News & Events
ಆತ್ಮರಕ್ಷಣೆಯ ಕುರಿತು ಮಾಹಿತಿ ಕಾರ್ಯಗಾರ
ವಿದ್ಯಾಗಿರಿ: ಆಳ್ವಾಸ್ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಯ ಕುರಿತು ಮಾಹಿತಿ ಕಾರ್ಯಗಾರವನ್ನು ಆಳ್ವಾಸ್ ಆಂತರಿಕ ದೂರು ಸಮಿತಿಯು ಆಯೋಜಿಸಲಾಗಿತ್ತು. ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್‍ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಕಾರ್ತಿಕ್.ಎಸ್.ಕಟೀಲ್ ಹಾಗೂ ಅವರ ತಾಯಿ ಶೋಭಲತಾ ವಿದ್ಯಾರ್ಥಿನಿಯರಿಗೆ ಯಾವ ರೀತಿಯಾಗಿ ಕಿರುಕುಳದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರ ನೀಡಿದರು. ಒಬ್ಬ ಸ್ವಯಂ ರಕ್ಷಣೆಯನ್ನು ಕಲಿತ ಮಹಿಳೆ ಅನೇಕ ರೀತಿಯಲ್ಲಿ ತನ್ನನ್ನು ತಾನು ಕಿರುಕುಳದಿಂದ ಪಾರಗಿಸಬಹುದು. ಮೊದಲಿಗೆ ಒಳ್ಳೆಯ ಸ್ಪರ್ಶ ಮತ್ತು
`ಲೈಫ್‍ಆಫ್ ಬಟರ್‍ಫ್ಲೈಸ್’ ಸಾಕ್ಷ್ಯಚಿತ್ರ ಬಿಡುಗಡೆ
ವಿದ್ಯಾಗಿರಿ: ಪ್ರಕೃತಿಯ ಮೇಲೆ ಪ್ರೀತಿ ಮತ್ತು ಕಾಳಜಿ ತೋರಿದಾಗ ಮಾತ್ರ ರಕ್ಷಿಸಲು ಸಾಧ್ಯ ಎಂದು ಐ ನೇಚರ್ ವಾಚ್ ಫೌಂಡೇಷನ್‍ನ ಅಧ್ಯಕ್ಷ ಹಾಗೂ ಬಟರ್ ಪ್ಲೈ ಮ್ಯಾನ್ ಆಫ್ ಇಂಡಿಯಾ ಐಸಾಕ್ ಕೆಹಿಮ್‍ಕರ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಗಣದಲ್ಲಿ ನಡೆದ ಬೆಳುವಾಯಿ ಸಮ್ಮಿಲನ್ ಶೆಟ್ಟಿ’ಸ್ ಬಟರ್ ಫ್ಲೈಸ್ ಕನ್ಸರ್ವೇಶನ್ ಆ್ಯಂಡ್ ರಿಸರ್ಚ್ ಟ್ರಸ್ಟ್‍ನಿಂದ ನಿರ್ಮಾಣಗೊಂಡ `ಲೈಫ್‍ಆಫ್ ಬಟರ್‍ಫ್ಲೈಸ್’ ಎಂಬ ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಪ್ರಕೃತಿಯನ್ನು ರಕ್ಷಿಸುವ ಜವಾಬ್ದಾರಿ ಮಾನವನದಾಗಿರಬೇಕು. ಭಾರತದ ಸಸ್ಯ ಸಂಪತ್ತನ್ನು
ಭರತನಾಟ್ಯ ಜ್ಯೂನಿಯರ್ ಪರೀಕ್ಷೆ: ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಧನೆ
ಮೂಡುಬಿದಿರೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜ್ಯೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಆಳ್ವಾಸ್‍ನ 15 ಮಂದಿ ವಿಶಿಷ್ಟ ಶ್ರೇಣಿ, 9 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಒಟ್ಟು 400 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ ಶ್ರೇಯಾ ಸದಾಶಿವ್ ಮೋದಿ( 355), ಭಾವನ ತಮ್ಮಣ್ಣ ಬಗೆವಾಡಿ(333), ಶ್ರುೃತಿ ಪ್ರವೀಣ್ ಕುಮಾರ್ ಪಾಟೀಲ್( 325), ಸಂಜನಾ ಸಿದ್ದು ಜಾದವ್(324), ದಿಶಾ ಮಾರುತಿ (324), ಶ್ವೇತಾ ಸುರೇಶ್ ಗೌರವ್( 322), ನಿಖಿತಾ ಮಹಾವೀರ ಜೈನ್( 322), ಶ್ರಾವಣ ಮಯೂರ್(
ಕುವೆಂಪು ವಿಶ್ವವಿದ್ಯಾಲಯ ದೂರ ಶಿಕ್ಷಣ ಅರ್ಜಿ ಆಹ್ವಾನ
ಮೂಡುಬಿದಿರೆ: ಕುವೆಂಪು ವಿಶ್ವವಿದ್ಯಾಲಯ ದೂರಶಿಕ್ಷಣ ಕೇಂದ್ರದ 2019-20ರ ಶೈಕ್ಷಣಿಕ ವರ್ಷದ ಸ್ನಾತಕ, ಸ್ನಾತಕೋತ್ತರ ಕೋರ್ಸ್‍ಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಬಿ.ಎ. , ಬಿ.ಎಲ್.ಐ.ಎಸ್.ಸಿ., ಎಂ.ಎಲ್.ಐ.ಎಸ್.ಸಿ., ಎಂ.ಎ., ಎಂ.ಕಾಂ., ಎಂ.ಎಸ್.ಸಿ. ಹಾಗೂ ಒಂದು ವರ್ಷದ ಪಿಜಿ ಡಿಪ್ಲೋಮಾಗೆ ಕೇಂದ್ರದ ಮೂಲಕ ಪ್ರವೇಶಾತಿ ಪಡೆದುಕೊಳ್ಳಬಹುದು. ಆಸಕ್ತರು ಆಡಳಿತ ಕಚೇರಿಯಲ್ಲಿ ಅರ್ಜಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೇ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಸಹ ಆಡಳಿತಾಧಿಕಾರಿ ಆಳ್ವಾಸ್
ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ವಾಲಿಬಾಲ್ ಪಂದ್ಯಾಟ ಆಳ್ವಾಸ್‍ನ ಬಾಲಕರಿಗೆ ಪ್ರಶಸ್ತಿ
ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಕುಂಬ್ರದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಫೈನಲ್ ಪಂದ್ಯದಲ್ಲಿ ಮಂಗಳೂರು ಗ್ರಾಮಾಂತರ ತಂಡವನ್ನು ಪ್ರತಿನಿಧಿಸಿದ ಆಳ್ವಾಸ್ ಬಾಲಕರ ತಂಡವು ಮಂಗಳೂರು ನಗರವನ್ನು ಪ್ರತಿನಿಧಿಸಿದ ಸೈಂಟ್ ಅಲೋಸಿಯಸ್ ಪಿ.ಯು. ಕಾಲೇಜು, ಮಂಗಳೂರು ತಂಡವನ್ನು 25-14, 27-17 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಪ್ರಶಸ್ತಿ ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.
ಬಹುಭಾಷಾ ಕವಿಗೋಷ್ಟಿ
ವಿದ್ಯಾಗಿರಿ: ಕವಿತೆಗೆ ವಿವಿಧ ರೀತಿಯ ಭಾವ ಹಾಗೂ ಭಾಷೆಯನ್ನು ಸೃಷ್ಟಿಸಬಲ್ಲ ಸಾಮಾಥ್ರ್ಯವಿದೆ ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ರಾಮ ಪ್ರಸಾದ್ ಕಾಂಚೋಡು ಹೇಳಿದರು. ಅವರು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ 2019-20ನೇ ಸಾಲಿನ ಸಾಹಿತ್ಯ ಸಂಘದ ಬಹುಭಾಷಾ ಕವಿಗೋಷ್ಟಿಯನ್ನು ಉದ್ಘಾಟಿಸಿ ಮಾತನಾಡಿದರು. ಒಂದು ಕವಿತೆ ಹುಟ್ಟಬೇಕಾದರೆ ಧ್ಯಾನ ಮಾಡಬೇಕಾಗುತ್ತದೆ. ಅನುಭವವನ್ನು ಅನುಭಾವವಾಗಿಸುವುದೆ ಕವಿತೆ. ಕವಿಯು ಅಚೇತನವಾದುದನ್ನು ಸಚೇತನವಾಗಿಸಬಲ್ಲ ಅದಮ್ಯ ಶಕ್ತಿಯನ್ನು ಹೊಂದಿದ್ದಾನೆ. ವಿದ್ಯಾರ್ಥಿಗಳು ಮೊದಲಿಗೆ
ಸೆ.20ರಂದು ಆಳ್ವಾಸ್‍ನಲ್ಲಿ ಬರ್ಬರೀಕ ನಾಟಕ ಪ್ರದರ್ಶನ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಆಶ್ರಯದಲ್ಲಿ ಸೆ.20 ರಂದು ಸಾಯಂಕಾಲ 6.45 ಕ್ಕೆ ನುಡಿಸಿರಿ ವೇದಿಕೆಯಲ್ಲಿ ಹೇಮಾವತಿ ಹೆಗ್ಗಡೆ ಅವರು ಮಾರ್ಗದರ್ಶನದ ಬರ್ಬರೀಕ ಕನ್ನಡ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಕಲಾಬಳಗ ಧರ್ಮಸ್ಥಳ ಅರ್ಪಿಸುವ ಈ ನಾಟಕದಲ್ಲಿ ಕ್ಷೇತ್ರದ ಪ್ರತಿಭಾನ್ವಿತ ಸಿಬ್ಬಂದಿಗಳು ಕಲಾವಿದರಾಗಿ ಅಭಿನಯಿಸಲಿದ್ದಾರೆ. ಶಶಿರಾಜ್ ರಾವ್ ಕಾವೂರು ರಚಿಸಿದ ಬರ್ಬರೀಕವನ್ನು ನೀನಾಸಂ ಪದವೀಧರ ಸುನಿಲ್ ಶೆಟ್ಟಿ ಕಲ್ಕೊಪ್ಪ ನಿರ್ದೇಶಿಸಿದ್ದಾರೆ. ಧರ್ಮಸ್ಥಳದ ಬಿ.ಭುಜಬಲಿ ಹಾಗೂ ರತ್ನವರ್ಮ ಜೈನ್ ತಂಡದ ಸಂಯೋಜಕರಾಗಿದ್ದಾರೆ. ಆಸಕ್ತರಿಗೆ ಉಚಿತ
ಪತ್ರಕರ್ತರಿಗೆ ಕಾನೂನಿನ ತಿಳುವಳಿಕೆ ಅಗತ್ಯ: ಸುಧೀರ್‍ಕುಮಾರ್ ಮುರೋಳಿ
ವಿದ್ಯಾಗಿರಿ: “ಆರಾಧನೆಗೆ ಶ್ರೇಷ್ಠ ಗ್ರಂಥ ಭಾರತದ ಸಂವಿಧಾನವಾಗಿದೆ. ವಾಕ್ ಮತ್ತುಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂವಿಧಾನದ ಮೂಲ ಅಡಿಪಾಯವಾಗಿವೆ ಎಂದು ಖ್ಯಾತ ವಕೀಲರು ಹಾಗೂ ವಾಗ್ಮಿ ಸುಧೀರ್‍ಕುಮಾರ್ ಮುರೋಳಿ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಲಾದ “ಮಾಧ್ಯಮ ಮತ್ತು ಕಾನೂನು” ಎಂಬ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಪತ್ರಕರ್ತರು ಯಾವಾಗಲೂ ಮಾಧ್ಯಮ ಕಾನೂನು ಮತ್ತು ಕಾಯ್ದೆಗಳ ಬಗ್ಗೆ ತಿಳಿದುಕೊಂಡಿರಬೇಕು. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಸುದ್ದಿಗಳ ನೈಜತೆಯನ್ನು ಅರಿತು ಪ್ರಸಾರ ಮಾಡಬೇಕು. ಕೆಲವೊಮ್ಮೆ ಸುದ್ದಿಗಳನ್ನು ಕೊಡುವುದರಿಂದ ಆಗುವ ಅಪಾರ್ಥಕ್ಕೆ ಇಡೀ ಸಮಾಜ ಬೆಲೆ ತೆರಬೇಕಾಗುತ್ತದೆ. ಏಕಾಧಿಪತ್ಯದಲ್ಲಿ ಜನರಿಗೆ ಪ್ರಶ್ನಿಸುವಂತಹ ಅವಕಾಶಗಳಿರುವುದಿಲ್ಲ. ಆದರೆ ಸಂವಿಧಾನವು ಅದಕ್ಕೆ ಪೂರಕವಾಗಿದೆ. ನಮ್ಮಲ್ಲಿನ ಅಂತರಂಗದ ಸಿದ್ಧಾಂತಗಳು ಬದಲಾಗಬೇಕಿದೆ ಎಂದರು. ಅನುವಾದಕರಾದವರು ಪ್ರತಿಯೊಂದು ವಿಷಯವನ್ನು ಅರಿತು ಅನುವಾದಿಸಬೇಕು. ಎರಡನೇ
‘ನಾಲ್ಕನೇ ಪೀಳಿಗೆಯ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲದ ಬಳಕೆ’ ವಿಚಾರ ಸಂಕಿರಣ
ವಿದ್ಯಾಗಿರಿ: ವಿದ್ಯಾರ್ಥಿ ಜೀವನದಲ್ಲಿ ಒಂದೊಂದು ದಿನವು ಅತೀ ಮುಖ್ಯವಾಗಿದ್ದು ಅದನ್ನು ಸರ್ಮಪಕವಾಗಿ ಬಳಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾದ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಎಂಕಾಂ ಎಚ್‍ಆರ್‍ಡಿ ವಿಭಾಗದ ವಿದ್ಯಾರ್ಥಿಳಿಗೆ ‘ನಾಲ್ಕನೇ ಪೀಳಿಗೆಯ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲದ ಬಳಕೆ’ ದ ಕುರಿತು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಿದ್ಧಾಂತಗಳಿಗಿಂತಲೂ ಅಭ್ಯಾಸ ಬಹುಮುಖ್ಯ, ನಿರಂತರವಾಗಿ (ಪುನರಾವರ್ತಿತ) ಅಭ್ಯಾಸ ನಡೆಸಿದಾಗ
‘ಹಿಂದಿ ದಿನಾಚರಣೆ’
ವಿದ್ಯಾಗಿರಿ: ಹಿಂದಿ ಸರಳ, ಸಹಜ, ಸುಂದರ ಭಾಷೆಯಾಗಿದ್ದು, ಈ ಭಾಷೆಯು ಹೆಚ್ಚಿನ ಪ್ರಾದೇಶಿಕ ಭಾಷೆಗಳ ಜೊತೆಗೆ ಬಳಸಲ್ಪಡುವುದರಿಂದ ಸುಲಭವಾಗಿ ಕಲಿಯಲು ಸಾಧ್ಯ ಎಂದು ಎಮ್.ಆರ್.ಪಿ.ಎಲ್ ನ ಹಿರಿಯ ಮ್ಯಾನೇಜರ್ ಡಾ. ಬಿ.ಆರ್ ಪಾಲ್ ತಿಳಿಸಿದರು. ಆಳ್ವಾಸ್ ಪದವಿ ಕಾಲೇಜಿನ ಹಿಂದಿ ವಿಭಾಗದಿಂದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಹಿಂದಿ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು. ಭಾರತ ಸ್ವಾತಂತ್ರ್ಯ ಹೊಂದಿದಾಗ ಕೇವಲ ಶೇಕಡಾ 30ರಷ್ಟು ಮಾತ್ರ ಹಿಂದಿ ಭಾಷೆಯನ್ನು ತಿಳಿದಿದ್ದು ಈಗ ಶೇಕಡಾ 75ರಷ್ಟು ಜನ ಈ ಭಾಷೆಯನ್ನು ಮಾತನಾಡುವಷ್ಟು ಬೆಳವಣೆಗೆ