ಮೂಡಬಿದಿರೆ: ಗ್ರಾಮೀಣ ಪ್ರದೇಶದ ಜೀವನ ಕ್ರಮ, ಸಂಸ್ಕ್ರತಿ, ಆಚಾರ-ವಿಚಾರ, ಪದ್ದತಿಗಳನ್ನು ಪ್ರಾಯೋಗಿಕವಾಗಿ ಅರಿಯಲು ರಾಷ್ಟ್ರೀಯ ಸೇವಾ ಯೋಜನೆಯು ಪಾಠಶಾಲೆಯಿದ್ದಂತೆ. ಆದ್ದರಿಂದ ಪ್ರತಿಯೊಬ್ಬರು ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜೆನೆಯ ಭಾಗವಾಗಿ ಜೀವನದ ನಿಜವಾದ ಸವಿಯನ್ನು ಸವಿಯಬೇಕು ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ ತಿಳಿಸಿದರು.
ಅವರು ಶನಿವಾರ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ನಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ-2019-20ರ ಉದ್ಘಾಟನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಳ್ವಾಸ್ನಲ್ಲಿ ಜರುಗುವ ರಾಷ್ಟ್ರೀಯ ಕಾರ್ಯಕ್ರಮಗಳಾದ ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್ ಹಾಗೂ ಸ್ವಚ್ಛತಾ ಅಭಿಯಾನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರ ಪಾತ್ರ ಮಹತ್ವದ್ದು. ಇದೇ ಸಂಧರ್ಭದಲ್ಲಿ ಅವರು ತಾನು ವಿದ್ಯಾರ್ಥಿಯಾಗಿದ್ದಾಗ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸ್ವಯಂ ಸೇವಕನಾಗಿ ದುಡಿದ ದಿನಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಪದವಿ ಕಾಲೇಜಿನ ಪ್ರಾಚಾರ್ಯ ಪೆÇ್ರೀ ರಮೇಶ ಶೆಟ್ಟಿ, ವಿದ್ಯಾರ್ಥಿಯು ಸ್ವತಂತ್ರನಾಗಿ ಬೆಳೆಯಲು, ಯಾವುದೇ ಸಭಾ ಕಂಪನವಿಲ್ಲದೆ ಮಾತನಾಡಲು ರಾಷ್ಟ್ರೀಯ ಸೇವಾ ಯೋಜನೆಯ ಸಹಕಾರಿಯಾಗಿದೆ. ಅಲ್ಲದೆ, ಶಿಬಿರಗಳಲ್ಲಿ ಪಾಲ್ಗೋಳ್ಳುವುದರಿಂದ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಹಬಾಳ್ವೆ, ಸಹಿಷ್ಣುತೆಯ ಮಹತ್ವವನ್ನು ತಿಳಿಯಲು ಸಾಧ್ಯ ಎಂದರು. ಆಳ್ವಾಸ್ ಸಂಸ್ಥೆಗಳು ಶಿಸ್ತಿಗೆ ಹೆಚ್ಚು ಪ್ರಸಿದ್ಧವಾಗಿದ್ದು, ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲೂ ಇದೇ ಶಿಸ್ತನ್ನು ಕಾಪಾಡಿಕೊಂಡು ಹೋಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಲಾ ನಿಖಾಯದ ಡೀನ್ ಪೆÇ್ರೀ ವೇಣುಗೋಪಾಲ ಶೆಟ್ಟಿ, ವಾಣಿಜ್ಯ ನಿಖಾಯದ ಡೀನ್ ಪ್ರಶಾಂತ ಕುಮಾರ್ ಎಂ ಡಿ, ರಾಷ್ಟ್ರೀಯ ಸೇವಾ ಯೋಜೆನೆಯ ಅಧಿಕಾರಿ ದಾಮೋದರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಾದ ಶ್ರೀನಿಧಿ ನಿರೂಪಿಸಿ, ಸುಮನ್ ಸ್ವಾಗತಿಸಿ, ಧಾತ್ರಿ ವಂದಿಸಿದರು.