ಮೂಡಬಿದಿರೆ: ಎಸ್.ಜಿ.ಎಸ್ ಅಂತರಾಷ್ಟ್ರೀಯ ಯೋಗ ಫೌಂಡೇಷನ್ ವತಿಯಿಂದ ಅಗಸ್ಟ್ 18ರಂದು ಬೇಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಲಾದ 5ನೇ ರಾಷ್ಟ್ರಮಟ್ಟದ ಅಥ್ಲೇಟಿಕ್ ಯೋಗಾಸನ ಚಾಂಪಿಯನ್ಶಿಪ್ನಲ್ಲಿ ಆಳ್ವಾಸ್ ಕಾಲೇಜಿನ ಪದವಿ ವಿದ್ಯಾರ್ಥಿ ಪ್ರಶಾಂತ್ ಬಿ ಪ್ರಥಮ ಸ್ಥಾನವನ್ನು ಗಳಿಸಿ, ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೂ ಮಲೇಷ್ಯಾದ ಕೌಲಾಲಾಂಪುರ್ನಲ್ಲಿ ಅಕ್ಟೋಬರ್ 13-15ರವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಚ್ಯಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಮ್ ಮೋಹನ್ ಅಳ್ವ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಇವರ ಸಾಧನೆಗೆ ಶ್ಲಾಘಿಸಿದ್ದಾರೆ.