ಮೂಡುಬಿದಿರೆ: ಕ್ರೀಡೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬನ ಆದ್ಯ ಕರ್ತವ್ಯವಾಗಿದ್ದು, ಮನುಷ್ಯನ ಜೀವನದ ಸರ್ವಾಂಗೀಣ ಬೆಳೆವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ಆಯೋಜಿಸಿದ ಆರನೇ ವರ್ಷದ ವರಿಷ್ಠಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಆಳ್ವಾಸ್ ಪ್ರತಿಷ್ಠಾನ ಕೀಡೆ ಮತ್ತು ಸಂಸ್ಕ್ರತಿಯನ್ನು ಉಳಿಸಿ, ಬೆಳೆಸಿದ ಸಂಸ್ಥೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಅಧ್ಯಕ್ಷತೆವಹಿಸಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ ಗ್ರಾಮೀಣ ಕ್ರೀಡೆಯಲ್ಲಿ ಇರುವ ಸೊಬಗು ಆಧುನಿಕ ಕ್ರೀಡೆಯಲ್ಲಿ ಇಲ್ಲ. ಮಾತ್ರವಲ್ಲದೇ ಕ್ರೀಡೆ ಮತ್ತು ಸಂಸ್ಕ್ರತಿಯು ಪಠ್ಯದ ಒಂದು ಭಾಗ ಎಂದು ಹೇಳಿದರು.
ಮೆಕ್ಯಾನಿಲ್ ವಿಭಾಗದ ಸಂಯೋಜಕ ಡಾ. ಸತ್ಯನಾರಾಯಣ್, ಪ್ರಾಧ್ಯಾಪಕ ಕೆ.ವಿ ಸುರೇಶ್ ಉಪಸ್ಥಿತರಿದ್ದರು.
ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿನಿ ಸೀಮಾ ಕಾರ್ಯಕ್ರಮ ನಿರೂಪಿಸಿದರು.
ನೂರು ಮೀಟರ್ ಓಟ, ಗೋಲಿ ಆಟ, ಲೇಮನ್ ಆಂಡೆ ಸ್ಪೂನ್ ರೆಸ್, ಪಿಲ್ಲೋ ಫೈಟ್, ಲಗೋರಿ, ಹಗ್ಗ ಜಗ್ಗಾಟ, ಕಬ್ಬಡಿ, ಕೋ ಕೋ, ನಾಯಿ ಮೂಳೆ ಮುಂತಾದ ವಿಭಿನ್ನ ಗ್ರಾಮೀಣ ಕ್ರೀಡೆಗಳು. ಕರಾವಳಿ ಮತ್ತು ಉತ್ತರ ಕನ್ನಡದ ವಿಶೇಷ ಖಾದ್ಯಗಳಾದ ನೀರ್ ದೊಸೆ, ಚಿಕನ್ ಸುಕ್ಕ, ಕಬಾಬ್, ರಾಗಿ ಮುದ್ದೆ, ದೊಣ್ಣೆ ಬಿರಿಯಾನಿ ಖಾದ್ಯಗಳು ಆಕರ್ಷಿಸಿದವು.