ಆಳ್ವಾಸ್‍ನಲ್ಲಿ ವಿಕಿಸೋರ್ಸ್‍ನ ತರಬೇತಿ ಶಿಬಿರ


ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ವಿಕಿಪೀಡಿಯಾ ಅಸೋಸಿಯೇಷನ್ ಹಾಗೂ ಸೆಂಟರ್ ಫಾರ್ ಇಂಟರ್‍ನೆಟ್ ಆಂಡ್ ಸೊಸೈಟಿ (ಸಿಐಸ್), ಬೆಂಗಳೂರು ಇದರ ವತಿಯಿಂದ ಮೂರು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಸೆಂಟರ್ ಫಾರ್ ಇಂಟರ್‍ನೆಟ್ ಆಂಡ್ ಸೊಸೈಟಿಯ ಪ್ರೋಗ್ರಾಮ್ ಮ್ಯಾನೇಜರ್ ಟಿಟೊ ದೊತ್ತಾ ಮಾತನಾಡಿ, ಇಂದಿನ ಡಿಜಿಟಲೀಕರಣದ ಜಗತ್ತಿನಲ್ಲಿನ ಈ-ಪುಸ್ತಕದ ಬಳಕೆ ಹಾಗೂ ಇಲ್ಲಿನ ಹಲವಾರು ಸಮಸ್ಯೆಗಳ ಕುರಿತು ತಿಳಿಸಿದರು. ಜತೆಗೆ ವಿಕಿಸೊರ್ಸ್ ಇಂತಹ ಹಲವಾರು ಸಮಸ್ಯೆಗಳನ್ನು ಹೇಗೆ ನಿವಾರಿಸಿ ಓದುಗರಿಗೆ ಸಹಾಯ ಮಾಡುತ್ತದೆ ಎಂದು ಮಾಹಿತಿ ನೀಡಿದರು.

ಸೆಂಟರ್ ಫಾರ್‍ಇಂಟರ್‍ನೆಟ್ ಆಂಡ್ ಸೊಸೈಟಿಯ ಅನಂತ್ ಸುಬ್ರಾಯ ಮಾತನಾಡಿ, ವಿಕಿಪೀಡಿಯ ಹೇಗೆ ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಹಕಾರಿಯಾಗಿ ಸಮಾಜಕ್ಕೂ ಕೊಡುಗೆಯಾಗಬಲ್ಲದು ಎಂಬುದನ್ನು ವಿವರಿಸಿದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೋ.ಕುರಿಯನ್, ಮಾತನಾಡಿ, ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ವಿಕಿಪೀಡಿಯ ಉಚಿತವಾಗಿ ಜ್ಞಾನವನ್ನ ಇಡೀ ಮನಕುಲಕ್ಕೆ ಹಂಚುತ್ತಿದೆ. ತಮ್ಮ ಜ್ಞಾನವನ್ನು ಇತರರೊಂದಿಗೆ ಹಂಚುವುದಕ್ಕಿಂತ ಮಹತ್ವವಾದದ್ದು ಇನ್ನೊಂದಿಲ್ಲ ಎಂದರು.

ಆಳ್ವಾಸ್ ವಿಕಿಪೀಡಿಯ ಅಸೋಸಿಯೇಷನ್‍ನ ಸಂಯೋಜಕ ಅಶೋಕ ಕೆ.ಜಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಳದೆ ಎರಡು ವರ್ಷಗಳಲ್ಲಿನ ವಿದ್ಯಾರ್ಥಿಗಳ ಸಾಧನೆಯನ್ನು ತಿಳಿಸಿದರು. ಉಪನ್ಯಾಸಕಿ ಶಿಲ್ಪಾ ಭಟ್ ಎನ್.ಎಚ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಆಳ್ವಾಸ್ ವಿಕಿಪೀಡಿಯ ಅಸೋಸಿಯೇಷನ್‍ನ ಪ್ರಣವ್ ಶಿವಕುಮಾರ್, ಯಕ್ಷಿತಾ, ಹಾಗೂ ಅಶ್ವಿನಿ ಉಪಸ್ಥಿತರಿದ್ದರು.

Highslide for Wordpress Plugin