ಆಳ್ವಾಸ್‍ನಲ್ಲಿ ಸ್ತನಪಾನದ ಬಗ್ಗೆ ಜಾಗೃತಿ ಕಾರ್ಯಕ್ರಮ

ಮೂಡುಬಿದಿರೆ: ಸ್ತನಪಾನ ಮಾಡಿಸುವುದರಿಂದ ತಾಯಿಯು ತನ್ನ ಮಕ್ಕಳನ್ನು ರೋಗಗಳಿಂದ ದೂರವಿಡಬಹುದು ಎಂದು ಆಳ್ವಾಸ್‍ನ ಕಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ|| ರಮೇಶ ಹೇಳಿದರು.
ಅವರು ಆಳ್ವಾಸ್ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ‘ಸ್ತನಪಾನ ಜಾಗೃತಿ ವಾರ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸ್ತನಪಾನದ ಅಗತ್ಯತೆಯನ್ನು ಪ್ರತಿಯೊಬ್ಬ ತಾಯಿಯು ಅರ್ಥಮಾಡಿಕೊಳ್ಳಬೇಕು. ಆಗ ಮಗು ಆರೋಗ್ಯವಾಗಿ ಬೆಳೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ಕಸೂತಿ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ|| ರೇವತಿ ಭಟ್ ಮಾತನಾಡಿ, ತಾಯಿಯ ಹಾಲು ಮಗುವಿಗೆ ದನದ ಹಾಲು ಕರುವಿಗೆ ಎನ್ನುವ ಹಾಗೆ ತಾಯಿಯ ಹಾಲಿನಷ್ಟು ಉತ್ತಮವಾದ ಹಾಗೂ ಪೌಷ್ಠಿಕಾಂಶವನ್ನು ಹೊಂದಿರುವ ಆಹಾರ ಇನ್ನೊಂದಿಲ್ಲ. ಎಳ್ಳು, ಮೆಂತೆ, ತರಕಾರಿ, ಮತ್ತು ಕಾಳುಗಳನ್ನು ತಿನ್ನುವುದರಿಂದ ಗರ್ಭಿಣಿಯರು ಎದೆ ಹಾಲನ್ನು ಹೆಚ್ಚಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಆಳ್ವಾಸ್ ಆರೋಗ್ಯ ಕೇಂದ್ರವು ಒಂದು ವಾರದ ಸ್ತನಪಾನ ಜಾಗೃತಿ ಕಾರ್ಯಕ್ರಮ ಹಾಗೂ ಉಚಿತ ತರಬೇತಿ ಕಾರ್ಯಕ್ರಮವನ್ನು ಮೂಡಬಿದರೆ ಸುತ್ತಮುತ್ತಲಿನ ಹಳ್ಳಿಗಳಾದ ಪೆರಾಡಿ, ಮರೋಡಿ, ಶಿರ್ತಾಡಿ ಹಳ್ಳಿಗಳಲ್ಲಿ ಆಗಸ್ಟ್ 1 ರಿಂದ 7ರ ವರೆಗೆ ಹಮ್ಮಿಕೊಳ್ಳಲಾಗಿತ್ತು. ‘ಸ್ತನಪಾನ ಜಾಗೃತಿ’ ಬಗ್ಗೆ ಆಳ್ವಾಸ್ ನರ್ಸಿಂಗ್ ವಿದ್ಯಾರ್ಥಿಗಳು ಕಿರುಪ್ರಹಸನ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಎ ಯತಿಕುಮಾರ್ ಸ್ವಾಮಿ ಗೌಡ ಹಾಗೂ ಆಡಳಿತ ಅಧಿಕಾರಿಯಾದ ಜೋಬಿನ್ ಜೋಸೆಫ್ ಉಪಸ್ಥಿತರಿದ್ದರು. ಅವರು ಪಾಲ್ಗೊಂಡಿದ್ದರು. ನರ್ಸಿಂಗ್ ವಿಧ್ಯಾರ್ಥಿನಿ ನೀತಾ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin