ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್

ಮೂಡಬಿದ್ರೆ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಸಹಯೋಗದಲ್ಲಿ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 39ನೇ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಮತ್ತು ಭಿನ್ನ ಸಾಮಥ್ರ್ಯದ ಮಕ್ಕಳ ಅಥ್ಲೆಟಿಕ್ಸ್ ಚ್ಯಾಂಪಿಯನ್‍ಶಿಪ್‍ನಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಒಟ್ಟು 500 ಅಂಕಗಗಳೊಂದಿಗೆ ವೀರಾಗ್ರಣಿಯಾಗಿ ಹೊರಹೊಮ್ಮಿತು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಸುಬ್ರಮಣ್ಯ. ಎಡಪಡಿತ್ತಾಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮೂಡಬಿದ್ರೆಯು ಎಲ್ಲಾ ವಿಚಾರಗಳಲ್ಲೂ ವೈಶಿಷ್ಟ್ಯತೆಯನ್ನು ಹೊಂದಿದೆ. ಆಳ್ವಾಸ್ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯ ಅವಿಭಾಜ್ಯ ಅಂಗವಾಗಿ, ರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸಾಧನೆ ಮೆರೆಯಲು ಸದಾ ಸಹಕರಿಸಿದೆ. ಪ್ರತಿಯೊಬ್ಬರ ಗೆಲುವಿಗೂ ಅಭ್ಯಾಸದ ಜತೆಗೆ ಪ್ರೇರಣೆ, ಸ್ಫೂರ್ತಿ ಅತ್ಯವಶ್ಯಕ ಎಂದರು.
ಮೂಡಬಿದ್ರೆಯ ಮಾಜಿ ಶಾಸಕ ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಎಲ್ಲಾ ಕ್ರೀಡಾಪಟುಗಳು ರಾಜ್ಯ- ರಾಷ್ಟ್ರಮಟ್ಟದಲ್ಲಿ ತಮ್ಮ ಸಾಧನೆಯನ್ನು ಮೆರೆಯಬೇಕು ಎಂದು ಶುಭ ಹಾರೈಸಿದರು.
ಮಂಗಳೂರು ವಿವಿ ಕ್ರೀಡಾಪಟುಗಳಿಗೆ ಸದಾ ಸಹಕಾರ ನೀಡುತ್ತಾ, ಅವರ ಏಳಿಗೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ವರ್ಷಕ್ಕೆ 8ಕೋಟಿಯಷ್ಟು ಹಣವನ್ನು ಕ್ರೀಡೆಗೆ ಮೀಸಲಿಟ್ಟಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಹೇಳಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್. ಸಿ.ಕೆ ಉಪಸ್ಥಿತರಿದ್ದರು.
ಕೂಟ ದಾಖಲೆಯನ್ನು ಸಾಧಿಸಿದ ವಿದ್ಯಾರ್ಥಿಗಳಿಗೆ ತಲಾ ರೂಪಾಯಿ 2000 ನಗದು ಬಹುಮಾನ ನೀಡಲಾಯಿತು.
ಬಾಕ್ಸ್ ಐಟಮ್:
• ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಅಥ್ಲೆಟಿಕ್ಸ್ ಚ್ಯಾಂಪಿಯನ್‍ಶಿಪ್‍ನಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು ಸತತ 16ನೇ ಬಾರಿಗೆ ಸಮಗ್ರ ಚ್ಯಾಂಪಿಯನ್ ಆಗಿ ಮೂಡಿಬಂದಿತು.
• ಮಂಗಳೂರು ವಿಶ್ವವಿದ್ಯಾಲಯದ ಒಟ್ಟು 48 ಕೂಟ ದಾಖಲೆಗಳಲ್ಲಿ 47 ಕೂಟ ದಾಖಲೆಗಳು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಹೆಸರಿನಲ್ಲಿದೆ.
• 39ನೇ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಅಥ್ಲೆಟಿಕ್ಸ್‍ನಲ್ಲಿ ಆಳ್ವಾಸ್ ಕಾಲೇಜಿಗೆ 07 ಕೂಟ ದಾಖಲೆಗಳು ಲಭಿಸಿದೆ.
ಕ್ರೀಡಾ ಕೂಟದ ಅಂತ್ಯದಲ್ಲಿ ಫಲಿತಾಂಶ ಹೀಗಿದೆ:

 ಪುರುಷರ ಚ್ಯಾಂಪಿಯನ್ ತಂಡ: ಆಳ್ವಾಸ್ ಕಾಲೇಜು ಮೂಡಬಿದ್ರೆ -ಸೈಂಟ್ ಫಿಲೋಮಿನಾ ಕಾಲೇಜ್ ಆಸೋಸಿಯೇಶನ್ ಟ್ರೋಪಿ
(ಅಂಕಗಳು: 260)
 ಮಹಿಳೆಯರ ಚ್ಯಾಂಪಿಯನ್ ತಂಡ: ಆಳ್ವಾಸ್ ಕಾಲೇಜು ಮೂಡಬಿದ್ರೆ- ಅಕಾಡೆಮಿ ಜನರಲ್ ಎಜುಕೇಶನ್ ಟ್ರೋಪಿ-(ಅಂಕಗಳು: 240)
 ಒವರ್ ಆಲ್ ಚ್ಯಾಂಪಿಯನ್ ತಂಡ: ಆಳ್ವಾಸ್ ಕಾಲೇಜು ಮೂಡಬಿದ್ರೆ (ಅಂಕಗಳು: 500)
 ಪುರುಷರ ವಿಭಾಗದಲ್ಲಿ ಉತ್ತಮ ಅಥ್ಲೆಟ್: ಅಶ್ವಿನ್ ಕೆ. ಪಿ ಆಳ್ವಾಸ್ ಕಾಲೇಜು(1182 ಅಂಕ) (10.7ಸೆಕೆಂಡ್)
 ಉತ್ತಮ ಮಹಿಳಾ ಅಥ್ಲೆಟ್: ಧನಲಕ್ಷ್ಮೀ.ಎಸ್ ಆಳ್ವಾಸ್ ಕಾಲೇಜು ಮೂಡಬಿದ್ರೆ
ಮಹಿಳಾ ವಿಭಾಗ:
 4ನೇ ಸ್ಥಾನ: ಡಾ.ಎನ್.ಎಸ್.ಎಮ್ ನಿಟ್ಟೆ ಕಾಲೇಜು (ಅಂಕ- 25)
 3ನೇ ಸ್ಥಾನ: ಎಸ್.ಡಿ.ಎಮ್ ಕಾಲೇಜು (ಅಂಕ- 39)
 2ನೇ ಸ್ಥಾನ: ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು (ಅಂಕ- 59)
ಪುರುಷರ ವಿಭಾಗ:
 4ನೇ ಸ್ಥಾನ: ವಿವೇಕಾನಂದ ಕಾಲೇಜು ಪುತ್ತೂರು, ಸೈಂಟ್ ಫಿಲೋಮಿನಾ ಪುತ್ತೂರು, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು, (ಅಂಕ- 13)
 3ನೇ ಸ್ಥಾನ: ಮಿಲಾಗ್ರಿಸ್ ಕಾಲೇಜು ಕಲ್ಯಾಣ್‍ಪುರ(ಅಂಕ-24)
 2ನೇ ಸ್ಥಾನ: ಎಸ್.ಡಿ.ಎಮ್ ಕಾಲೇಜು ಉಜಿರೆ(ಅಂಕ-68)

ಕ್ರೀಡಾ ಕೂಟದ ಅಂತ್ಯದಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜಿಗೆ
ಲಭಿಸಿದ ಒಟ್ಟು ಪದಕಗಳು
ಚಿನ್ನ: 45
ಬೆಳ್ಳಿ: 24
ಕಂಚು: 06

ಮೀಟ್ ರೆಕಾರ್ಡ್:
1. 200ಮೀ ಓಟದಲ್ಲಿ ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಧನಲಕ್ಷ್ಮೀ(24.9ಸೆಕೆಂಡ್) 2014-15ರಲ್ಲಿನ ಆಳ್ವಾಸ್ ಕಾಲೇಜಿನ ಪ್ರಿಯಾಂಕಾ ಕಳಗಿ ಎಸ್.ಎಸ್(24.9ಸೆಕೆಂಡ್) ಅವರ ಕೂಟ ದಾಖಲೆಗೆ ಸಮಾನಾಂತರವಾಗಿ ದಾಖಲೆಯನ್ನು ಮೆರೆದರು.
2. 20ಕಿ.ಮೀ ನಡಿಗೆಯಲ್ಲಿ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಜುನೇದ್(1:28ಸೆಕೆಂಡ್) ಹೊಸ ದಾಖಲೆಯನ್ನು ಸೃಷ್ಟಿಸಿದ್ದು, ಆಳ್ವಾಸ್ ಕಾಲೇಜಿನ ಮನೋಜ್(1:36ಸೆಕೆಂಡ್) ದಾಖಲೆಯನ್ನು ಮುರಿದಿದ್ದಾರೆ.
3. 20ಕಿ.ಮೀ ನಡಿಗೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಬಂಧನ್ ಪಾಟಿಲ್(1:56ಸೆಕೆಂಡ್) ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

Highslide for Wordpress Plugin