ಮೂಡುಬಿದಿರೆ: ಹೆಣ್ಣು-ಗಂಡು ಎಂಬ ತಾರತಮ್ಯದ ಅಸಮಾನತೆಯ ಭಾವನೆಯನ್ನು ನಮ್ಮ ಮನೆಯಿಂದಲೇ ಹೊಗಲಾಡಿಸಬೇಕು. ನಮ್ಮ ಜೀವನದ ನಿರ್ಧಾರವನ್ನು ಮತ್ತೊಬ್ಬರು ನಿರ್ಧಾರಿಸಲು ಅವಕಾಶವನ್ನು ನೀಡಬಾರದು.ನಮ್ಮಜೀವನದಲ್ಲಿ ಮುಂದೆ ಏನಾಗಬೇಕೆಂಬ ದೃಢ ಸಂಕಲ್ಪವನ್ನು ಮಾಡಬೇಕೆಂದು ಆಳ್ವಾಸ್ ಕಾಲೇಜಿನ ಸಮಾಜಶಾಸ್ತ್ರದ ಮುಖ್ಯಸ್ಥ ಡಾ.ಮಧುಮಾಲ ತಿಳಿಸಿದರು.
ಇರುವೈಲಿನ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಆಳ್ವಾಸ್ ಕಾಲೇಜಿನ ಅಂತಿಮ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಅಂಕಿತಾ ಸಂಯೋಜನೆಯಲ್ಲಿ ಆಯೋಜಿಸಲಾದ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮತ್ತು ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಹಿಳೆಯರನ್ನು ಮತ್ತು ಮಕ್ಕಳನ್ನುದೇಶಿಸಿ ಮಾತನಾಡಿದರು.
ಮಹಿಳೆಯರು ಮಾತ್ರವಲ್ಲದೇ ಮಕ್ಕಳ ಬೆಳವಣಿಗೆಯನ್ನು ಪೋಷಕರು ನೋಡಿಕೊಳ್ಳಬೇಕು. ಮಕ್ಕಳು ದಿನಕ್ಕೆ ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು. ದಿನಕ್ಕೆ 5ಬಾರಿಯಾದರೂ ಅವರನ್ನು ಹತ್ತಿರಕರೆದು ಪ್ರೋತ್ಸಾಹವನ್ನು ನೀಡುವ ಮಾತುಗಳನ್ನಾಡಬೇಕು. ತಮ್ಮ ಮಕ್ಕಳು ಚಟುವಟಿಕೆಗಳ ನಿಗಾ ಅಗತ್ಯ ಎಂದರು.
ಮಹಿಳಾ ಶ್ರೀ ಮಾತಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ದೀಪ ದಿನೇಶ್ ಬಟಾರ, ದುರ್ಗಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಶಕುಂತಲಾ ಶಿವಾನಂದ ಕಿಟ್ಟುಬೆಟ್ಟು, ಕಾರ್ಯಕ್ರಮದ ಸಂಯೋಜಕಿ ಅಂಕಿತಾ ಉಪಸ್ಥಿತರಿದ್ದರು.
ಕಿರಣ ಕಾರ್ಯಕ್ರಮ ನಿರೂಪಿಸಿದರು.