ಪರಿಸರ ನೂತನ ತಂತ್ರಜ್ಞಾನಗಳಿಗೆ ಪ್ರೇರಕ

ಮಿಜಾರು:ತಂತ್ರಜ್ಞಾನಗಳು ಆಧುನಿಕ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಅವುಗಳನ್ನು ಅರಿತು ಉತ್ತಮ ರೀತಿಯಲ್ಲಿ ಉಪಯೋಗಿಸುವುದು ಅಗತ್ಯ ಎಂದು ಬೆಂಗಳೂರು ಜವಹಾರ್‍ಲಾಲ್ ನೆಹರು ತಾರಲಯದ ಸಹನಿರ್ದೇಶಕ ಎಚ್. ಆರ್ ಮಧುಸೂದನ್ ಹೇಳಿದರು.
ಅವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ‘ಆಳ್ವಾಸ್ ಬೂಟ್ ಕ್ಯಾಂಪ್-2019’ ಇದರ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕೃತಿಯಲ್ಲಿನ ಜೈವಿಕ ಅಂಶಗಳಿಂದ ಸ್ಫೂರ್ತಿಗೊಂಡು ತಂತ್ರಜ್ಞಾನಗಳು ಹಾಗೂ ವಸ್ತುಗಳು ರೂಪುಗೊಂಡಿವೆ ಎಂದು ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು. ಜೀವಶಾಸ್ತ್ರದಲ್ಲಿ ನ್ಯಾನೋ ವಿಜ್ಞಾನ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಜೀವಶಾಸ್ತ್ರದಲ್ಲಿನ ಜೀವಾಣುಗಳ ಆಕಾರವನ್ನು ಕಂಡು ಹಿಡಿಯಲು ತುಂಬಾ ಉಪಯುಕ್ತವಾಗಿದೆ.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಶಮಂತ್ ಕಾರ್ಯಕ್ರಮವನ್ನು ನಿರೂಪಿಸಿದರು.
ಬಾಕ್ಸ್ ಐಟಮ್:
“ವಿದ್ಯಾರ್ಥಿಗಳು ವೃತ್ತಿ ಜೀವನವನ್ನು ಪ್ರವೇಶಿಸುವ ಮುನ್ನ ಎಲ್ಲಾ ವಿಷಯಗಳ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. ವಿದ್ಯಾರ್ಥಿ ಜೀವನದಲ್ಲಿ ಮೌಲ್ಯಯುತ ವಿಚಾರಗಳನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದ ಗುರಿಯನ್ನು ಸಾಧಿಸಲು ಶ್ರದ್ಧೆ, ಸತತ ಪ್ರಯತ್ನ ಅಗತ್ಯ. ಆಗಲೇ ನಮ್ಮನ್ನು ನಾವು ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Highslide for Wordpress Plugin