ಮಂಗಳೂರು ವಿ.ವಿ. ಪುರುಷರ ಕಬಡ್ಡಿ ಆಳ್ವಾಸ್‍ಗೆ ಪ್ರಶಸ್ತಿ

 

ದಿನಾಂಕ 23.01.2020 ರಿಂದ 25.01.2020ರವರೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಕೋಟ ಪಡಿಕೆರೆ ಇಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜ್ ತಂಡ ಪ್ರಶಸ್ತಿ ಪಡೆದುಕೊಂಡಿರುತ್ತದೆ. ಮತ್ತು ದಿನಾಂಕ 25.01.2020ರಂದು ನಡೆದ ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಡೆ ಸಾರ್ಮಕ ಪರ್ಯಾಯ ಪಲಕಕ್ಕಾಗಿ ನಡೆದ ಅಂತರ್ ವಲಯ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ. 2013 ರಿಂದ ಇಲ್ಲಿಯವರೆಗೆ 6 ಬಾರಿ ಪ್ರಶಸ್ತಿಯನ್ನು ಪಡೆದಿರುತ್ತದೆ. ಮತ್ತು ಉಡುಪಿವಲಯ ಪಂದ್ಯಾಟದಲ್ಲಿ ಉತ್ತಮ ಹಿಡಿತಗಾರನಾಗಿ ಆಳ್ವಾಸ್ ವಿನೋದ್ ಮತ್ತು ಉತ್ತಮ ದಾಳಿಗಾರನಾಗಿ ಭರತ್ ಶೆಟ್ಟಿ ಮತ್ತು ಅಂತರ್ ವಲಯ ಕಬಡ್ಡಿ ಪಂದ್ಯಾಟದ ಉತ್ತಮ ದಾಳಿಗಾರನಾಗಿ ಆಳ್ವಾಸ್ ವಿದ್ಯಾರ್ಥಿಗಳಾದ ರಾಜ್ವಿಂದರ್ ಮತ್ತು ಉತ್ತಮ ಹಿಡಿತಗಾರನಾಗಿ ಜಸ್ವಂತ್.ಸರ್ವಾಂಗಿಣ ಆಟಗಾರನಾಗಿ ಸತ್ನಮ್ ಇವರು ಪಡೆದಿರುತ್ತಾರೆ.

ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವರವರು ಅಭಿನಂದಿಸಿದ್ದಾರೆ.

Highslide for Wordpress Plugin