ಮೇ 2019 ರಲ್ಲಿ ನಡೆದ ‘ಸಿ.ಎ. – ಇಂಟರ್ ಮೀಡಿಯಟ್’ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜು ಗ್ರೂಪ್-1 ವಿಭಾಗದಲ್ಲಿ 34.78% ಫಲಿತಾಂಶವನ್ನು ಪಡೆದುಕೊಂಡಿದೆ. ವಿದ್ಯಾರ್ಥಿಗಳಾದ ಸುಷ್ಮಾ ಎನ್, ಅನುಷಾ ಐತಾಳ್, ಭರತ್ ಹೆಗ್ಡೆ, ಚೇತನ್ ಸಿ. ರಾವ್, ರಮ್ಯಾ ಟಿ, ಧೀರಜ್, ತಾರಾ, ಪವಿತ್ರ ವಿ. ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಗ್ರೂಪ್-2 ವಿಭಾಗದಲ್ಲಿ 68.42% ಫಲಿತಾಂಶವನ್ನು ಪಡೆದುಕೊಂಡಿದ್ದು, ವಿದ್ಯಾರ್ಥಿಗಳಾದ ನಿಶ್ಚಿತಾ ಜಿ. ಕೆ, ಸಂಗೀತಾ, ದರ್ಶನ್, ಸೌಂದರ್ಯ ಮಟ್ಟೂರ್, ಸುಷ್ಮಾ ಎನ್, ತೇಜಸ್, ಪ್ರಸಾದ್, ದೀಕ್ಷಾ, ಅನಿತಾ, ರಮ್ಯಾ, ಕ್ಲಾರೇಸನ್, ಕಿರಣ್, ಶಶಾಂಕ್ ಉತ್ತೀರ್ಣರಾಗಿ ಉತ್ತಮ ಫಲಿತಾಂಶ ಹೊಂದಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷರಾದ ಡಾ. ಎಮ್. ಮೋಹನ ಆಳ್ವ ಮತ್ತು ಪ್ರಾಂಶುಪಾಲರಾದ ಡಾ. ಕುರಿಯನ್ ಹಾಗೂ ಸಿ.ಎ.- ಇಂಟರ್ ಮೀಡಿಯಟ್ ಸಂಯೋಜಕರು ಅಭಿನಂದಿಸಿದ್ದಾರೆ.
ಬಾಕ್ಸ್ ಐಟಮ್:
ಆಳ್ವಾಸ್‍ನ ಬಿ. ಕಾಂ. ವಿದ್ಯಾರ್ಥಿನಿ ಸುಷ್ಮಾ ಎನ್. ಗ್ರೂಪ್-1 ಮತ್ತು ಗ್ರೂಪ್-2 ವಿಭಾಗದಲ್ಲಿ ಒಂದೇ ಬಾರಿ ಉತ್ತೀರ್ಣರಾಗಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ.
ಮೇ 2019 ರಲ್ಲಿ ನಡೆದ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ಬಿ.ಕಾಂ. ಹಳೆ ವಿದ್ಯಾರ್ಥಿ ರಾಘವೇಂದ್ರ ಪ್ರಸಾದ್ ಕೆ. ಜಿ. (ದೇಶದಲ್ಲಿಯೇ 34ನೇಗಳಿಸಿ) ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.