ಮೂಡಬಿದಿರೆ: “ನಮಗೆ ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರವನ್ನು ನಾವು ಕಂಡುಕೊಳ್ಳಬಹುದು. ಎಲ್ಲಾ ಸಮಸ್ಯೆಗಳು ವಿಭಿನ್ನವಾಗಿರುವುದರಿಂದÀ ಪರಿಹಾರಗಳೂ ವಿಭಿನ್ನವಾಗಿರುತ್ತವೆ” ಎಂದು ಮಂಗಳೂರು ರೋಶಿನಿ ನಿಲಯ ಕಾಲೇಜಿನ ಉಪನ್ಯಾಸಕಿ ಡಾ. ಆಡ್ರಿ ಪಿಂಟೋ ಹೇಳಿದರು.
ಆಳ್ವಾಸ್ ಕಾಲೇಜಿನ ಮನಃಶಾಸ್ತ್ರ ವಿಭಾಗವು ಆಯೋಜಿಸಿದ್ದ “ಗುಂಪು ಆಪ್ತ ಸಮಾಲೋಚನೆ” ಎಂಬ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಇವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು “ಗುಂಪು ಆಪ್ತ ಸಮಾಲೋಚನೆಯಿಂದ ನಮ್ಮಲ್ಲಿರುವ ಶಕ್ತಿಯನ್ನು ನಾವು ಹೇಗೆ ಹೆಚ್ಚಿಸಿಕೊಳ್ಳಬಹುವುದು, ನಮ್ಮ ಭಾವನೆಯನ್ನು ಹೇಗೆ ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುವುದು ಎನ್ನುವುದನ್ನು ತಿಳಿಯಬಹುದು. ಸಮಸ್ಯೆಯನ್ನು ಬಗೆಹರಿಸಲು ಇರುವ ಇತರ ದಾರಿಗಳನ್ನು ಹುಡುಕಲು ಹಾಗೂ ನಮ್ಮಲ್ಲಿರುವ ಅರಿವು ಹಾಗೂ ಜ್ಞಾನವನ್ನು ಹೆಚ್ಚಿಸಲು ಗುಂಪು ಆಪ್ತ ಸಮಾಲೋಚನೆಯು ಸಹಾಯ ಮಾಡುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ದೀಪಾ ಕೊಠಾರಿ ಹಾಗೂ ವಿಭಾಗದ ಇತರ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಸಾರಾ ವಿಜಿ ನಿರೂಪಿಸಿ, ಆಗ್ನೇಸ್ ರಾಣಿ ವಂದಿಸಿದರು.