ತುಳು ಭಾಷೆದ ಪೊರ್ಲು ತಿರಲ್ ಕಾರ್ಯಕ್ರಮ

ಮೂಡುಬಿದಿರೆ: “ಜಾಗತೀಕರಣ ಬಹುತ್ವದ ಶತ್ರು” ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ತುಳು ಪೀಠದ ಸಂಯೋಜಕ ಡಾ.ಬಿ.ಶಿವರಾಮ ಶೆಟ್ಟಿ ತಿಳಿಸಿದರು.
ಅವರು ಆಳ್ವಾಸ್ ತುಳು ಸಂಸ್ಕøತಿ ಅಧ್ಯಯನ ಕೇಂದ್ರದ ವತಿಯಿಂದ ನಡೆದ “ತುಳು ಭಾಷೆದ ಪೊರ್ಲು ತಿರಲ್” ಕಾರ್ಯಕ್ರಮದಲ್ಲಿ ಮಾತನಾಡಿದರು.
“ಪ್ರದೇಶ, ಜನಾಂಗಕ್ಕೆ ತಕ್ಕಂತೆ ವೈವಿಧ್ಯ ಸಂಸ್ಕøತಿ ಮತ್ತು ಭಾಷೆ ಬೆಳೆದು ಬಂದಿದೆ. ಅವೆಲ್ಲವೂ ಉಳಿದರೆ ಮಾತ್ರ ಭಾರತದ ಸಮೃದ್ಧಿ. ಜಾಗತಿಕರಣ ಬಹುತ್ವವನ್ನು ನಾಶಮಾಡಿ ಏಕಭಾಷೆ ಮತ್ತು ಏಕ ಸಂಸ್ಕøತಿಯನ್ನು ಉಳಿಸಿ ಉಳಿದ ವೈವಿಧ್ಯಗಳನ್ನು ನಾಶಮಾಡುತ್ತದೆ. ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಕಲ್ಪನೆ ಇಂದಿಗೂ ಪ್ರಸ್ತುತ ಎಂದು ಅಭಿಪ್ರಾಯ ಪಟ್ಟರು. ಉಸಿರು ಭಾಷೆಯಾಗುವ ಪ್ರಕ್ರಿಯೆ ಕುತೂಹಲಕಾರಿಯಾದುದು. ತುಳು ಗಾದೆ-ಒಗಟುಗಳ ರಚನೆಯ ಸೌಂದರ್ಯವನ್ನು ಗಮನಿಸಿದರೆ ಭಾಷೆಯ ಅನನ್ಯತೆ ಅನಾವರಣವಾಗುತ್ತದೆ. ಸಾಂಸ್ಕøತಿಕ ಮತ್ತು ಭಾಷಿಕ ನೆಲೆಯಲ್ಲಿ ನೋಡುವ ಎಲ್ಲಾ ಸಾದ್ಯತೆಗಳು ತುಳುಭಾಷೆಗೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಆಡಳಿತಾಧಿಕಾರಿ ಪ್ರೋ.ಬಾಲಕೃಷ್ಣ ಶೆಟ್ಟಿ ಮಾತನಾಡಿ ” ಹಿಂದೆ ಎಲ್ಲಾ ಕಾಲೇಜಿನಲ್ಲಿ ತುಳು ಭಾಷೆ ಮಾತನಾಡುವುದು ಅಪರಾಧ ಎಂಬ ನಿಯಮವಿತ್ತು. ಆ ಕಾರಣದಿಂದಲೆ ತುಳುವಿನ ಬಗ್ಗೆ ಕೀಳರಿಮೆ ಬೆಳೆದಿದೆ. ಆದರೆ ಇಂದು ಭಾಷೆಯ ಬಗ್ಗೆ ಜಾಗೃತಿ ಬಂದಿದೆ. ಬಹುನೆಲೆಯಲ್ಲಿ ಸಂಘಟಿತ ಕೆಲಸಗಳಾಗುತ್ತಿರುವುದೇ ಆಶಾದಾಯಕ ಸಂಗತಿ ಎಂದರು.
ಪ್ರಾಂಶುಪಾಲ ಡಾ. ಕುರಿಯನ್ ಅಧ್ಯಕ್ಷತೆ ವಹಿಸಿದ್ದರು .ಸಂಯೋಜಕ ಡಾ. ಯೋಗೀಶ್ ಕೈರೋಡಿ, ಉಪನ್ಯಾಸರಾದ ಚಂದ್ರಶೇಖರ ಗೌಡ, ಹರೀಶ್ ಟಿಜಿ, ಡಾ ಕೃಷ್ಣರಾಜ ಕರಬ ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ ಜ್ಯೋತಿ ರೈ ಸ್ವಾಗತಿಸಿ, ದೀಪ್ತಿ ವಂದಿಸಿ, ಪ್ರಜ್ಞಾ ಕಾರ್ಯಕ್ರಮ ನಿರ್ವಹಿಸಿದರು.

Highslide for Wordpress Plugin