ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಕಾಲೇಜು, ಆಳ್ವಾಸ್ ರಾಷ್ಟ್ರೀಯ ಯುವ ಸೈನಿಕ ದಳ (ಆರ್ಮಿ) ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇದರ ಜಂಟಿ ಆಶ್ರಯದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ಸಭಾಂಚಿಗಣದಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು.
ಆಳ್ವಾಸ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ವಿನಯ್ ಆಳ್ವ ಉದ್ಘಾಟಿಸಿದರು.
ಆಳ್ವಾಸ್ ಆಯುರ್ವೇದ ಕಾಲೇಜಿನ ಡಾ. ಸ್ಮಿತಾ ಭಟ್ ಮಾತನಾಡಿ ಯೋಗದ ಉಗಮ, ಬೆಳವಣಿಗೆ ಹಾಗೂ ಅಗತ್ಯದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ತದನಂತರ ಸುಮಾರು 90 ವಿದ್ಯಾರ್ಥಿಗಳಿಂದ 60 ನಿಮಿಷದ ಕಾಲ ಸಾಮೂಹಿಕ ಯೋಗಾಭ್ಯಾಸ ನಡೆಯಿತು.
ಆಳ್ವಾಸ್ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರಾಷ್ಟ್ರೀಯ ಯುವ ಸೈನಿಕ ದಳ ಆರ್ಮಿ ವಿಂಗ್ನ ಸದಸ್ಯರು ಯೋಗ ಪ್ರದರ್ಶನದಲ್ಲಿ ಭಾಗವಹಿಸಿದರು.
ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೆನಿಕಾ ಡಿ’ಸೋಜಾ, ಆಡಳಿತಾಧಿಕಾರಿ ಜೋಬಿನ್, ಡಾ. ಸ್ಮಿತಾ ಭಟ್, ಉಪನ್ಯಾಸಕರು, ರಾಷ್ಟ್ರೀಯ ಯುವ ಸೈನಿಕ ದಳದ ಅಧಿಕಾರಿ ಕ್ಯಾಪ್ಟನ್ ಬಿ. ರಾಜೇಶ್ ಉಪಸ್ಥಿತರಿದ್ದರು.