ಆಳ್ವಾಸ್ ನರ್ಸಿಂಗ್ ಒರಿಯೆಂಟೇಶನ್ ಕಾರ್ಯಕ್ರಮ

ಮೂಡುಬಿದಿರೆ: ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರು ದೂರದೃಷ್ಟಿಯ ಗುರಿಗಳನ್ನು ಇಟ್ಟುಕೊಳ್ಳುವುದು ಅತ್ಯಗತ್ಯ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಅವರು ಆಳ್ವಾಸ್ ನರ್ಸಿಂಗ್ ಕಾಲೇಜಿನ 24 ನೇ ಬ್ಯಾಚ್‍ನ ಬಿಎಸ್ಸಿ ನರ್ಸಿಂಗ್, 18ನೆ ಬ್ಯಾಚ್‍ನ ಎಂಎಸ್ಸಿ ನರ್ಸಿಂಗ್ ಮತ್ತು 25ನೆ ಬ್ಯಾಚ್‍ನ ಜನರಲ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಒರಿಯೆಂಟೆಶನ್ ಕಾಂiÀರ್iಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನರ್ಸಿಂಗ್ ಹುದ್ದೆಯು ಅದರದೇ ಆದ ಮಹತ್ವ ಹೊಂದಿದ್ದು, ಅನ್ಯ ಹುದ್ದೆಗಳಿಗಿಂತ ವಿಭಿನ್ನವಾಗಿದೆ. ಅಲ್ಲದೇ ಸೇವಾ ಆಧಾರಿತ ಗುರಿಗಳ ಮೂಲಕ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸಲು ಈ ಕೆಲಸದಲ್ಲಿ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಯತಿಕುಮಾರ್ ಸ್ವಾಮಿ ಗೌಡ ಮಾತನಾಡಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ಶಿಸ್ತಿನ ಕುರಿತು ಮಾಹಿತಿ ನೀಡಿದರು. ಉಪ ಪ್ರಾಂಶುಪಾಲರಾದ ಪ್ರೋ. ಆಶಾ ಸೈಂತಿಯಾ ಡೆಸಾ ವಿದ್ಯಾರ್ಥಿಗಳಿಗೆ ಕಾಲೇಜು ಮತ್ತು ಕ್ಯಾಂಪಸ್‍ನ ಕುರಿತು ಮಾಹಿತಿ ನೀಡಿದರು. ಸಹಾಯಕ ಆಡಳಿತ ಅಧಿಕಾರಿಯಾದ ಜೊಬಿನ್ ಜೊಸೆಫ್ ವಿದ್ಯಾರ್ಥಿಗಳಿಗೆ ಉನ್ನತವಾದ ಗುರಿಯನ್ನು ಮುಟ್ಟಲು ಉತ್ತೇಜನ ನೀಡಿ, ಮೊಬೈಲ್ ಬಳಕೆ ಮತ್ತು ರ್ಯಾಗಿಂಗ್ ಮುಕ್ತವಾದ ಕ್ಯಾಂಪಸ್‍ನ ಕುರಿತು ತಿಳಿಸಿದರು. ಉಪನ್ಯಾಸಕಿ ಶೈಲಾ ಮರಿಯಾ ಡಿಸೋಜಾ ವಂದಿಸಿ, ಸುಜಯಾ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin