ಆಳ್ವಾಸ್ ರೋಷ್ಟ್ರಂ ಸರಣಿ ಉಪನ್ಯಾಸ

ಮೂಡುಬಿದಿರೆ: ತನ್ನ ಮೇಲೆ ನಂಬಿಕೆ ಇಲ್ಲದಿರುವವನಿಗೆ ಇನ್ನೊಬ್ಬರ ಮೇಲೆಯೂ ನಂಬಿಕೆ ಇರುವುದಿಲ್ಲ. ನಾವು ಮಾಡುವ ಕೆಲಸಗಳ ಸಾದಕ-ಭಾದಕಗಳನ್ನು ಅವಲೋಕಿಸಬೇಕು. ವಿದ್ಯೆಯ ಜೊತೆ ವಿನಯವು ನಮ್ಮದಾದರೆ ನಾವು ವ್ಯಕ್ತಿ ಪರಿಪೂರ್ಣ ವ್ಯಕ್ತಿಗಳಾಗುತ್ತೇವೆ ಎಂದು ಗುಜರಾತ್ ರಾಜ್‍ಕೋಟ್‍ನ ರಾಷ್ಟ್ರಕಥಾ ಶಿಬಿರದ ಸ್ವಾಮಿ ಧರ್ಮಬಂದು ನುಡಿದರು.

ಆಳ್ವಾಸ್ ರೋಷ್ಟ್ರಂ   ಕ್ಲಬ್‍ನ ವತಿಯಿಂದ ನಡೆದ ಸರಣಿ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಾವು ಪ್ರತಿಯೊಬ್ಬರೊಂದಿಗೆ ಬೆರೆತು ಬಾಳಬೇಕು. ಅವಾಗ ಜ್ಞಾನದ ಹಂಚಿಕೆಯಾವುದಲ್ಲದೆ ಅನೇಕ ವಿಷಯಗಳ ಮನವರಿಕೆ ಅಗುತ್ತದೆ ಎಂದರು.

ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಅಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ , ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಕುರಿಯನ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕಲಿಂಡಿ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin