ಆಳ್ವಾಸ್ ಸೃಷ್ಠಿ ಕ್ಲಬ್‍ನಿಂದ ವರುಣ ಕಾರ್ಯಕ್ರಮ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸೃಷ್ಠಿ ಕ್ಲಬ್‍ನ ಸಹಯೋಗದಲ್ಲಿ ವರುಣ ಕಾರ್ಯಕ್ರಮ ನಡೆಯಿತು.
ಕೇರಳದ ಕೋಟಿಕೊಡೆ ಫಾರೂಕ್ ಕಾಲೇಜಿನ  ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕಿಶೋರ್ ಕುಮಾರ್ ಕಾರ್ಯಕ್ರಮಕ್ಕೆ ಎಐಟಿಇ ಸಭಾಂಗಣದಲ್ಲಿ ಚಾಲನೆ ನೀಡಿ, ಮಾನವ ಪರಿಸರದ ಒಂದು ಭಾಗ. ಅದರೆ ಮಾನವನು ಇಡೀ ಪರಿಸರವೇ ನನ್ನ ನಿಯಂತ್ರಣದಲ್ಲಿದೆ ಎನ್ನುವ ಮೂರ್ಖ ಧೋರಣೆಯಿಂದಾಗಿ ಪರಸರದಲ್ಲಿ ಅಸಮತೋಲ ಕಾಡುತ್ತಿದೆ. ಪರಿಸರವನ್ನು ರಕ್ಷಿಸುವುದರ ಜೊತೆಗೆ ಸಮಾಜದಲ್ಲಿ ಪರಿಸರದ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯ ವಿದ್ಯಾರ್ಥಿಗಳಿಂದ ಆಗಬೇಕಾಗಿದೆ, ಮುಂದಿನ ದಿನಗಳಲ್ಲಿ ಅನೇಕ ಮಾನವ ನಿರ್ಮಿತ ಕಾರಣಗಳೆ ಸಮಾಜಕ್ಕೆ ಮಾರಕವಾಗುವಲ್ಲಿ ಎರಡು ಮಾತಿಲ್ಲ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಈಗಾಗಲೆ 104 ಬಗೆಯ ಪಕ್ಷಿ ಪ್ರಭೇಧಗಳನ್ನು ಗುರುತಿಸುರುವುದು ಗಮನಾರ್ಹ ಸಂಗತಿ. ಶೋಭಾವನ ಮತ್ತು ಆಳ್ವಾಸ್ ನ ಬರ್ಡ್ ಪಾರ್ಕ್‍ಗೆ ಈಗಾಗಲೆ ಅನೇಕ ಪಕ್ಷಿಗಳು ವಲಸೆ ಬರುತ್ತಿರುವುದು ಸಂತಸದ ಸಂಗತಿ ಎಂದರು.
ವಿದ್ಯಾರ್ಥಿಗಳಿಗೆ ಅನೇಕ ರೀತಿಯ ಸ್ಪರ್ಧೆಗಳನ್ನು ಅಯೋಜಿಸಲಾಗಿತ್ತು. ಫೇಸ್ ಪೈಂಟಿಂಗ್, ಮಡ್  ಪೈಂಟಿಂಗ್, ಚರ್ಚಾ ಸ್ಪರ್ಧೆ, ಟ್ರೆಸರ್ ಹಂಟ್, ಬಿತ್ತಿ ಚಿತ್ರಗಳ ಅನಾವರಣ ಮತ್ತು ಕ್ವೀಝ್ ಅಯೋಜಿಸಲಾಗಿತ್ತು.
ಕೆ.ಎಲ್.ಇ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲ ಹೆಮಂತ್ , ಕೆ.ಎಲ್.ಇ ಪಬ್ಲಿಕ್ ಸ್ಕೂಲ್ (ಸಿ.ಬಿ,ಎಸ್.ಸಿ) ಪ್ರಾಂಶುಪಾಲ ಶರ್ಮಿಳಾ, ಕಾಲೇಜಿನ ಪ್ರಾಂಶಪಾಲ ಡಾ. ಪೀಟರ್ ಫೆರ್ನಾಂಡಿಸ್, ಫೋರಮ್ ಸಂಯೋಜಕ ಯುವರಾಜ್ ಉಪಸ್ಥಿತರಿದ್ದರು.
Highslide for Wordpress Plugin