ಶೋಭಾವನದಲ್ಲಿ ನಂದನವನ ನಿರ್ಮಾಣ

ಮೂಡುಬಿದಿರೆ: ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಸಹಯೋಗದಲ್ಲಿ ಮಿಜಾರಿನ ಶೋಭಾವನದಲ್ಲಿ ನಂದನವನ ನಿರ್ಮಾಣ ಮಾಡಲಾಯಿತು.
ಬಜ್ಪೆ ಗ್ರಾಪಂ ಪಿಡಿಒ ಸಾಯೀಶ್ ಚೌಟ, ಪ್ಲಾಸ್ಟಿಕ್ ಮುಕ್ತ ಪರಿಸರದ ಅತ್ಯವಶ್ಯಕತೆಯನ್ನು ವಿವರಿಸಿದರು.
ಎನ್‍ಎಸ್‍ಎಸ್ ಯೋಜನಾಧಿಕಾರಿ ಸುರೇಶ್ ಪಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಯಂಸೇವಕರು ತಮ್ಮ ಹುಟ್ಟುಹಬ್ಬದ ದಿನ ನಂದನವನದಲ್ಲಿ ಹಣ್ಣಿನ ಗಿಡ ನೆಟ್ಟು ಆಚರಿಸಲು ಅವಕಾಶ ಮಾಡಿಕೊಡಲಾಗುವುದು. ಗಿಡದ ಪೋಷಣೆ ಕೂಡ ಅವರೇ ಮಾಡುತ್ತಾರೆ ಎಂದರು.
ಇಂಡಿಯನ್ ಸೆರಾಮಿಕ್ ಸೊಸೈಟಿ ಕರ್ನಾಟಕ ಚಾಪ್ಟರ್‍ನ ಅಧ್ಯಕ್ಷ ಡಾ.ಎಸ್. ಶ್ಯಾಮ್ ರಾವ್, ಕಾರ್ಯದರ್ಶಿ ಡಾ.ದಿನೇಶ್ ರಂಗಪ್ಪ, ಸಹಕಾರ್ಯದರ್ಶಿ ಡಾ. ಎಂ. ಜಿ. ಆನಂದ್ ಕುಮಾರ್, ರಿಫ್ರಾಕ್ಟರೀಸ್ ಅಂಡ್ ಸರ್ವೀಸಸ್ ವ್ಯವಸ್ಥಾಪಕ ನಿರ್ದೇಶಕ ಸಗಿರಾಜು ಚಂದ್ರಶೇಖರ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಸತ್ಯನಾರಾಯಣ್ ಉಪಸ್ಥಿತರಿದ್ದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾದಾs್ಯಪಕ ಸಂದೀಪ್ ಕುಮಾರ್ ಡಿ.ಎಸ್. ವಂದಿಸಿದರು.

Highslide for Wordpress Plugin