ವಿದ್ಯಾಗಿರಿ: ನಮ್ಮ ಪ್ರಾಚೀನ ಆರ್ಯುವೇದ ವೈದ್ಯ ಪದ್ದತಿಯು ಜಗತ್ತಿನ ಶ್ರೇಷ್ಠ ವೈದ್ಯ ಪದ್ದತಿಯಾಗಿದೆ ಎಂದು ಬಳ್ಳಾರಿಯ ತಾರನಾಥ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ. ಮಾಧವ್ ಡಿಗ್ಗಾವಿ ಹೇಳಿದರು.
ಆಳ್ವಾಸ್ ಆರ್ಯುವೇದ ಕಾಲೇಜು ಮತ್ತು ಆಸ್ಪತ್ರೆ ‘’ಆಯುರ್ವೇದ ದಿನಚರಣೆಯ’’ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರತಿಯೊಬ್ಬರು ಆಯುರ್ವೇದ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕೆಲಸ ಮಾಡಬೇಕು. ಯಾವ ವಿಷಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೆವೆಯೋ ಆ ವಿಷಯವೇ ನಮ್ಮನ್ನ ಎತ್ತರಕ್ಕೆ ಬೆಳೆಸುತ್ತದೆ ಎಂದರು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಕುರಿಯನ್ ಮಾತನಾಡಿ ಆಯುರ್ವೇದ ವೈದ್ಯ ಪದ್ದತಿಗೆ ಇರುವ ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಅದರೆ ಪ್ರಸ್ತುತ ದಿನಗಳಲ್ಲಿ ಜಗತ್ತಿನ ಆರೋಗ್ಯ ವ್ಯವಸ್ಥೆಯನ್ನು ಫಾರ್ಮೆಸಿ ಕಂಪನೆಗಳು ನಿಯಂತ್ರಿಸುತ್ತಿರುವುದು ವಿಷಾದನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆರ್ಯುವೇದ ಕಾಲೇಜಿನ ಪ್ರಾಂಶುಪಾಲೆ ಡಾ. ಝೆನಿಕಾ ಡಿಸೋಜಾ ಮಾತನಾಡಿ ಆಯುರ್ವೇದ ಪದ್ದತಿಯನ್ನು ಪ್ರತಿಯೊಬ್ಬರು ಉಳಿಸಿ ಬೆಳಸಬೇಕು. ಅಲ್ಲದೆ ನಾವು ಕಲಿತ ವಿಷಯಗಳ ಅರಿವನ್ನು ಮುಂದಿನ ಜನಾಂಗಕ್ಕೆ ಪಸರಿಸುವುದು ಯುವಜನರ ಕರ್ತವ್ಯ ಕಿವಿಮಾತು ಹೇಳಿದರು.
ಆಯುರ್ವೇದ ದಿನಾಚರಣೆಯ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿನಿ ಡಾ. ಶಿಲ್ಪ ಮತ್ತು ಡಾ.ಸೊನಮ್ ಕಾರ್ಯಕ್ರಮ ನಿರೂಪಿಸಿದರು.