ವಿದ್ಯಾಗಿರಿ: ಸಂಸ್ಕೃತ ಬಾಷೆಯು ಎಲ್ಲಾ ಭಾಷೆಗಳಿಗೆ ಮಾತೃ ಸ್ಥಾನದಲ್ಲಿ ನಿಲ್ಲಬಲ್ಲ ಶ್ರೇಷ್ಠತೆಯನ್ನು ಹೊಂದಿರುವ ಭಾಷೆಯಾಗಿದೆ ಎಂದು ಕಟೀಲ್ ಅನುವಂಶಿಕ ಅರ್ಚಕರಾದ ಕಮಾಲದೇವಿ ಅಸ್ರಣ್ಣರು ಹೇಳಿದರು.
ಆಳ್ವಾಸ್ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಅಧ್ಯಯನ ಕೇಂದ್ರ ಆಯೋಜಿಸಲಾಗಿದ್ದ ‘ಸಂಸ್ಕೃತ’ ಪರ್ವ 2019- ಅಸ್ಮಾಕಮ್ ಮಹೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದು ಭಾಷೆಯನ್ನು ಸಂಸ್ಕೃತದೊಂದಿಗೆ ತುಲಾನಾತ್ಮಕವಾಗಿ ಅದ್ಯಯನ ಮಾಡಿದರೆ ಪ್ರತಿ ಭಾಷೆಯ ಮೂಲ ಸಂಸ್ಕೃತವೆಂದು ತಿಳಿಯುತ್ತದೆ. ಸಂಸ್ಕೃತ ಎಂಬ ಪದ ಸಂಮ್ಯಕ್ ಹಾಗೂ ಕೃತಂ ಎಂಬ ಎರಡು ಪದಗಳಿಂದ ಬಂದಿದ್ದು, ಸರಿಯಾಗಿ ಬಳಸಲ್ಪಟ್ಟ ಹಾಗೂ ವ್ಯವಹರಿಸಲು ಯೋಗ್ಯವಾಗಿರುವ ಭಾಷೆ ಎಂದು ಅರ್ಥೈಸಲ್ಪಡುತ್ತದೆ. ಸಂಸ್ಕೃತ ಭಾಷೆಯು ಮಾತೃ ಭಾಷೆ, ರಾಜ್ಯ ಭಾಷೆ, ಲೋಕ ಭಾಷೆಯೆಂದು ಪರಿಗಣಿಸಲ್ಪಟ್ಟಿದೆಯಲ್ಲದೆ ದೇವ ಭಾಷೆ ಹಾಗೂ ಅಂರ್ತಲೋಕಿಯ ಭಾಷೆ ಎಂಬ ಮನ್ನಣೆ ಹೊಂದಿದೆ ಎಂದರು.
ಈ ಭಾಷೆಯು ಗಣಕಯಂತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುವ ಭಾಷೆಯಾಗಿದ್ದು, ನಾವು ಯಾವ ರೀತಿಯಾಗಿ ಉಚ್ಚರಿಸುತ್ತೆವೆಯೋ ಅದೇ ರೀತಿಯಲ್ಲಿ ಬರೆಯಲು ಸಾದ್ಯವಾಗುವ ಭಾಷೆ ಇದಾಗಿದೆ. ವರ್ತಮಾನದಲ್ಲಿ ಸಂಸ್ಕೃತ ಭಾಷೆಯ ಬಳಕೆ ಕ್ಷೀಣಿಸುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು ಪ್ರತಿಯೊಬ್ಬರು ಈ ಭಾಷೆಯಲ್ಲಿ ಸಂಶೋಧನೆ ನಡೆಸಿ, ಜ್ಞಾನವನ್ನು ಒಗ್ಗೂಡಿಸಿ ಸಂಸ್ಕೃತವನ್ನು ರಕ್ತದ ಕಣಕಣದಲ್ಲೂ ಮೈಗೂಡಿಸಿಕೊಳ್ಳಬೇಕು ಎಂದು ತಿಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವಾ ಮಾತನಾಡಿ ನಾವು ನಮ್ಮ ಶ್ರೇಷ್ಠ ಪರೆಂಪರೆಯನ್ನು ಹಂಚಿಕೊಳ್ಳುವ ಹಾಗೂ ಮುಂದುವರೆಸಿಕೊಂಡು ಹೋಗುವ ಕಾಯಕದಲ್ಲಿ ವಿಫಲರಾಗಿದ್ದೆವೆ. ಆದ್ದರಿಂದ ವಿದ್ಯಾರ್ಥಿಗಳು ಈ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡುವುದರ ಮೂಲಕ ಈ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲರಾದ ಢಾ.ಕುರಿಯನ್, ಆಡಳಿತ ಅಧಿಕಾರಿ ಪ್ರೋ. ಬಾಲಕೃಷ್ಣ ಶೆಟ್ಟಿ ಮತ್ತು ಸಂಸ್ಕøತ ವಿಭಾಗದ ಮುಖ್ಯಸ್ಥ ಡಾ. ವಿದ್ವಾನ್ ವಿನಾಯಕ್ ಭಟ್ ಗಾಳಿಮನೆ ಉಪಸ್ಥಿತರಿದ್ದರು. ಅಶಿಕಾ ಕಾರ್ಯಕ್ರಮ ನಿರೂಪಿಸಿ, ರಂಜಿತಾ ವಂದಿಸಿದರು.
ತ್ರ್ಯವಧಾನಮ್: ಬಹುಮುಖಿಕಾರ್ಯದ ಸ್ಪರ್ಧೆಯಾಗಿದ್ದು ಇಲ್ಲಿ ಸ್ಪರ್ಧಾಳು ಏಕಕಾಲಕ್ಕೆ ಮೂರು ವಿಷಯಗಳಿಗೆ ಗಮನಹರಿಸಿ ಕಾರ್ಯನಿರ್ವಹಿಸಬೇಕು. ಅವುಗಳೆಂದರೆ ಮೌಖಿಕ, ಬರಹ ಹಾಗೂ ಘಂಟಾನಾದ. ಮೌಖಿಕವಾಗಿ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹಾಗೂ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯುತ್ತಾ, ಜೊತೆಗೆ ಏಕಕಾಲದಲ್ಲಿ ಘಂಟಾನದವನ್ನು ಲೆಕ್ಕಹಾಕಬೇಕು. ಈ ಮೂಲಕ ವಿದ್ಯಾರ್ಥಿಗಳ ಏಕಾಗ್ರತೆ ಶಕ್ತಿಯನ್ನು ಪರೀಕ್ಷಿಸುವ ಹೊಸ ಪ್ರಯತ್ನ ನಡೆಯಿತು.
ವಿಶೇಷ ಆರ್ಕಷಣೆ:
• ಮೂಡಬಿದಿರೆಯ ಪೂರ್ಣಿಮಾ ಪ್ರಭುರವರ ಸಂಗ್ರಹದ ಒಂಭತ್ತು ಸಾವಿರ ದೇವರ ಫೊಟೋಗಳ ಪ್ರದರ್ಶನ.
• ಸಂಸ್ಕೃತ ಅಕ್ಷರಗಳಿಂದ ಅಲಂಕೃತಗೊಂಡ ‘ಮಾಹೇಶ್ವರ ಸೂತ್ರಾಣಿ’ ಚಾವಣಿ.
• ಪುಷ್ಪಗಳಿಂದ ತುಂಬಿದ ವೇದಿಕೆ
• ಹಣ್ಣುಹಂಪಲುಗಳನ್ನು ನೀಡಿ ಅತಿಥಿಗಳ ಸ್ವಾಗತ.