“ಸಮಾಜದ ಬೆಳವಣಿಗೆಯಲ್ಲಿ ಯುವಜನತೆಯ ಪಾತ್ರ ಬಹುಮುಖ್ಯ”: ಅಕ್ಷಯ್ ಕೆ ಜೈನ್

ವಿದ್ಯಾಗಿರಿ: ಯುವಜನತೆ ಸಮಾಜೋಪಯೋಗಿ ಕೆಲಸವನ್ನು ಮಾಡುತ್ತೇನೆ ಎಂಬ ಗುರಿಯನ್ನಿಟ್ಟುಕೊಂಡಾಗ ಮಾತ್ರ ಸಮಾಜದಲ್ಲಿ ನಿಜವಾದ ಬೆಳವಣಿಗೆ ಸಾಧ್ಯ ಎಂದು ಉದ್ಯಮಿ ಅಕ್ಷಯ್ ಕೆ ಜೈನ್ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಒಳಿತಿಗಾಗಿ ಶ್ರಮವಹಿಸಿವುದು, ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯ. ಯುವಜನತೆ ಮನಸ್ಸು ಮಾಡಿದರೆ ಜಾತಿ ಭೇದವೆಂಬ ಚೌಕಟ್ಟಿನಿಂದ ಹೊರಬಂದು ಮಾನವೀಯತೆಯ ಹಾದಿಯಲ್ಲಿ ನಡೆಯಬಹುದು. ನಾವು ಕಟ್ಟುವ ತೆರಿಗೆ ಸಮಾಜಕ್ಕೆ ಉಪಯೋಗವಾಗುವಂತೆ ನೋಡಿಕೊಳ್ಳವುದು ನಮ್ಮ ಕರ್ತವ್ಯ. ಅಲ್ಲದೆ ಮೂಡುಬಿದಿರೆ ನಗರದಲ್ಲಿ ಕಂಡುಬರುವ ಸಮಸ್ಯೆಗಳಾದ ಮೂಡುಬಿದಿರೆ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ, ಸುಸಜ್ಜಿತ ಸಾರ್ವಜನಿಕ ಶೌಚಾಲಯಗಳು ಇಲ್ಲದೆ ಇರುವುದು, ಸರ್ಕಾರಿ ಬಸ್ಸಸ್ಟ್ಯಾಂಡ್ ಸಮಸ್ಯೆ, ಪಟ್ಟಣದೊಳಗಿನ ಕೆಟ್ಟ ರಸ್ತೆಗಳು, ಸಿ.ಸಿ ಕ್ಯಾಮೆರಾದ ಕೊರತೆ, ತಾಜ್ಯ ನಿರ್ವಹಣೆ ಮುಂತಾದ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗ್ರತೆ ಮೂಡಿಸಿ ಸಾಮಾನ್ಯ ಜನರು ಯಾವ ರೀತಿಯಾಗಿ ಕ್ರಮ ಕೈಗೊಳ್ಳಬಹುದು ಎಂಬ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಸಂಯೋಜಕರಾದ ಶ್ರೀನಿವಾಸ ಪೆಜತ್ತಾಯ, ಉಪನ್ಯಾಸಕ ಡಾ. ಶ್ರೀನಿವಾಸ್ ಹೊಡೆಯಲ ಹಾಗು ಇತರ ಉಪನ್ಯಾಸಕರು ಉಪಸ್ಥಿತರಿದ್ದರು.
ಬಾಕ್ಸ ಐಟಮ್
ಸರ್ಕಾರಿ ಸಂಸ್ಥೆಗಳಲ್ಲಿ ಅಧಿಕಾರಿಗಳಿಂದ ಭ್ರಷ್ಟಾಚಾರ, ಸಾರ್ವಜನಿಕ ನಿಂದನೆ ಮತ್ತು ಕೆಟ್ಟ ಸಹಕಾರತ್ವ ಕೊನೆಗೊಳ್ಳಬೇಕು. ನಾವು ನಮ್ಮ ಹಕ್ಕುಗಳ ಪರ ಶಾಂತಯುತವಾಗಿ ಹೋರಾಟ ನಡೆಸಿ ಮೂಡುಬಿದಿರೆಯನ್ನು ಸ್ಮಾರ್ಟ್‍ಟೌನ್ ಮಾಡುವಲ್ಲಿ ಕೈಜೋಡಿಸಬೇಕು.
– ಅಕ್ಷಯ್ ಕೆ ಜೈನ್

Highslide for Wordpress Plugin