‘ಮೆನುಸ್ಟ್ರುವಲ್ ಕಪ್ ಬಳಕೆಯ ಕುರಿತು ಜಾಗೃತಿ ಕಾರ್ಯಗಾರ’

ವಿದ್ಯಾಗಿರಿ: ಪರಿಸರ ಸ್ನೇಹಿ ಹಾಗೂ ಕಡಿಮೆ ಖರ್ಚಿನ ಮೆನುಸ್ಟ್ರುವಲ್ ಕಪ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿದ್ಯಾರ್ಥಿನಿಯರು ಅವುಗಳನ್ನು ಹೆಚ್ಚು ಬಳಸಬೇಕು ಎಂದು ಆಳ್ವಾಸ್ ಹೆಲ್ತ್ ಸೆಂಟರ್ ಸ್ತ್ರೀತಜ್ಞೆ ಡಾ. ಹನಾ ಶೆಟ್ಟಿ ಹೇಳಿದರು.
ಅವರು ಕಾಲೇಜಿನ ವುಮನ್ ಡೆವೆಲಪ್‍ಮೆಂಟ್ ಸೆಲ್‍ವತಿಯಿಂದ ‘ಮೆನುಸ್ಟ್ರುವಲ್ ಕಪ್ ಬಳಕೆಯ ಕುರಿತು ಜಾಗೃತಿ ಕಾರ್ಯಗಾರ’ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‍ಗಳು ದುಬಾರಿಯಾಗಿದ್ದು, ಅಲ್ಲದೆÀ ಇವುಗಳ ತ್ಯಾಜ್ಯಕ್ಕೆ ಸರಿಯಾದ ಪರಿಹಾರವಿಲ್ಲ. ಸ್ಯಾನಿಟರಿ ಪ್ಯಾಡ್‍ಗಳಿಂದ ಅಲರ್ಜಿ, ತುರಿಕೆ, ಕ್ಯಾನ್ಸರ್‍ನಂತಹ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಮಾತ್ರವಲ್ಲದೆ ಇದರ ತಾಜ್ಯದಿಂದ ಮಲಿನತೆಯೂ ಹೆಚ್ಚುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಸ್ಮಿತ ಭಟ್, ಡಾ. ಎಂ. ಗನಪ್ರಿಯ ದೇವಿ, ಡಾ. ಅಂಜಲಿ ಎಸ್, ಜೆನಿಫರ್ ಸಲಿಸ್ ಉಪಸ್ಥಿತರಿದ್ದರು. ಚೈತ್ರ ಕಾರ್ಯಕ್ರಮವನ್ನು ನಿರೂಪಿಸಿ, ದಿಶಾ ಶೆಟ್ಟಿ ವಂದಿಸಿದರು.

ಬಾಕ್ಸ್ ಐಟಮ್
 ಎರಡು ದಿನಗಳ ಕಾರ್ಯಾಗಾರದಲ್ಲಿ ಆಳ್ವಾಸ್ ಪದವಿ ಹಾಗೂ ಸ್ನಾತಕೊತ್ತರ ವಿಭಾಗದ 534 ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
 ಹತ್ತು ವಿದ್ಯಾರ್ಥಿನಿಯರಂತೆ ಗುಂಪುಗಳನ್ನು ರಚಿಸಿ, ವೈದ್ಯರೊಂದಿಗೆ ಮೆನುಸ್ಟ್ರುವಲ್ ಕಪ್ ಬಳಕೆಯ ಕುರಿತು ಮಾಹಿತಿ

* ಮೆಡಿಕಲ್ ಗ್ರೇಡ್ ಸಿಲಿಕಾನ್‍ನಿಂದ ಮೆನುಸ್ಟ್ರುವಲ್ ಕಪ್‍ನ್ನು ತಯಾರಿಸಲಾಗುತ್ತದೆ.
*199 ರೂಪಾಯಿಯಿಂದ 5000 ರೂಪಾಯಿಗಳ ಹಲವು ಬ್ರಾಂಡ್‍ನ ಮೆನುಸ್ಟ್ರುವಲ್ ಕಪ್‍ಗಳು ಆನ್ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ.

Highslide for Wordpress Plugin