ಆಳ್ವಾಸ್‍ನಲ್ಲಿ ಇಂಫಿರಿಯಮ್ 2019 ಫೆಸ್ಟ್

ಮೂಡುಬಿದಿರೆ: ಮಿಜಾರಿನಲ್ಲಿರುವ ಅಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯುನ್ಮಾನ ವಿಭಾಗದ ಇವಿಯೋನಿಕ್ಸ್ ಪ್ರಸ್ತುತ ಪಡಿಸಿದ ಇಂಫಿರಿಯಮ್ 2019 ಫೆಸ್ಟ್‍ಗೆ ಕಾಲೇಜಿನ ಸಭಾಂಗಣದಲ್ಲಿ ಚಾಲನೆಯನ್ನು ನೀಡಲಾಯಿತು.
ಮಂಗಳೂರು ಇನ್ಪೋಸಿಸ್ ಟೆಕ್ನಾಲಜಿಸ್ ಲಿಮಿಟೆಡ್‍ನ ಸಿನೀಯರ್ ಟೆಕ್ನಾಲಜಿ ಅರ್ಚಿಟೆಕ್ಟ್ ವಿಜಯ್ ಕೆ ಹೆಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಟ್ರಸ್ಟಿ ವಿವೇಕ್ ಅಳ್ವ, ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಡಾ. ದತ್ತಾತ್ರೇಯ, ವಿಭಾಗದ ಮುಖ್ಯಸ್ಥ ಡಾ.ಡಿ.ವಿ. ಮಂಜುನಾಥ್, ವಿದ್ಯಾರ್ಥಿ ಪ್ರತಿನಿದಿ ಧೀರಜ್ ಶೆಟ್ಟಿ ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆದ ಫೆಸ್ಟ್‍ನಲ್ಲಿ 300 ತಂಡಗಳು ನೊಂದಾಯಿಸಿದ್ದು 10 ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಪಾಪಿರಸ್, ಕೊಲೆಜ್ ಮೆಕಿಂಗ್, ಮೆಕೆಥನ್, ಟಕ್ ಚಾರಡೆಸ್, ಮಾಕ್ ಪ್ರೆಸ್, ಟೆಕ್ ಹಂಟ್, ಟೆಕ್ ಕ್ವಿಝ್, ಗೇಮ್ ಝೋನ್, ಸೂಪರ್ ಮೀನಿಟ್ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
Highslide for Wordpress Plugin