಿ ಪಡಾವೋ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಗು ಜನ್ಮತಾಳುವ ಮುನ್ನ ಹೆಣ್ಣೋ ಗಂಡೋ
ಅತಿಥಿ ಉಪನ್ಯಾಸ
ಮೂಡುಬಿದಿರೆ: ‘ದೇಶದ ಭದ್ರತೆ ಎನ್ನುವುದು ಸಂವಿದಾನವನ್ನೊಳಗೊಂಡ ದೇಶದ ಹಿತಾಸಕ್ತಿಯ ಕೀಲಿಕೈ ಇದ್ದಂತೆ” ಎಂದು ಕೋಸ್ಟ್‍ಗಾರ್ಡ ಕಮಾಂಡರ್ ಡಿ.ಜಿ.ಐ ಎಸ್.ಎಸ್ ದಸಿಲ್ಲ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ರೋಷ್ಟ್ರಮ್ ವೇದಿಕೆ ಅಡಿಯಲ್ಲಿ ನಡೆದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ಭದ್ರತೆ ಎನ್ನುವಂತದ್ದು ಒಂದು ದೇಶದ ಅಭಿವೃದ್ದಿಯ ಮೂಲ ತಳಹದಿ. ದೇಶದ ಭದ್ರತೆ ಪ್ರತಿಯೊಬ್ಬ ಪ್ರಜೆಯ ಭದ್ರತೆಯ ಮೇಲು ನಿಗವಹಿಸುದಾಗಿರುತ್ತದೆ ಎಂದರು. ಇತ್ತೀಚಿನ ದಿನಗಳಲ್ಲಿ ದೇಶದ ಸುಭದ್ರತೆಯನ್ನು ಹಾಳುಮಾಡಲು ಯುವಜನರನ್ನು ಉಪಕರಣವಾಗಿ ಬಳಸಿ ಇವರನ್ನು ಗಾಂಜ, ಅಫೀಮುಗಳಂತಹ
ಸಂಯೋಜಿತ ಯೋಜನೆಗಳಿಂದ ಆತ್ಮಹತ್ಯೆ ತಡೆ ಸಾಧ್ಯ: ಡಾ. ರಮೀಲಾ ಶೇಖರ್
ಮೂಡುಬಿದಿರೆ: ತಂತ್ರಜ್ಞಾನಗಳು ಬೆಳೆದಂತೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಾಮಾಜಿಕ ಜಾಲತಾಣಗಳು ದೇಹದ ಅಸ್ವಸ್ಥತೆಗೆ ಕಾರಣವಾಗುವುದು ಮಾತ್ರವಲ್ಲದೆ ಮಾನಸಿಕ ಘರ್ಷಣೆಗಳಿಗೂ ಕಾರಣವಾಗಿದೆ. ನಕಾರಾತ್ಮಕ ಅಲೋಚನೆಗಳು ಭಾವನೆಗಳನ್ನು ಹಂಚಿಕೊಳ್ಳದಂತೆ ತಡೆಹಿಡಿಯುತ್ತವೆ. ಇದರ ಪರಿಣಾಮ ಆತ್ಮಹತ್ಯೆಯ ಚಿಂತನೆಗಳು ಮೂಡುತ್ತವೆ. ಜನರೇಶನ್ ಗ್ಯಾಪ್ ಎನ್ನುವುದು ಸಮರ್ಥವಾದದಲ್ಲ, ನಮ್ಮಲ್ಲಿರುವ ಭಾವನೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡು ಕಮ್ಯುನಿಕೇಶನ್ ಗ್ಯಾಪ್‍ನ್ನು ದೂರ ಮಾಡಬೇಕೆಂದು ಮಾನಸಿಕ ಸಲಹೆಗಾರರಾದ ಡಾ. ರಮೀಲಾ ಶೇಖರ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಮನೋವಿಜ್ಞಾನ ವಿಭಾಗದ ವತಿಯಿಂದ
ರಾಜ್ಯಮಟ್ಟದ ಪ.ಪೂ. ಕಾಲೇಜುಗಳ ವಾಲಿಬಾಲ್ ಪಂದ್ಯಾಟ ಆಳ್ವಾಸ್‍ನ ಬಾಲಕರಿಗೆ ಪ್ರಶಸ್ತಿ
ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮಂಡ್ಯ ಹಾಗೂ ಶ್ರೀ ಗಂಗಾಧರೇಶ್ವರ ಸ್ವಾಮಿ ಪದವಿಪೂರ್ವ ಕಾಲೇಜು ಆದಿಚಂಚನಗಿರಿ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಫೈನಲ್ ಪಂದ್ಯದಲ್ಲಿ ಬೆಂಗಳೂರು ದಕ್ಷಿಣವನ್ನು ಪ್ರತಿನಿಧಿಸಿದ ಸುರಾನ ಪದವಿ ಪೂರ್ವ ಕಾಲೇಜು ತಂಡವನ್ನು 25-15, 25-15 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಆಳ್ವಾಸ್‍ನಲ್ಲಿ ನೂತನ ಎಂಬಿಎ ಬ್ಯಾಚ್ ಉದ್ಘಾಟನೆ
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 2019-2021 ಎಂಬಿಎ ಬ್ಯಾಚ್ ನ ಉದ್ಘಾಟನೆ ಸೆಮಿನಾರ್ ಹಾಲ್ ನಲ್ಲಿ ನಡೆಯಿತು. ಕಾಲೇಜಿನ ಹಳೆ ವಿದ್ಯಾರ್ಥಿ ರಿನು ಥೋಮಸ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಧನೆಯ ಹಾದಿಯಲ್ಲಿ ಹಲವಾರು ಸಂಕಷ್ಟ ಎದುರಾಗುತ್ತದೆ. ಶ್ರದ್ದೆ ಮತ್ತು ಪರಿಶ್ರಮದಿಂದ ಸಾಧಿಸಬಹುದು. ನನ್ನ ವೈಯಕ್ತಿಕ ಬೆಳವಣಿಗೆ ಆಳ್ವಾಸ್ ಕಾಲೇಜಿನ ಕೊಡುಗೆ ಅನನ್ಯವಾದದ್ದು. ಸಹಕಾರ, ಉಪನ್ಯಾಸಕರ ಬೆಂಬಲ, ತರಬೇತಿ ಇವೆಲ್ಲವು ನನಗೆ ವಿಟಿಯುನಲ್ಲಿ 2 ನೇ ರ್ಯಾಂಕ್ ಪಡೆಯಲು ಸಾಧ್ಯವಾಯಿತು ಎಂದರು. ಮೆನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆವಹಿಸಿ
ಪ್ರಿವೆಂಷನ್‍ಆಫ್ ಸೆಕ್ಸುವಲ್ ಹರ್ಯಾಸ್‍ಮೆಂಟ್ ಕಾರ್ಯಾಗಾರ
ಮೂಡುಬಿದಿರೆ: ಉದ್ಯೋಗಿಗಳಿಗೆ ಯಾವುದೇ ತೊಂದರೆಯಿಲ್ಲದ ವಾತಾವರಣವಿದ್ದಾಗ ಮಾತ್ರ ಸಂಸ್ಥೆಯ ಅಭ್ಯುದಯ ಸಾಧ್ಯ ಎಂದು ಬೆಂಗಳೂರಿನ ಖ್ವೆಸ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಇದರ ಸಿಎಸ್‍ಆರ್ ಮ್ಯಾನೇಜರ್ ಸ್ಮಿತಾ ಬಿ. ಶ್ರೀನಿವಾಸ್ ಹೇಳಿದರು. ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗ ಮತ್ತು ಆಂತರಿಕ ದೂರು ಕಮಿಟಿ ಆಯೋಜಿಸಿದ್ದ ಪಾಶ್(ಪ್ರಿವೆಂಷನ್‍ಆಫ್ ಸೆಕ್ಸುವಲ್ ಹರ್ಯಾಸ್‍ಮೆಂಟ್) ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು. ಯಾವುದೇ ಕ್ಷೇತ್ರದಲ್ಲಿ ಲೈಂಗಿಕ ಕಿರುಕಳವಾದರೂ ಅಕ್ಷಮ್ಯ ಅಪರಾಧ. ಅದರ ವಿರುದ್ದ ಪ್ರತಿಯೊಬ್ಬರೂ ಧ್ವನಿಯಾಗಬೇಕು ಎಂದ ಅವರು, ಪತ್ರಕರ್ತೆ, ವಿಶಾಖ, ಹೆಣ್ಣುಮಗುವಿನ