News & Events
ಸತತ ಐದನೇ ಬಾರಿ ಮಂಗಳೂರು ವಿವಿ ಚಾಂಪಿಯನ್
• ಅಖಿಲ ಭಾರತ ಅಂತರ್‍ವಿಶ್ವವಿದ್ಯಾಲಯ ಪುರುಷರ ಕ್ರಾಸ್‍ಕಂಟ್ರಿ ಕೂಟ • ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಆಯೋಜನೆ ಮೂಡುಬಿದಿರೆ: ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಅಂತರ್‍ವಿಶ್ವವಿದ್ಯಾಲಯ ಪುರುಷರ ಕ್ರಾಸ್‍ಕಂಟ್ರಿ ಕೂಟದಲ್ಲಿ ಸತತ ಐದನೇ ಬಾರಿಗೆ ಮಂಗಳೂರು ವಿವಿ ಚಾಂಪಿಯನ್ ಪಟ್ಟ ಮುಡುಗೇರಿಸಿಕೊಂಡಿದೆ. ಮಂಗಳೂರು ವಿವಿ ಪ್ರತಿನಿಧಿಸಿದ ಆರು ಕ್ರೀಡಾಪಟುಗಳು ಕೂಡ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿರುವುದು ವಿಶೇಷ. ಭಾನುವಾರ ಮುಂಜಾನೆ 7 ಗಂಟೆಗೆ ಮೂಡುಬಿದಿರೆಯ ನಿಶ್ಮಿತಾ ಟವರ್ಸ್ ಬಳಿಯಿಂದ 10 ಕಿ.ಮೀ. ಸ್ಪರ್ಧೆ ಆರಂಭಗೊಂಡು, ಪಟ್ಟಣದ ಮುಖ್ಯರಸ್ತೆಯಲ್ಲಿ ಸಾಗಿ,
“ಸನಿಹ ಇನ್ನೂ ಸನಿಹ” ಆಲ್ಬಮ್ ಸಾಂಗ್ ಬಿಡುಗಡೆ
ವಿದ್ಯಾಗಿರಿ: ಕಂಡ ಕನಸನ್ನು ನನಸಾಗಿಸುವುದು ಪ್ರತಿಯೊಬ್ಬರ ಜವಬ್ದಾರಿ ಎಂದು ಧನಲಕ್ಷ್ಮಿ ಕಾಶ್ಯೂ ಎಕ್ಸ್‍ಪೋರ್ಟ್‍ನ ಮಾಲಿಕ ಕೆ. ಶ್ರೀಪತಿ ಭಟ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ವತಿಯಿಂದ ನಡೆದ “ಸನಿಹ ಇನ್ನೂ ಸನಿಹ” ಆಲ್ಬಮ್ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಂಗ್‍ನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಪ್ರತಿಯೊಬ್ಬರು ಸುಂದರ ಕನಸು ಕಾಣಬೇಕು.ಕಂಡ ಕನಸನ್ನು ನನಸಾಗಿಸಲು ಬೇಕಾಗುವ ಪ್ರದೇಶದ ಆಯ್ಕೆಯೂ ಕೂಡ ಪ್ರಮುಖವಾಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಸಿಗುವ
ನಾಳೆ ಅಖಿಲ ಭಾರತ ವಿ.ವಿ. ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್‍ಶಿಪ್
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಖಿಲ ಭಾರತ ವಿ.ವಿ. ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್‍ಶಿಪ್ ಅಕ್ಟೋಬರ್ 6ರಂದು ಮೂಡುಬಿದಿರೆಯಲ್ಲಿ ನಡೆಯಲಿದೆ ಅಖಿಲ ಭಾರತ ಅಂತರ್ ವಿ.ವಿ. ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟದ ನಿರ್ದೇಶನದಲ್ಲಿ ನಡೆಯಲಿರುವ ಚಾಂಪಿಯನ್‍ಶಿಪ್‍ನಲ್ಲಿ ದೇಶದ ಸುಮಾರು 175 ವಿ.ವಿಗಳಿಂದ 1,600 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಅ.6ರಂದು ಬೆಳಗ್ಗೆ 7 ಗಂಟೆಗೆ ಮೂಡಬಿದಿರೆ ನಿಶ್ಮಿತಾ ಟವರ್ಸ್
ಸ್ಟೂಡೆಂಟ್ ಸೋಲಾರ್ ಅಂಬಾಸಿಡರ್ ಕಾರ್ಯಗಾರ
ಮೂಡುಬಿದಿರೆ: ಐಐಟಿ ಬಾಂಬೆ ಸಹಯೋಗದಲ್ಲಿ 150ನೇ ಗಾಂಧಿ ಜಯಂತಿ ಮತ್ತು ಸ್ಟೂಡೆಂಟ್ ಸೋಲಾರ್ ಅಂಬಾಸಿಡರ್ ಕಾರ್ಯಗಾರವನ್ನು ಆಳ್ವಾಸ್ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗವು ಹಮ್ಮಿಕೊಂಡಿತ್ತು. ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಇತಿಹಾಸತಜ್ಞ ಡಾ.ಪುಂಡಿಕಾಯಿ ಗಣಪಯ್ಯ ಭಟ್, ನುಡಿದಂತೆ ನಡೆದ ಮಹಾತ್ಮ ಗಾಂಧೀಜಿ ತನ್ನ ಜೀವನವೇ ಒಂದು ಸಂದೇಶ ಎಂಬುದಾಗಿ ತಿಳಿಸಿ ತೆರಳಿದ್ದಾರೆ ಎಂದು ಹೇಳಿದರು. ಒಮ್ಮೆ ರೈಲು ಪ್ರಯಾಣದಲ್ಲಿ ಗಾಂಧೀಜಿಯವರ ಜತೆಯಾದ ಇಂಗ್ಲೆಂಡ್‍ನ ಪತ್ರಕರ್ತ ಅವರ ಸಂದರ್ಶನ ಬಯಸಿದಾಗ ಸೋಮವಾರದ ಮೌನಾಚರಣೆಯಲ್ಲಿದ್ದ ಕಾರಣ ಗಾಂಧೀಜಿ
‘ಮೆನುಸ್ಟ್ರುವಲ್ ಕಪ್ ಬಳಕೆಯ ಕುರಿತು ಜಾಗೃತಿ ಕಾರ್ಯಗಾರ’
ವಿದ್ಯಾಗಿರಿ: ಪರಿಸರ ಸ್ನೇಹಿ ಹಾಗೂ ಕಡಿಮೆ ಖರ್ಚಿನ ಮೆನುಸ್ಟ್ರುವಲ್ ಕಪ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿದ್ಯಾರ್ಥಿನಿಯರು ಅವುಗಳನ್ನು ಹೆಚ್ಚು ಬಳಸಬೇಕು ಎಂದು ಆಳ್ವಾಸ್ ಹೆಲ್ತ್ ಸೆಂಟರ್ ಸ್ತ್ರೀತಜ್ಞೆ ಡಾ. ಹನಾ ಶೆಟ್ಟಿ ಹೇಳಿದರು. ಅವರು ಕಾಲೇಜಿನ ವುಮನ್ ಡೆವೆಲಪ್‍ಮೆಂಟ್ ಸೆಲ್‍ವತಿಯಿಂದ ‘ಮೆನುಸ್ಟ್ರುವಲ್ ಕಪ್ ಬಳಕೆಯ ಕುರಿತು ಜಾಗೃತಿ ಕಾರ್ಯಗಾರ’ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‍ಗಳು ದುಬಾರಿಯಾಗಿದ್ದು, ಅಲ್ಲದೆÀ ಇವುಗಳ ತ್ಯಾಜ್ಯಕ್ಕೆ ಸರಿಯಾದ ಪರಿಹಾರವಿಲ್ಲ. ಸ್ಯಾನಿಟರಿ ಪ್ಯಾಡ್‍ಗಳಿಂದ ಅಲರ್ಜಿ, ತುರಿಕೆ, ಕ್ಯಾನ್ಸರ್‍ನಂತಹ ಸಮಸ್ಯೆಗಳನ್ನ
ಹ್ಯಾಮ್ ನಿರ್ವಾಹಕರು ಸಂವಹನ ಸೈನಿಕರು • ಐಐಎಚ್ ನಿರ್ದೇಶಕ ಡಾ.ಎಸ್.ಸತ್ಯಪಾಲ್ ಅಭಿಮತ
ಮೂಡುಬಿದಿರೆ: ಕಷ್ಟಕಾಲದಲ್ಲಿ ನೆರವಾಗುವ ಜತೆಗೆ ಜಗತ್ತಿನಾದ್ಯಂತ ಸ್ನೇಹ ಸಂಬಂಧ ಬೆಸೆಯುವ ಹವ್ಯಾಸಿ ರೇಡಿಯೋ(ಹ್ಯಾಮ್) ನಿರ್ವಾಹಕರು ಸಂವಹನದ ಸೈನಿಕರಿದ್ದರಂತೆ ಎಂದು ಭಾರತೀಯ ಹ್ಯಾಮ್ಸ್ ಸಂಸ್ಥೆ(ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಹ್ಯಾಮ್ಸ್)ಯ ನಿರ್ದೇಶಕ ಡಾ.ಎಸ್.ಸತ್ಯಪಾಲ್ ಹೇಳಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ‘ಹ್ಯಾಮ್ ರೇಡಿಯೋ’ ಕುರಿತಾದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ರೇಡಿಯೋ ಸಂವಹನದಲ್ಲಿ ಆಸಕ್ತಿಯಿರುವ ವ್ಯಕ್ತಿ ತನ್ನ ಮನೆಯಲ್ಲೇ ರೇಡಿಯೋ ಕೇಂದ್ರ ತೆರೆದು, ಅನೇಕ ಪ್ರಯೋಗಗಳನ್ನು ನಡೆಸುವ ಅವಕಾಶವನ್ನು ಹ್ಯಾಮ್ ರೇಡಿಯೋ ಒದಗಿಸುತ್ತದೆ ಎಂದರು. ಹ್ಯಾಮ್ ರೇಡಿಯೋಗಳ
ಶಾರದ ಪೂಜೆ
ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಅಭಿವ್ಯಕ್ತಿ ವೇದಿಕೆ ಅಡಿಯಲ್ಲಿ ಶಾರದಾ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿನಿ ಶರಣ್ಯ ಹಾಗೂ ತಂಡದವರು ಭಜನಾ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಯಶೋಧರಾ ಬಂಗೇರರ ಬಿದಿರೆ ಆಟ್ರ್ಸ ವತಿಯಿಂದ ಬಹು ಗಾತ್ರದ ಗೊಂಬೆ ಕುಣಿತ ಹಾಗೂ ಬಣ್ಣದ ವೇಷಗಳ ಕುಣಿತ ಎಲ್ಲರನ್ನು ಆಕರ್ಷಿಸಿದವು. ವಿದ್ಯಾರ್ಥಿಗಳು ಸಾಂಪ್ರಾದಾಯಿಕ ಉಡುಗೆ ತೊಡುಗೆಯಲ್ಲಿ ಮಿಂಚಿದರು. ಶಾರದ ಪೂಜೆಯ ಕೊನೆಯಲ್ಲಿ ಪ್ರಸಾದವನ್ನು ವಿತರಿಸಲಾಯಿತು. ಕಾರ್ಯಕ್ರಮನ್ನು ಶ್ರೀರಾಜ್ ಹಾಗೂ ಶ್ರೀರಕ್ಷಾ ಪುನರೂರು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ
ʻಪ್ಲೇ ಬಟನ್ʻ ಶಾರ್ಟ್ ಫಿಲ್ಮ್ ಫೆಸ್ಟಿವಲ್ -2019
ವಿದ್ಯಾಗಿರಿ: ಸಿನಿಮಾಗಳು ಸಮಾಜದ ಅತೀ ಮುಖ್ಯ ಸಂವಹನ ಮಾಧ್ಯಮ. ಆದ್ದರಿಂದ ಸಿನಿಮಾಗಳಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಾಗ ಸಮಾಜಕ್ಕೆ ಮೌಲ್ಯಾಧಾರಿತ ಸಂದೇಶಗಳನ್ನು ನೀಡಲು ಸಾಧ್ಯ ಎಂದು ಎಸ್.ಡಿ.ಎಮ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಎನ್.ಕೆ ಪದ್ಮನಾಭ್ ಹೇಳಿದರು. ಇವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ʻಅಭಿವ್ಯಕ್ತಿʻ ವೇದಿಕೆಯಡಿಯಲ್ಲಿ ನಡೆದ ʻಪ್ಲೇ ಬಟನ್ʻ ಶಾರ್ಟ್ ಫಿಲ್ಮ್ ಫೆಸ್ಟಿವಲ್ -2019ನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮುಖ್ಯವಾಹಿನಿಯ ವಾಣಿಜ್ಯ ಸಿನಿಮಾಗಳಲ್ಲಿ ಗಾಂಧೀಜಿಯ ತತ್ವಗಳು ಮರೆಯಾಗಿದ್ದು, ಅದು ಕೇವಲ ಕಿರುಚಿತ್ರ
ಆಳ್ವಾಸ್ ಯಕ್ಷಗಾನ ಚಿಕ್ಕಮೇಳಕ್ಕೆ ಚಾಲನೆ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ದೀಂ ಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜನೆ ವಿದ್ಯಾರ್ಥಿ ಕಲಾವಿದರು ಪ್ರಸ್ತುತಪಡಿಸುವ ಯಕ್ಷಗಾನ ಚಿಕ್ಕಮೇಳ ತಂಡಕ್ಕೆ ರಾಜ್ಯ ಸಚಿವ ಸಿ.ಟಿ ರವಿ ಅವರು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರ ಹಂಸನಗರದಲ್ಲಿರುವ ನಿವಾಸದಲ್ಲಿ ಸೋಮವಾರ ಚಾಲನೆ ನೀಡಿದರು. ಶ್ರೀವತ್ಸ, ಭುವನ್, ರಜತ್ ಶಬರೀಶ್ ಮುಮ್ಮೇಳ ಕಲಾವಿದರಾಗಿ, ಮನ್ವಿತ್ ಶೆಟ್ಟಿ (ಭಾಗವತಿಕೆ) ಸವಿನಯ್ ನೆಲ್ಲಿತೀರ್ಥ (ಚೆಂಡೆ), ಯಜ್ಞೇಶ್ ರೈ (ಮದ್ದಳೆ), ಕೀರ್ತನ್ (ಚಕ್ರತಾಳ) ಕಲಾವಿದರಾಗಿ ಯಕ್ಷಗಾನ ಪ್ರದರ್ಶನ ನೀಡಿದರು. ಮಂಗಳೂರು
ರಾಜ್ಯದ ನೆರೆ ಸಂತ್ರಸ್ತರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ 50 ಲಕ್ಷ ಪರಿಹಾರ ಘೋಷಣೆ
ವಾರ್ಷಿಕ ರೂ.33.85 ಕೋಟಿ ವಾರ್ಷಿಕ ಕೊಡುಗೆಗಳ ಲೋಕಾರ್ಪಣೆ