ಆಳ್ವಾಸ್‍ನಲ್ಲಿ ನೆಪಮ್ ಪ್ರೆಶರ್ಸ್ ಮೀಟ್ 2019

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೆಪಮ್ ( ನಾರ್ತ್ ಈಸ್ಟ್ ಪೀಪಲ್ ಅಸೋಸಿಯೇಶನ್ ಮಂಗಳೂರು) ವತಿಯಿಂದ 7ನೇ ವಾರ್ಷಿಕ ಪ್ರೆಶರ್ಸ್ ಮೀಟ್ 2019 ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಭೂತಾನ್‍ನ ಮಾಜಿ ಸಂಸದ ಶೇರಿಂಗ್ ದೋರ್ಜಿ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತದ ಸಂಸ್ಕೃತಿ, ಅಚಾರ-ವಿಚಾರ, ಭಾಷೆ, ಜಾತಿ ಮತ್ತು ಧರ್ಮಗಳಿದ್ದರೂ ಏಕತೆಯನ್ನು ಸಾಧಿಸಿದ ಜಗತ್ತಿನ ಪ್ರಮುಖ ರಾಷ್ಟ್ರ. ನೆಪಮ್ ಸಂಘಟನೆಯು ಈಶಾನ್ಯ ರಾಜ್ಯದ ವಿದ್ಯಾರ್ಥಿಗಳ ಅಭಿವೃದ್ದಿಗೆ ಶ್ರಮಿಸುತ್ತಿರುವುದು ನೀಜಾವಾಗಲೂ ಗಮನಾರ್ಹ ಎಂದರು. ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ

Read More

ತುಳುವರಿಗೆ ಆಹಾರವೇ ಔಷಧಿ: ಡಾ. ವೈ.ಎನ್ ಶೆಟ್ಟಿ

ತುಳು ಅತ್ಯಂತ ಪ್ರಾಚೀನ ಭಾಷೆಗಳಲ್ಲೊಂದು. ಕಳೆದ ಮೂವತ್ತು ವರ್ಷಗಳಿಂದ ತುಳು ಭಾಷೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಅದನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ತುಳುಜನರ ಮೇಲಿದೆ ಎಂದು ತುಳು ಸಂಸ್ಕøತಿ ಚಿಂತಕ ಡಾ.ವೈ.ಎನ್ ಶೆಟ್ಟಿ ತಿಳಿಸಿದರು. ಆಳ್ವಾಸ್ ಪದವಿ ಪೂರ್ವ ಕಾಲೇಜಿನ ತುಳು ಸಂಘದ ವತಿಯಿಂದ ಜರುಗಿದ ಉದಿಪನದ ಲೇಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತುಳುನಾಡು ಮತ್ತು ತುಳುವರಿಗೆ ಅವರದೇ ಆದ ವಿಶಿಷ್ಟ ಸಂಸ್ಕøತಿ ಇದೆ. ತುಳುವರು ಆರೋಗ್ಯಕ್ಕೆ ಅನುಗುಣವಾದ ಆಹಾರವನ್ನು ತಿನ್ನುತ್ತಾರೋ ಹೊರತು ನಾಲಗೆಯ ರುಚಿಗೆ

Read More

ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್

ಮೂಡಬಿದ್ರೆ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 39ನೇ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಮತ್ತು ಭಿನ್ನ ಸಾಮಥ್ರ್ಯದ ಮಕ್ಕಳ ಅಥ್ಲೆಟಿಕ್ಸ್ ಚ್ಯಾಂಪಿಯನ್‍ಶಿಪ್‍ನಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಒಟ್ಟು 500 ಅಂಕಗಗಳೊಂದಿಗೆ ವೀರಾಗ್ರಣಿಯಾಗಿ ಹೊರಹೊಮ್ಮಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಸುಬ್ರಮಣ್ಯ. ಎಡಪಡಿತ್ತಾಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮೂಡಬಿದ್ರೆಯು ಎಲ್ಲಾ ವಿಚಾರಗಳಲ್ಲೂ ವೈಶಿಷ್ಟ್ಯತೆಯನ್ನು ಹೊಂದಿದೆ. ಆಳ್ವಾಸ್ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ ಅವಿಭಾಜ್ಯ

Read More

ಶೋಭಾವನದಲ್ಲಿ ನಂದನವನ ನಿರ್ಮಾಣ

ಮೂಡುಬಿದಿರೆ: ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಸಹಯೋಗದಲ್ಲಿ ಮಿಜಾರಿನ ಶೋಭಾವನದಲ್ಲಿ ನಂದನವನ ನಿರ್ಮಾಣ ಮಾಡಲಾಯಿತು. ಬಜ್ಪೆ ಗ್ರಾಪಂ ಪಿಡಿಒ ಸಾಯೀಶ್ ಚೌಟ, ಪ್ಲಾಸ್ಟಿಕ್ ಮುಕ್ತ ಪರಿಸರದ ಅತ್ಯವಶ್ಯಕತೆಯನ್ನು ವಿವರಿಸಿದರು. ಎನ್‍ಎಸ್‍ಎಸ್ ಯೋಜನಾಧಿಕಾರಿ ಸುರೇಶ್ ಪಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಯಂಸೇವಕರು ತಮ್ಮ ಹುಟ್ಟುಹಬ್ಬದ ದಿನ ನಂದನವನದಲ್ಲಿ ಹಣ್ಣಿನ ಗಿಡ ನೆಟ್ಟು ಆಚರಿಸಲು ಅವಕಾಶ ಮಾಡಿಕೊಡಲಾಗುವುದು. ಗಿಡದ ಪೋಷಣೆ ಕೂಡ ಅವರೇ ಮಾಡುತ್ತಾರೆ ಎಂದರು. ಇಂಡಿಯನ್ ಸೆರಾಮಿಕ್ ಸೊಸೈಟಿ ಕರ್ನಾಟಕ

Read More

ಆಳ್ವಾಸ್‍ನಲ್ಲಿ `ಕಾವೇರಿ ಕೂಗು’ ಅಭಿಯಾನ

ಮೂಡುಬಿದಿರೆ: ಇಶಾ ಫೌಂಡೇಶನ್ ಸಹಭಾಗಿತ್ವದಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳಿಗಾಗಿ ಕಾವೇರಿ ಕೂಗು ಕಾರ್ಯಕ್ರಮವನ್ನು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಇಶಾ ಫೌಂಡೇಶನ್‍ನ ಸ್ವಯಂಸೇವಕ ಸತೀಶ್ ಎಸ್. ಮಾತನಾಡಿ, ಕೃಷಿ ಅರಣ್ಯ (ಆಗ್ರೋಫಾರೆಸ್ಟ್ರಿ) ವಿಧಾನವನ್ನು ಅಳವಡಿಸಿಕೊಂಡು ಕರ್ನಾಟಕದ ತಲಕಾವೇರಿಯಿಂದ ತಮಿಳುನಾಡಿನ ತಿರುವಾರೂರುವರೆಗಿನ ಕಾವೇರಿಯ ಜಲಾನಯನ ಪ್ರದೇಶದಲ್ಲಿ ಸರಿಸುಮಾರು 242 ಕೋಟಿ ಸಸಿಗಳನ್ನು ನೆಡಲು ಇಶಾ ಫೌಂಡೇಶನ್ ರೈತರಿಗೆ ಸಹಾಯಹಸ್ತವನ್ನು ನೀಡಲು ಮುಂದಾಗಿದೆ. ದೇಶದ ನದಿಗಳನ್ನು, ಜೀವಸೆಲೆಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಅತಿದೊಡ್ಡ ಅಭಿಯಾನದಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ

Read More

ಮಂಗಳೂರು ವಿವಿ ಮಟ್ಟದ 39ನೇ ಅಂತರ್ ಕಾಲೇಜು ಕ್ರೀಡಾಕೂಟ

ಮೂಡಬಿದ್ರೆ: ಕ್ರೀಡೆಯೂ ದೈಹಿಕ, ಸಾಮಾಜಿಕ ಮಾನಸಿಕ ಸಾಮಥ್ರ್ಯವನ್ನು ವೃದ್ಧಿಸುವುದರ ಜೊತೆಗೆ ವೈಕ್ತಿತ್ತ್ವ ವಿಕಾಸನಗೊಳಿಸುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸೋಲು ಮತ್ತು ಗೆಲುವು ಸಹಜ. ಅವುಗಳು ಜೀವನ ಪಾಠಕ್ಕೆ ಪೂರಕವಾಗಿರುತ್ತದೆ. ಜತೆಗೆ ಪ್ರೋತ್ಸಾಹಿಸುವ ಗುಣವನ್ನು ಕಲಿಯುತ್ತೇವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಎ. ಎಮ್ ಖಾನ್ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 39ನೇ ಮಂಗಳೂರು ವಿಶ್ವವಿದ್ಯಾನಿಲಯದ ಇಂಟರ್ ಕಾಲೇಜಿಯೇಟ್ ಮತ್ತು ಭಿನ್ನ ಸಾಮಥ್ರ್ಯದ

Read More

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಸಂಘ ಉದ್ಘಾಟನೆ

ಮೂಡುಬಿದಿರೆ: ತುಳು ಭಾಷೆ ಉಳಿಯಬೇಕಾದರೆ ಅದರಲ್ಲಿ ಕಲಾವಿದ, ಲೇಖಕರು ಮತ್ತು ಯಕ್ಷಗಾನ ಕಲಾವಿದರು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ನಮ್ಮದು ಶ್ರೀಮಂತ ಸಂಸ್ಕøತಿಯ ನಾಡು. ತುಳು ಸಂಸ್ಕøತಿ, ಭಾಷೆ ಉಳಿಯುವಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ತುಳು ರಂಗಭೂಮಿ, ಸಿನಿಮಾ ಕಲಾವಿದ ಅರವಿಂದ್ ಬೋಳಾರ್ ಹೇಳಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತುಳು ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆಳ್ವಾಸ್ ಕಾಲೇಜ್ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ವಿಶ್ವಮಟ್ಟದಲ್ಲಿ ಎತ್ತಿ ಹಿಡಿದಿದೆ ವಿರಾಸತ್ ಮತ್ತು ನುಡಿಸಿರಿಯ ಮೂಲಕ ಇದರಿಂದ ಸಂಸ್ಕೃತಿ

Read More

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಾರ್ಪಣಾ 2019-ಸಾಂಸ್ಕೃತಿಕ ಕಾರ್ಯಾಗಾರ

ಮೂಡುಬಿದಿರೆ: ವಿದ್ಯಾರ್ಥಿ ಜೀವನದಲ್ಲಿ ವಿಷಯ ಎಷ್ಟು ಮುಖ್ಯವೋ ಕಲೆ, ಸಾಂಸ್ಕೃತಿಕ ಚಟುವಟಿಕೆಗಳ ಜ್ಞಾನ ಅಷ್ಟೇ ಮುಖ್ಯ. ಒಂದು ಕಲೆಯನ್ನು ಅವಲೋಕಿಸಿದಾಗ ಅದರ ಮಹತ್ವ ತಿಳಿಯಲು ಸಾಧ್ಯ. ಕಲೆಯಿಂದ ಮನುಷ್ಯನ ಸರ್ವಾಂಗೀಣ ಬೆಳವಣಿಗೆ ಸಾದ್ಯ ಎಂದು ಡಾ.ಎಂ ಮೋಹನ ಆಳ್ವ ತಿಳಿಸಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ನಡೆದ `ಕಲಾರ್ಪಣಾ 2019′ ಸಾಂಸ್ಕೃತಿಕ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಕಲಾರತ್ನ ಶಂಕರನಾರಾಯಣ ಅಡಿಗ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ವಿದ್ಯೆ ಮತ್ತು ಕಲೆ  ಇವೆರೆಡನ್ನು ನಾವೂ ಜೀವಂತಗೋಳಿಸಬೇಕಾದರೆ ನಮ್ಮ ಅವಿರತ

Read More

ಸೃಷ್ಠಿ ಕ್ಲಬ್‍ನ ಉದ್ಘಾಟನೆ

ಮೂಡಬಿದಿರೆ: ಜೀವ ಸಂಕುಲವನ್ನು ಸಂರಕ್ಷಿಸುವ ಕಾರ್ಯಕ್ಕೆ ತೊಡಗುವ ಮೊದಲು, ಅವುಗಳ ನೈಸರ್ಗಿಕ ಆವಾಸ ಸ್ಥಾನವನ್ನು ಕಾಪಾಡುವ ಕೆಲಸ ಮುಖ್ಯ ಎಂದು ಖ್ಯಾತ ವನ್ಯಜೀವಿ ಜೀವಶಾಸ್ತ್ರಜ್ಞ ಹಾಗೂ ವಿಜ್ಞಾನಿ ಸಂಜಯ್ ಗುಬ್ಬಿ ತಿಳಿಸಿದರು. ಆವರು ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ಸೃಷ್ಠಿ ಕ್ಲಬ್‍ನ 2019-20 ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಕೃತಿಯನ್ನು ಅರಿಯದೆ ಹೊರತು, ನಮ್ಮಲ್ಲಿ ಅದರೆಡೆಗೆ ನಿಜವಾದ ಕಾಳಜಿ ಮೂಡದು. ನಮ್ಮ ನಿಜವಾದ ಪ್ರಕೃತಿಯೆಡೆಗಿನ ಆಸ್ಥೆ ಸಕಲ ಜೀವರಾಶಿಗಳು ತಮ್ಮ ಮೂಲ

Read More

ಜೇನುಹುಳುಗಳು ಜೀವವೈವಿಧ್ಯತೆಯ ಸಂರಕ್ಷಕರು: ಡಾ. ವಿಜಯಕುಮಾರ್ ಕೆ.ಟಿ.

ಮೂಡುಬಿದಿರೆ: ಜೀವಿಗಳಲ್ಲಿ ನಾಯಕತ್ವ, ನೈರ್ಮಲ್ಯತೆ ಹಾಗೂ ಪರಸ್ಪರ ಹೊಂದಾಣಿಕೆಯ ಗುಣಗಳಿಗೆ ಜೇನುಹುಳಗಳು ಮಾದರಿ. ಜೇನುಹುಳುಗಳು ಪ್ರಕೃತಿಯ ಜೀವವೈವಿಧ್ಯತೆಯ ಸಂರಕ್ಷಕರು. ಜೇನುಹುಳುಗಳ ಸಾಕಾಣಿಕೆ ಆದಾಯ ಗಳಿಕೆಗೆ ಒಂದು ಮಾರ್ಗ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜೇನುಹುಳು ಮತ್ತು ಪರಾಗಸ್ಪರ್ಶಕಗಳ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಕೆ.ಟಿ. ಹೇಳಿದರು. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ ಇದರ ಜಂಟಿ ಸಹಯೋಗದೊಂದಿಗೆ ಆಳ್ವಾಸ್ ಪದವಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆದ

Read More

Highslide for Wordpress Plugin