“ಡಿಜಿಟಲೈಸೇಶನ್ ಇನ್ ಮ್ಯಾನೇಜ್‍ಮೆಂಟ್ ಆ್ಯಂಡ್ ಬುಸಿನೆಸ್ ಪ್ರಾಕ್ಟಿಸ್”

ವಿದ್ಯಾಗಿರಿ: ಉದ್ಯಮ ಮತ್ತು ವ್ಯಾಪಾರ ಸುಲಭದ ದಾರಿಯಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಉದ್ಯಮಶೀಲತೆಯ ಕೌಶಲ ದೊರಯುವುದಿಲ್ಲ ಎಂದು ಬೆಂಗಳೂರಿನ ಉದ್ಯಮಿ ದೀಪಕ್ ಎಮ್. ತುರಾಮುರಿ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಎಂ.ಕಾಂ. ಹೆಚ್.ಆರ್.ಡಿ ವಿಭಾಗದಿಂದ ಆಯೋಜಿಸಿದ್ದ “ಡಿಜಿಟಲೈಸೇಶನ್ ಇನ್ ಮ್ಯಾನೇಜ್‍ಮೆಂಟ್ ಆ್ಯಂಡ್ ಬುಸಿನೆಸ್ ಪ್ರಾಕ್ಟಿಸ್” ಎಂಬ ಒಂದುದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಒಂದು ಯಶಸ್ವಿ ಉದ್ಯಮ ನಡೆಯಬೇಕಾದರೆ ಹೊಸ ಹೊಸ ಆಲೋಚನೆಗಳ ಜೊತೆಗೆ ವಿಭಿನ್ನ ಬಗೆಯ ಯೋಜನೆಗಳ ಆವಿಷ್ಕಾರ ಅಗತ್ಯ. ಪ್ರಸ್ತುತ ದಿನಗಳಲ್ಲಿ ಜನರ ಅಭಿರುಚಿಗಳು ದಿನದಿಂದ ದಿನಕ್ಕೆ ಬದಲಾಗುತ್ತಾ ಸಾಗುತ್ತಿದೆ. ವಿವಿಧ ಬಗೆಯ ಟ್ರೆಂಡ್‍ಗಳು ಸೃಷ್ಠಿಯಾಗುತ್ತಿದ್ದು, ಈ ಎಲ್ಲ ಅಂಶಗಳನ್ನು ಮನಗಂಡು ಜನರ ಜೊತೆ ಬೆರೆತು ಅಭಿಪ್ರಾಯಗಳನ್ನು ಪಡೆದುಕೊಂಡು ತಮ್ಮಲ್ಲಿರುವ ಉತ್ಪನ್ನವನ್ನು ವಿಶಿಷ್ಟವಾಗಿ ಮಾರುಕಟ್ಟೆಗೆ ತೋರ್ಪಡಿಸುವುದು ಉದ್ಯಮದ ಬೆಳವಣಿಗೆಗೆ ಅಗತ್ಯವಾಗಿದೆ. ಇಂದು ಎಲ್ಲಾ ಕ್ಷೇತ್ರಗಳಲ್ಲಿ ಡಿಜಿಟಲೀಕರಣವನ್ನು ಕಾಣಬಹುವುದು. ಅಪ್‍ಡೇಟ್, ಅಪ್‍ಗ್ರೇಡ್, ಆನ್‍ಲೈನ್ ಮಾಹಿತಿಗಳು ನಿಖರವಾಗಿ ದೊರಕುತ್ತಿದ್ದು ಇದು ಉದ್ಯಮ ಹಾಗೂ ವ್ಯಾಪಾರದ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದೆ. ಉದ್ಯಮಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ತಂದಿದ್ದು, ವಿದ್ಯಾರ್ಥಿಗಳು ಇದನ್ನು ತಿಳಿದುಕೊಂಡಿರಬೇಕು. ವಿದ್ಯಾಥಿಗಳು ಕಲಿಕಾ ಘಟ್ಟ ಇದಾಗಿದ್ದು ಹೊಸ ಬಗೆಯ ಚಿಂತನೆ, ಆವಿಷ್ಕಾರದ ಮೂಲಕ ಸ್ವ ಉದ್ಯಮ ಹಾಗೂ ವ್ಯಾಪರಕ್ಕೆ ತಮ್ಮ ಒಲವನ್ನು ನೀಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದ್ದೇವೆ ಹಾಗಾಗಿ ವಿದ್ಯಾರ್ಥಿ ಜೀವನದಿಂದಲೇ ಸವಾಲುಗಳನ್ನು, ಸಮಸ್ಯೆಗಳನ್ನು ಎದುರಿಸಲು ಸಿದ್ಧರಿರಬೇಕು” ಎಂದರು.
“ವಿದ್ಯಾರ್ಥಿಗಳು ಗುರುಗಳೊಂದಿಗೆ ಹಾಗೂ ಶಿಕ್ಷಣ ಸಂಸ್ಥೆಯ ಮೇಲೆ ಉತ್ತಮ ರೀತಿಯ ಬಾಂಧವ್ಯವನ್ನು ಬೆಳಿಸಿಕೊಳ್ಳಬೇಕು. ಇದರಿಂದಾಗಿ ಸಮಾಜದಲ್ಲಿ ವೃತ್ತಿಯಲ್ಲಿ ಉನ್ನತ ದರ್ಜೆಗೆ ಹಾಗೂ ಏನಾದರೂ ಸಾಧನೆ ಮಾಡಲು ಸಾದ್ಯ. ಇದಕ್ಕೆ ಇಲ್ಲಿನ ಹಳೆ ವಿದ್ಯಾರ್ಥಿಯು ಹಾಗೂ ಅತಿಥಿಯಾದ ದೀಪಕ್ ಅವರೇ ಸಾಕ್ಷಿ ಎಂದರು. ಸೆಮಿನಾರ್‍ಗಳು ಹೊಸ ಮಾಹಿತಿಯ ಸಂಶೋಧನೆಗೆ ಅಗತ್ಯವಾಗಿದ್ದು, ಕಲಿಕೆಯ ದೃಷ್ಠಿಯಿಂದ ವಿದ್ಯಾರ್ಥಿಗಳ ಜೀವನದಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ತರುತ್ತದೆ ಎಂದು ಕಾಲೇಜಿನ ಪ್ರಾಶುಂಪಾಲ ಡಾ. ಕುರಿಯನ್ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 12 ಕಾಲೇಜಗಳ 112 ವಿದ್ಯಾರ್ಥಿಗಳ 54 ತಂಡಗಳು ಸೆಮಿನಾರ್‍ನಲ್ಲಿ ಪಾಲ್ಗೊಂಡರು. ವಿಭಾಗದ ಮುಖ್ಯಸ್ಥೆ ಶಾಝಿಯ ಸೈಯದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅರ್ಚನಾ ನಿರೂಪಿಸಿ ಹಾಗೂ ವಿದ್ಯಾರ್ಥಿನಿ ರಕ್ಷಾ ಶೆಟ್ಟಿ ವಂದಿಸಿದರು.

Highslide for Wordpress Plugin