ಮೂಡುಬಿದಿರೆ : ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ಶಿವಮೊಗ್ಗ ಹಾಗೂ ಡಿ.ಎಸ್.ಪದವಿ ಪೂರ್ವ ಕಾಲೇಜ್ ಶಿವಮೊಗ್ಗ ಇವರ ಆಶ್ರಯದಲ್ಲಿ ನವೆಂಬರ್ 23, ರಿಂದ 25, 2019ರವರೆಗೆ ನಡೆದ ಪದವಿಪೂರ್ವ ಕಾಲೇಜ್ಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜ್ 12ಚಿನ್ನದ ಪದಕ, 12ಬೆಳ್ಳಿ ಪದಕ ಮತ್ತು 08ಕಂಚಿನ ಪದಕ ಪಡೆಯಿತು. ಹಾಗೂ ರಾಷ್ಟ್ರೀಯ ಕ್ರೀಡಾಕೂಟಕ್ಕೆ 20ಕ್ರೀಡಾಪಟುಗಳ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ (ನಾಗೇಂದ್ರ ಅಣಪ್ಪ ಗುಂಡುಎಸೆತ ಪ್ರಥಮ, ಚಕ್ರಎಸೆತ ದ್ವಿತೀಯ), (ಮಹತೇಶ್ 400ಮೀ ಪ್ರಥಮ, 200ಮೀ. ದ್ವಿತೀಯ), (ಮುತ್ತಪ್ಪ ಹ್ಯಾಮರ್ ಎಸೆತ ಪ್ರಥಮ), (ದಿಶ್ಸತ್ 110ಮೀ ಹರ್ಡಲ್ಸ್ ಪ್ರಥಮ), (ಗೋಪಾಲಕೃಷ್ಣ ಪ್ರಶಾಂತ್ ಪೋಲ್ವಾಲ್ಟ್ ಪ್ರಥಮ), (ದೇವರಾಜ್ 5ಕೀ.ಮೀ.ನಡಿಗೆ ಪ್ರಥಮ), (ಸತೀಶ್ 1500, 3000ದ್ವಿತೀಯ), (ಸುದೀಪ್ ಹ್ಯಾಮರ್ ತ್ರೋ ದ್ವಿತೀಯ), (ರೋಹಿತ್ನಾಯಕ್ ತ್ರಿವಿಧಜಿಗಿತ ತೃತೀಯ), 4×100ಮೀ.ದ್ವಿತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ (ಐಶ್ವರ್ಯ ಉದ್ದಜಿಗಿತ ಪ್ರಥಮ), (ಯಶ್ಮಿನ್ ತ್ರಿವಿಧಜಿಗಿತ ಪ್ರಥಮ), (ಧನುಷ ಶೆಟ್ಟಿ 3ಕೀ.ಮೀ. ನಡಿಗೆ ಪ್ರಥಮ), (ದೀಪಾ ಶ್ರೀ 800ಮೀ.ಪ್ರಥಮ), (ಮಾಲಾಶ್ರೀ ಗುಡ್ಡಗಾಡುಓಟ ಪ್ರಥಮ, 3000ದ್ವಿತೀಯ), (ಚೈತ್ರಾ 800ಮೀ, ಗುಡ್ಡಗಾಡುಓಟ ದ್ವಿತೀಯ, 300ಮೀ.ತೃತೀಯ), (ಕೀರ್ತಿಶೆಟ್ಟಿ ತ್ರಿವಿಧಜಿಗಿತ ದ್ವಿತೀಯ), (ಪ್ರಜ್ಞಾ ಗುಡ್ಡಗಾಡುಓಟ 4ನೇಸ್ಥಾನ) (ಚಿಕ್ಕಮ್ಮ ಗುಡ್ಡಗಾಡು ಓಟ 5ನೇಸ್ಥಾನ), (ಕಾವ್ಯ ಗುಡ್ಡಗಾಡು ಓಟ 6ನೇಸ್ಥಾನ) ಪಲ್ಲವಿ (ಪಟೀಲ್ ಎತ್ತರಜಿಗಿತ ದ್ವಿತೀಯ), (ಶ್ವೇತಾ ಪೋಲ್ವ್ಟಾಲ್ ತೃತೀಯ) (ಸೇಹ್ನ ಉದ್ದ ಜಿಗಿತ ತೃತೀಯ), (ಸುಷ್ಮಾ ಚಕ್ರ ಎಸೆತ ತೃತೀಯ), 4×400 ರಿಲೇ ಪ್ರಥಮ, 4×100 ರಿಲೇ ದ್ವಿತೀಯ.
ವಿಜೇತ ಕ್ರೀಡಾಪಟುಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರವರು ಹಾಗೂ ಪ್ರಾಂಶುಪಾಲರಾದ ರಮೇಶ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.