ಕಲ್ಪತರು ಕ್ರಿಕೇಟ್ ಕ್ಲಬ್ ಬಿ.ಸಿ. ಆಳ್ವ ಸ್ಮರಣಾರ್ಥ ಬಾಳೆಹೂನ್ನೂರು ಆಯೋಜಿಸಿದ 25 ವರ್ಷದ ಆಹ್ವಾನಿತ ತಂಡಗಳ ಲೆದರ್ ಬಾಲ್ ಕ್ರಿಕೇಟ್ ಪಂದ್ಯಾವಳಿ ಮೂಡಬಿದಿರೆಯ ಆಳ್ವಾಸ್ ತಂಡ ಚಾಂಪಿಯನ್ ಆಗಿ ಸತತ 8ನೇ ವರ್ಷ ಹೊರಹೊಮ್ಮಿದೆ. ಪೈನಲ್ ಪಂದ್ಯಾಯದಲ್ಲಿ ಬೆಂಗಳೂರಿನ ಮಧು ಇಲೆವೆನ್ ತಂಡವನ್ನು ಸೋಲಿಸಿ ಸತತ 8ನೇ ಬಾರಿಗೆ ಕೆ.ಸಿ.ಸಿ.ಟ್ರೋಪಿಯನ್ನು ತನ್ನದಾಗಿಸಿಕೊಂಡಿತ್ತು. ಮೂಡಬಿದಿರೆ ಆಳ್ವಾಸ್ ತಂಡದ ಅಲ್ಪೇಶ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು, ಹಾಗೂ ಭಾರತ್ಧೂರಿ ಉತ್ತಮ ಎಸೆತ್ತಗಾರ ಪ್ರಶಸ್ತಿಯನ್ನು ಹಾಗೂ ರಾಹುಲ್ ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಪಡೆದರು.