ರಾಷ್ಟ್ರೀಯ ಪೌಷ್ಠಿಕಾಂಶ ವಾರದ ಆಚರಣೆ

ಮೂಡುಬಿದಿರೆ: ಮಾನವನ ದೇಹದಲ್ಲಿ ಮೆದುಳು ಬಹು ಮುಖ್ಯವಾದ ಪಾತ್ರವನ್ನು ವಹಿಸುವುದರಿಂದ ಆತ ಸತ್ವಯುತವಾದ ಆಹಾರವನ್ನು ಸೇವಿಸುವುದು ಅಗತ್ಯವಾಗುತ್ತದೆ ಎಂದು ಖ್ಯಾತ ಮಕ್ಕಳ ತಜ್ಞೆ ಡಾ. ಆಶಾ ಹೆಗ್ಡೆ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರಿಷನ್ ವಿಭಾಗದಿಂದ ಆಯೋಜಿಸಲಾದ ರಾಷ್ಟ್ರೀಯ ಪೌಷ್ಠಿಕಾಂಶ ವಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಗುವಿಗೆ ಭ್ರೂಣಾವಸ್ಥೆಯಿಂದಲೇ ಪೌಷ್ಟಿಕಾಂಶಯುತ ಆಹಾರ ಅಗತ್ಯವಾಗಿರುತ್ತದೆ. ತಾಯಿಯು ಇದರ ಬಗ್ಗೆ ಗಮನಹರಿಸಬೇಕು. ಮಗು ಹುಟ್ಟಿದ ನಂತರ 6 ತಿಂಗಳವರೆಗೆ ದನದ ಹಾಲನ್ನು ಕೊಡುವುದು ಸೂಕ್ತವಲ್ಲ. ಈ ಹಾಲಿನಲ್ಲಿ ಸಾಕಷ್ಟು ಪೌಷ್ಠಿಕಾಂಶವಿದ್ದರೂ ಮಗುವಿನ ಮೆದುಳಿನ ಬೆಳವಣಿಗೆಗೆ ಪೂರಕವಾಗಿರುವುದಿಲ್ಲ. ತಾಯಿಯ ಹಾಲು ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಪ್ರಸ್ತುತ ಯುಗದಲ್ಲಿ ಫುಡ್ ಸೈನ್ಸ್ ಆ್ಯಂಡ್ ನ್ಯುಟ್ರಿಷನ್ ವಿಭಾಗದಲ್ಲಿ ವಿಧ್ಯಾರ್ಥಿಗಳಿಗೆ ಹೇರಳವಾದ ಅವಕಾಶಗಳಿದ್ದು, ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಲು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಪ್ರೋ. ಬಾಲಕೃಷ್ಣ ಶೆಟ್ಟಿ, ಶರತ್ ವಿ. ಹರಿದಾಸ್, ವಿಭಾಗದ ಮುಖ್ಯಸ್ಥೆ ಡಾ ಅರ್ಚನಾ ಪ್ರಬಾತ್ ಉಪಸ್ಥಿತರಿದ್ದರು.

ಬಾಕ್ಸ್ ಐಟಮ್:
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೆ ತಯಾರಿಸಿದ ದೇಶದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಅಡುಗೆ ಪ್ರದರ್ಶನವು ನೆರವೇರಿತು.
 ಕರ್ನಾಟಕದ- ಮದ್ದೂರುವಡಾ, ಕೇರಳದ- ತಪ್ಪಿಯೋಕ, ತಮಿಳುನಾಡಿನ- ಮೆದು ವಡಾ, ತೆಲಂಗಾಣದ- ಚೆಕ್ಕಲು, ಗೋವಾದ- ಸೋಲ್ಕಡಿ, ಪಂಜಾಬಿನ- ರಾಜ್ಮಾ ಚಾವಲ್, ರಾಜಸ್ಥಾನದ- ಮೋಹನ್ತಲ್, ಮಧ್ಯಪ್ರದೇಶದ- ಇಂದ್ರಾಹರ್, ಪಶ್ಚಿಮ ಬಂಗಾಳದ- ಜೀರಾಪಾನಿ ವಿಶೇಷವಾಗಿದ್ದವು.
 ರಕ್ತಪರೀಕ್ಷೆ, ಡೈಯೆಟ್ ಕೌನ್ಸೆಲಿಂಗ್, ದೇಹ ಸಂಯೋಜನೆ, ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಿದರು.
 ಡಾರ್ಟ್ ಹಾಗೂ ಡಿಸ್ಸೆಲ್ ಗೇಮ್‍ಗಳು ಮುಖ್ಯ ಆಕರ್ಷಣೆಯಾಗಿದ್ದವು.

Highslide for Wordpress Plugin