ವಿದ್ಯಾಗಿರಿ: ಮನುಷ್ಯನ ಚಿಂತನೆಗಳಿಗೆ ಯಾವುದೇ ಮಿತಿಯಿಲ್ಲ. ತನ್ನ ಪ್ರತಿಯೊಂದು ಚಿಂತನೆಗಳಿಗೆ ಆಯಾ ಕಾರಣಗಳನ್ನು ನೀಡುತ್ತಾ ಹೋಗುತ್ತಾನೆ. ಈ ಕಾರಣಗಳು ಭೌತಶಾಸ್ತ್ರದಜೊತೆ ಸಂಬಂದವನ್ನು ಹೊಂದಿರುತ್ತದೆಎಂದುಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರಕಾಲೇೀಜಿನ ಪ್ರಾಂಶುಪಾಲರಾದಟಿ.ಎನ್. ಕೇಶವ್ ಹೇಳಿದರು.
ಇವರು ಆಳ್ವಾಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದಆಯೋಜಿಸಲಾದಅತಿಥಿಉಪನ್ಯಾಸದಲ್ಲಿ ಮಾತನಾಡಿದರು.
ವೈಜ್ಞಾನಿಕ ವಿಷಯವಾದ ಭೌತಶಾಸ್ತ್ರವನ್ನುತಮ್ಮ ದಿನನಿತ್ಯದಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ.ಭೌತಶಾಸ್ತ್ರವೆಂಬುದು ಕೇವಲ ವೈಜ್ಞಾನಿಕ ವಿಷಯಗಳಿಗೆ ಸೀಮಿತವಾಗಿರಬಾರದು.ಅದನ್ನುತಮ್ಮದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥರಾದ ನಿಶಾ ಕೆ.ಎಮ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.