ಮೂಡುಬಿದಿರೆ: ಆಳ್ವಾಸ್‍ನಲ್ಲಿ ಆಚರಿಸುವ ಒಣಂ ದೇಶದ ಎಲ್ಲಾ ಧರ್ಮ ಜಾತಿಯವರು ಒಂದೆಡೆ ಸೇರಿ, ಸಮಾನರಾಗಿ ಆಚರಿಸಲು ಇರುವ ಭವ್ಯ ವೇದಿಕೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು. ಅವರು ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಒಣಂ ಹಬ್ಬದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.
ದೇಶದ ಏಕತೆಯನ್ನು ಎತ್ತಿಹಿಡಿಯುವಲ್ಲಿ ಓಣಂ ಅತ್ಯಂತ ಮಹತ್ತರವಾದ ಪಾತ್ರವಹಿಸುತ್ತದೆ. ಅನೇಕ ಸಂಧರ್ಭಗಳಲ್ಲಿ ಹಬ್ಬ ಹಾಗೂ ಧರ್ಮದ ವಿಷಯಗಳಲ್ಲಿ ನಮ್ಮ ನಡುವೆ ಸಂಘರ್ಷವನ್ನು ಕಾಣಬಹುದು. ಆದರೆ ಒಣಂ ಹಬ್ಬ ಪ್ರತಿಯೊಬ್ಬರನ್ನೂ ಒಗ್ಗೂಡಿಸಿ ಜೊತೆಯಲ್ಲಿ ಸಂಭ್ರಮಿಸಲು ಅವಕಾಶ ಮಾಡಿಕೊಡುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವನಿತಾ ಶೆಟ್ಟಿ, ವಿದ್ಯಾರ್ಥಿ ಸಂಯೋಜಕ ಅಭಿಜಿತ್, ವಿದ್ಯಾರ್ಥಿಗಳು
ಉಪಸ್ಥಿತರಿದ್ದರು.
ಬಾಕ್ಸ್ ಐಟಮ್:
●ಒಣಂ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
●ಪೂಕಳಂ, ಉರಿಯಡಿ, ಸೂಜಿ ದಾರ ಸ್ಫರ್ಧೆಗಳು ಎಲ್ಲರ ಗಮನ ಸೆಳೆದವು
●ಅವಿಯಾಲ್, ಕುಟುಕರಿ, ಪಾಯಸಂ ಹಾಗೂ ವಿವಿಧ ಬಗೆಯ ಖಾಧ್ಯಗಳು
●ಚೆಂಡೆ, ಫ್ಯೂಶನ್ ಡ್ಯಾನ್ಸ್, ಕೇರಳ ಜನಪದ ನೃತ್ಯ. ಒಣಂನ ಇತಿಹಾಸ ಸಾರುವ ನೃತ್ಯ.