ಮೂಡಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಹಾಗೂ ಕೆನರಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತರ ಕಾಲೇಜು ಲಲಿತಾ ಕಲಾ ಸ್ಪರ್ಧೆ ‘ಚಿತ್ತಾರ 2019’ ರಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು.
ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಫರ್ಧೆ, ಕೊಲಾಜ್, ಭಿತ್ತಿ ಪತ್ರರಚನೆ, ಆವೆ ಮಣ್ಣಿನ ಕಲಾಕೃತಿ ರಚನೆ, ವ್ಯಂಗ್ಯ ಚಿತ್ರರಚನೆ, ರಂಗೋಲಿ, ಸ್ಥಳದಲ್ಲಿ ಛಾಯಾ ಚಿತ್ರತೆಗೆಯುವ ಸ್ಪರ್ಧೆಗಳು ಒಳಗೊಂಡಿದ್ದವು. ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಆವೆ ಮಣ್ಣಿನ ಕಲಾಕೃತಿ ರಚನೆಯಲ್ಲಿ ಪ್ರಥಮ, ರಂಗೋಲಿ ಸ್ಪರ್ಧೆಯಲ್ಲಿ ದ್ವಿತೀಯ, ಪೋಸ್ಟರ್ ಮೇಕಿಂಗ್ ಹಾಗೂ ವ್ಯಂಗ್ಯ ಚಿತ್ರರಚನೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ವಿಭಾಗದ ಮುಖ್ಯಸ್ಥ ಶರತ್ ಶೆಟ್ಟಿ ಶ್ಲಾಘಿಸಿದ್ದಾರೆ.