ಕಲಿಸುವಿಕೆಯಲ್ಲಿ ಕಲಿಯುವುವಿಕೆ ಹೆಚ್ಚು: ನಾಡೋಜ ಡಾ. ಬಿ ಟಿ. ರುದ್ರೇಶ್

ಮೂಡುಬಿದಿರೆ: ಯಶಸ್ಸು ಗಳಿಸುವುದು ಯಾವುದನ್ನು ಮಾಡಬೇಕುನ್ನುವುದರಿಂದ ಅಲ್ಲ ಬದಲಾಗಿ ಏನನ್ನು ಮಾಡಬಾರದು ಎಂದು ತಿಳಿದುಕೊಳ್ಳುವುದರಿಂದ. ಕಲಿಕೆಯ ಪೂರ್ಣತೆಯು ಕೇಳುವುದಂಕ್ಕಿಂತಲೂ ಕಲಿಸುವಿಕೆಯಲ್ಲಿ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕಲಿಸುವಂತವರಾಗಬೇಕು ಎಂದು ಕರ್ನಾಟಕ ಹೋಮಿಯೋಪತಿ ಮಂಡಳಿಯ ಅಧ್ಯಕ್ಷ, ನಾಡೋಜಡಾ. ಬಿ ಟಿ. ರುದ್ರೇಶ್ ಹೇಳಿದರು.

ಮಿಜಾರಿನ ಆಳ್ವಾಸ್ ಹೋಮಿಯೊಪತಿ ಮೆಡಿಕಲ್ ಕಾಲೇಜಿನ ವತಿಯಿಂದ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಂಕಗಳು ಅಥವಾ ರ್ಯಾಂಕ್ ಮಾನ್ಯತೆಯನ್ನು ತಂದುಕೊಡುವುದಿಲ್ಲ, ಸಮಾಜದಲ್ಲಿ ವೈದ್ಯನ ಕಾರ್ಯಕ್ಷಮತೆಯನ್ನು ಮಾತ್ರ ಜನರು ಗುರುತಿಸುತ್ತಾರೆ. ವೃತ್ತಿಜೀವನದಲ್ಲಿ ಕಲಿಸಿದವರ ಕುರಿತು ವಿಚಾರಣೆ ಮಾಡುವುದಿಲ್ಲ ಆದರೆ ಕಲಿತ ಮೇಲೆ ಎಷ್ಟರ ಮಟ್ಟಿಗೆ ಪ್ರಾಯೋಗಿಕ ಅನ್ವಯವಾಗುತ್ತದೆ ಎಂಬುವುದು ಮುಖ್ಯ. ವೈದ್ಯಕೀಯ ಕೋರ್ಸುಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರುತ್ತದೆ. ಆದರೆ ವಿವಾಹವಾದ ಹೆಚ್ಚಿನ ಮಹಿಳೆಯರು ವೃತ್ತಿಯಲ್ಲಿ ಮುಂದುವರಿಯುವುದಿಲ್ಲ. ಯಾವುದೇ ವಿಷಯವನ್ನು ಆಸಕ್ತಿ ಇಲ್ಲದೆ ಆಯ್ದು ಕೊಂಡಾಗಲೂ ನಂತರದ ದಿನಗಳಲ್ಲಿ ಆದರೆಡೆಗೆ ಪ್ರೀತಿಯನ್ನು ತೋರ್ಪಡಿಸುವುದು ಮುಖ್ಯ.

ಮ್ಯಾನೇಂಜಿಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಒಂದು ಸ್ಥಾನಕ್ಕೇರುವುದಕ್ಕಿಂತಲೂ, ಸ್ಥಾನದ ಪ್ರಾಮುಖ್ಯತೆಯನ್ನು ಅರ್ಥೈಸಿಕೊಳ್ಳುವುದು ಮುಖ್ಯ. ಬದಲಾಗುತ್ತಿರುವ ಜೀವನ ಕ್ರಮಗಳು ಇಂದು ವೈದ್ಯಲೋಕದಲ್ಲಿ ಹೊಸ ಕ್ರಮಗಳನ್ನು ಸೃಷ್ಟಿಸಲು ಕಾರಣವಾಗುತ್ತಿವೆ. ಆದ್ದರಿಂದ ಕಲಿಯುವಿಕೆಯು ನಿರಂತರ ಕ್ರಿಯೆಯಾಗಬೇಕು. ಹೋಮಿಯೋಪತಿ ವಿಭಾಗದಲ್ಲಿ ಹೆಚ್ಚಿನ ಸಂಶೂಧನೆಗಳಿಗೆ ಒತ್ತು ನೀಡಬೇಕು. ನಾವಿರುವ ಕ್ಷೇತ್ರವನ್ನು ಪ್ರೀತಿಸಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯಇದರಿಂದ ಸಮಾಜಕ್ಕೆ ಮಾದರಿಯಾಗಬಹುದು. ಇತರರಿಗೆ ಮಾದರಿಯಾದರೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಆಳ್ವಾಸ್ ಹೋಮಿಯೋಪತಿ ಕಾಲೇಜು ಮತ್ತು ಕರ್ನಾಟಕ ಸರಕಾರದ ಆಯುಷ್ ವಿಭಾಗದ ಸಹಯೋಗದೊಂದಿಗೆ ಎರಡನೇ ಅವಧಿಯ ಅಂಗನವಾಡಿ ಮಕ್ಕಳ ಅಪೌಷ್ಟಿಕತೆಯ ಅಧ್ಯಯನ ಮತ್ತು ಚಿಕಿತ್ಸೆ ನೀಡುವ ಮಹತ್ವದ ಯೋಜನೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಹೋಮಿಯೋಪತಿ ಕ್ಷೇತ್ರದಲ್ಲಿ ಡಾ. ಬಿ ಟಿ ರುದ್ರೇಶ್ ಅವರ ಗಣನೀಯ ಸಾಧನೆಗಳನ್ನು ಗುರುತಿಸಿ ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಮಿಂಚಿದ ಹೋಮಿಯೋಪತಿ ಕಾಲೇಜಿನ ವಿದ್ಯಾರ್ಥಿಗಳನ್ನು ಈ ಸಂಧರ್ಭದಲ್ಲಿ ಅಭಿನಂದಿಸಲಾಯಿತು.

ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ರಾಜ್ ಆಳ್ವ ಸ್ವಾಗತಿಸಿದರು. ಯೋಜನೆಯ ಬಗ್ಗೆ ಡಾ. ಅರ್ಚನಾ ಸಿ ಇಂಗೋಲ್ ವಿಷಯವನ್ನು ಮಂಡಿಸಿದರು. ವಿಭಾಗ ಮುಖ್ಯಸ್ಥರಾದಡಾ. ವೈ ಎಮ್‍ಖಾದ್ರಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ, ಉಪಪ್ರಾಂಶುಪಾಲ ಡಾ. ಹೆರಾಲ್ಡ್ ರೋಶನ್ ಪಿಂಟೊ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿ ಜಯಾದಿತ್ಯ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin