ಆಳ್ವಾಸ್ ಎನ್‍ಎಸ್‍ಎಸ್ ವಿದ್ಯಾರ್ಥಿಗಳಿಗಾಗಿ ಕೆಸರಾಟದ ಪಾಠ

ಮೂಡಬಿದಿರೆ: ಕಾರ್ಕಳದ ನಿಟ್ಟೆ ಸಮೀಪದ ಕಂಬಳಕೋಡಿ, ಪದವು ಎಂಬಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 200 ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗಾಗಿ ಶ್ಯಾಮ ಶೆಟ್ಟಿಯವರ ಗದ್ದೆಯಲ್ಲಿ ಕೆಸರಾಟದ ಪಾಠ ಇತ್ತೀಚೆಗೆ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ಕೃಷಿ ಕೆಲಸಗಳ ಹಾಗೂ ಗ್ರಾಮೀಣ ಆಟಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕಾರ್ಕಳದ ಪೋಲೀಸ್ ಠಾಣಾಧಿಕಾರಿ ನಂಜ ನಾಯಕ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಮೊಬೈಲ್ ಹಾಗೂ ಜಾಲತಾಣಗಳಿಂದ ಹೊರಬಂದು ಜೀವಿಸುವಂತೆ ಕರೆ ನೀಡಿದರು. ವಿದ್ಯಾರ್ಥಿಗಳು ಕೆಸರುಗದ್ದೆ ಓಟ, ರಿಲೇ, ಮಾನವ ಪಿರಮಿಡ್ ರಚನೆ ಮುಂತಾದ ಆಟೋಟ ಕಸರತ್ತುಗಳಲ್ಲಿ ಪಾಲ್ಗೊಂಡರು. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳು ಹಾಗೂ ಊರಿನ ಚಿಣ್ಣರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.ಈ ಕಾರ್ಯಕ್ರಮಕ್ಕೆ ಕಾರ್ಕಳದ ಜನಪ್ರಿಯ ಶಾಸಕರಾದ ಶ್ರೀ ಸುನೀಲ್ ಕುಮಾರ್ ರವರು ಆಗಮಿಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು ಅಲ್ಲದೇ ದಣಿದ ವಿದ್ಯಾರ್ಥಿಗಳಿಗೆ ತಮ್ಮ ನಿವಾಸದಲ್ಲಿ ಉಪಾಹಾರ ವ್ಯವಸ್ಥೆ ಒದಗಿಸಿದರು.
ಈ ಸಭೆಯಲ್ಲಿ ನಿಟ್ಟೆ ಗ್ರಾ.ಪಂ. ಸದಸ್ಯೆ ಜ್ಯೋತಿ, ಬಾಲಕೃಷ್ಣ ಹೆಗ್ಡೆ, ಶಶಿಧರ ಮೂಲ್ಯ , ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಮ್.ಡಿ. ಯೋಜನಾಧಿಕಾರಿ ಶ್ರೀ ದಾಮೋದರ್, ಕಾರ್ಯಕ್ರಮದ ಆಯೋಜಕರಾದ ಉಪನ್ಯಾಸಕರಾದ ಅಂಬರೀಷ ಚಿಪ್ಳೂಣ್ಕರ್ ಮುಂತಾದವರು ಉಪಸ್ಥಿತರಿದ್ದರು. ಕಾಲೇಜಿನ ಕಲಾ ವಿಭಾಗದ ಡೀನ್ ಪ್ರೋ. ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

Highslide for Wordpress Plugin