ವಿದ್ಯಾಗಿರಿ: ವಿದ್ಯಾರ್ಥಿ ಜೀವನದಲ್ಲಿ ಒಂದೊಂದು ದಿನವು ಅತೀ ಮುಖ್ಯವಾಗಿದ್ದು ಅದನ್ನು ಸರ್ಮಪಕವಾಗಿ ಬಳಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾದ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಎಂಕಾಂ ಎಚ್ಆರ್ಡಿ ವಿಭಾಗದ ವಿದ್ಯಾರ್ಥಿಳಿಗೆ ‘ನಾಲ್ಕನೇ ಪೀಳಿಗೆಯ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲದ ಬಳಕೆ’ ದ ಕುರಿತು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಿದ್ಧಾಂತಗಳಿಗಿಂತಲೂ ಅಭ್ಯಾಸ ಬಹುಮುಖ್ಯ, ನಿರಂತರವಾಗಿ (ಪುನರಾವರ್ತಿತ) ಅಭ್ಯಾಸ ನಡೆಸಿದಾಗ ಮಾತ್ರ ಪ್ರಸ್ತುತ ವಿದ್ಯಮಾನಕ್ಕೆ ಹೊಂದಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳಲ್ಲಿ ಅಭ್ಯಾಸದ ಮತ್ತು ಆತ್ಮ ವಿಶ್ವಾಸದ ಕೊರತೆ ಭವಿಷ್ಯದ ಬೆಳವಣಿಗೆಗೆ ತೊಡಕಾಗುತ್ತಿದೆ. ಆದ್ದರಿಂದ ಅಭ್ಯಾಸವನ್ನು ಎಂದು ಮೊಟಕುಗೊಳಿಸಬಾರದು. ಪ್ರತಿಯೊಂದು ಕ್ಷೇತ್ರವು ವಿಭಿನ್ನವಾಗಿದ್ದು ಆ ಕ್ಷೇತ್ರಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಸಫಲವಾದಾಗ ಮಾತ್ರ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮೈಸೂರು ಎಸ್.ಕೆ.ಎಫ್ ಟಕ್ನಾಲಜಿಯ ನಿರ್ವಾಹಕ ಮತ್ತು ಮಾನವ ಸಂಪನ್ಮೂಲ ಅಧಿಕಾರಿ ಜಯರಾಮ್.ಬಿ ಆರ್, ಮೈಸೂರು ರೆಕಿಟ್ ಬೆನ್ಕಿಸರ್ ಕಂಪನಿಯ ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ ರಾಜಾ, ಸೋಲಾರ್ ಆಕ್ಟಿವ್ ಫಾರ್ಮಾ ಸೈನ್ಸ್ನ ಮಾನವ ಸಂಪನ್ಮೂಲ ವ್ಯವಸ್ಥಾಪಕ ನೀಲ್ ವಿನ್ಸೆಂಟ್ ಹಾಗೂ ಆಳ್ವಾಸ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ಮತ್ತು ಮಾನವ ಸಂಪನ್ಮೂಲ ವಿಭಾಗದ ಸಂಯೋಜಕಿ ಶಾಜಿಯ ಉಪಸ್ಥಿತರಿದ್ದರು.