News & Events
ಮಂಗಳೂರು ವಿ.ವಿ.ಯ ಅಂತರ್ ಕಾಲೇಜ್ಮಟ್ಟದ ಮಹಿಳೆಯರ ವಾಲಿಬಾಲ್ ಪಂದ್ಯಾಟ ಆಳ್ವಾಸ್ಗೆ ಪ್ರಶಸ್ತಿ
ದಿನಾಂಕ 28.02.2020 ಮತ್ತು 29.02.2020ರಂದು ಕಲಡ್ಕ ಶ್ರೀರಾಮ್ ಕಾಲೇಜ್ನಲ್ಲಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ.ಯ ಅಂತರ್ ಕಾಲೇಜ್ ಮಹಿಳೆಯರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ನ ಮಹಿಳೆಯರ ವಾಲಿಬಾಲ್ ತಂಡವು ಫೈನಲ್ನಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜ್ ತಂಡವನ್ನು ಸೋಲಿಸಿ ಚಾಂಪಿಯನಾಗಿ ಹೊರಹೊಮ್ಮಿತು. ಆಳ್ವಾಸ್ನ ವೀಣಾ ಅವರು ಉತ್ತಮ ಹೊಡೆತಗಾರ್ತಿ ಹಾಗೂ ಚರೀಷ್ಮ ಅವರು ಉತ್ತಮ ಎತ್ತುಗಾರರ್ತಿಯಾಗಿ ಹೊರಹೊಮ್ಮಿರುತ್ತಾರೆ. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ಆಳ್ವರವರು ಅಭಿನಂದಿಸಿದ್ದಾರೆ.
ಮಂಗಳೂರು ವಿ.ವಿ.ಯ ಅಂತರ್ ಕಾಲೇಜು ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟ ಆಳ್ವಾಸ್ಗೆ ಪ್ರಶಸ್ತಿ
ದಿನಾಂಕ 15.02.2020 ಮತ್ತು 16.02.2020ರಂದು ಮಂಗಳೂರಿನ ರಾಮಕೃಷ್ಣ ಕಾಲೇಜ್ನಲ್ಲಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ.ಯ.ಅಂತರ್ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ನ ಪುರುಷರ ವಾಲಿಬಾಲ್ ತಂಡವು ಫೈನಲ್ನಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜ್ ತಂಡವನ್ನು ಸೋಲಿಸಿ ಚಾಂಪಿಯನಾಗಿ ಹೊರಹೊಮ್ಮಿತು. ಆಳ್ವಾಸ್ನ ಗ್ಲೇವನ್ ಅವರು ಉತ್ತಮ ಹೊಡೆತಗಾರ ಹಾಗೂ ಧನುಷ ಅವರು ಉತ್ತಮ ಎತ್ತುಗಾರನಾಗಿ ಹೊರಹೊಮ್ಮಿರುತ್ತಾರೆ. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ಆಳ್ವರವರು ಅಭಿನಂದಿಸಿದ್ದಾರೆ.
ಮಂಗಳೂರು ವಿ.ವಿ.: ಮಹಿಳೆಯರ ಹ್ಯಾಂಡಬಾಲ್ ಆಳ್ವಾಸ್ಗೆ ಪ್ರಶಸ್ತಿ
ದಿನಾಂಕ 07.02.2020ಮತ್ತು 08.02.2020ರಂದು ಸೆಂಟ್ಅಲೋಷಿಯಸ್ ಪದವಿ. ಕಾಲೇಜು ಮಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಮಹಿಳೆಯರ ಹ್ಯಾಂಡ್ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ನ ಮಹಿಳೆಯರ ಹ್ಯಾಂಡ್ಬಾಲ್ ತಂಡವು ಫೈನಲ್ನಲ್ಲಿ ಸೆಂಟ್ ಅಲೋಷಿಯಸ್ ಪದವಿ ಕಾಲೇಜ್ನ್ನು 16-08 ಅಂಕಗಳ ಅಂತರದಲ್ಲಿ ಸೋಲಿಸಿ, ಆಳ್ವಾಸ್ನ ಶ್ವೇತಾ ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರವರು ಅಭಿನಂದಿಸಿದ್ದಾರೆ.
ಮಂಗಳೂರು ವಿ.ವಿ.ಪುರುಷರ ಹ್ಯಾಂಡ್ಬಾಲ್ ಆಳ್ವಾಸ್ಗೆ ಪ್ರಶಸ್ತಿ
ದಿನಾಂಕ 12.02.2020 ಮತ್ತು 13.02.2020ರಂದು ಪದವಿ ಕಾಲೇಜ್ ಆಳ್ವಾಸ್ ಮೂಡಬಿದಿರೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಮಟ್ಟದ ಅಂತರ್ ಕಾಲೇಜು ಪುರುಷರ ಹ್ಯಾಂಡ್ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ನ ಪುರುಷರ ಹ್ಯಾಂಡ್ಬಾಲ್ ತಂಡವು ಫೈನಲ್ನಲ್ಲಿ ಜಿ.ಎಫ್.ಜಿ.ಸಿ.ವಾಮದಪದವು ಪದವಿ ಕಾಲೇಜ್ನ್ನು 27-25 ಅಂಕಗಳ ಅಂತರದಲ್ಲಿ ಸೋಲಿಸಿ, ಆಳ್ವಾಸ್ನ ವಿಶ್ವಾಸ್ ಉತ್ತಮ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾನೆ. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ಆಳ್ವರವರು ಅಭಿನಂದಿಸಿದ್ದಾರೆ.
ದಕ್ಷಿಣಕನ್ನಡ ಕ್ರಿಕೇಟ್ ಆಸೋಸಿಯೇಷನ್ ಅಂತರ್ ಕಾಲೇಜ್ ಕ್ರಿಕೇಟ್ ಪಂದ್ಯಾಟ
ದಕ್ಷಿಣಕನ್ನಡ ಕ್ರಿಕೇಟ್ ಆಸೋಸಿಯೇಷನ್ ಅಂತರ್ ಕಾಲೇಜ್ ಕ್ರಿಕೇಟ್ ಪಂದ್ಯಾಟ ಆಳ್ವಾಸ್ ಪ್ರಶಸ್ತಿ ದಕ್ಷಿಣಕನ್ನಡ ಕ್ರಿಕೇಟ್ ಆಸೋಸಿಯೇಷನ್ ಇವರ ವತಿಯಿಂದ ಆಯೋಜಿಸಿದ. ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜ್ ಕ್ರಿಕೇಟ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜ್ ಜಯವನ್ನು ಕಲಿಸಿದೆ. ಪೈನಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜ್ ನಿಗದಿತ 20 ಓವರ್ಗಳಲ್ಲಿ 132 ರನ್ಗಳನ್ನು ಗಳಿಸಿತು.್ತ ಯಶ್ 51 ರನ್, ನೆಹಲ್ 25ರನ್, ವಿರಾಜ್ 21 ಓಟಗಳನ್ನು ಗಳಿಸಿದನ್ನು. ಸಂತ ಆಲೋಫಿಯಸ್ಸ್ 115ರನ್ಗೆ ತನ್ನ ಎಲ್ಲಾ ವಿಕೆಟ್ಗಳನ್ನು ಕಳೆಯಿತು. ನಿಖಿಲ್ 4 ವಿಕೆಟ್
ಅಂತರ್ ಕಾಲೇಜು ಖೋ-ಖೋ: ಆಳ್ವಾಸ್ ಕಾಲೇಜುಗಳ ಪಾರಮ್ಯತೆ
ಮೂಡಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಸರ್ಕಾರಿ ಪ್ರಥರ್ಮ ದರ್ಜೆ ಕಾಲೇಜು ವಾಮದಪದವು ಇದರ ಜಂಟಿ ಆಶ್ರಯದಲ್ಲಿ ಮಂಗಳೂರು ವಿಶ್ವವದ್ಯಾನಿಲಯ ಮಟ್ಟದ ಮಹಿಳೆಯರ ಖೋ-ಖೋ ಪಂದ್ಯಾಟವು ಆಯೋಜಿಸಲಾಗಿದ್ದು. ಮಂಗಳೂರು ವಿಶ್ವವಿದ್ಯಾನಿಲಯ ಹಲವು ಕಾಲೇಜುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಈ ಬಾರಿಯು ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಾಲೇಜುಗಳು ಪ್ರಾಬಲ್ಯವನ್ನು ತೋರಿದೆ, ಆಳ್ವಾಸ್ ಕಾಲೇಜು ಮೂಡಬಿದಿರೆ ತಂಡವು ಸತತ 11ನೇ ಬಾರಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ “ಶ್ರೀ.ಹೆಚ್.ವಿ.ಕಮಲೇಶ್ ಪರ್ಯಾಯ ಪಾರಿತೋಷಕವನ್ನು ತನ್ನಲ್ಲೇ ಉಳಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು
ಮಂಗಳೂರು ವಿ.ವಿ. ಪುರುಷರ ಕಬಡ್ಡಿ ಆಳ್ವಾಸ್ಗೆ ಪ್ರಶಸ್ತಿ
ದಿನಾಂಕ 23.01.2020 ರಿಂದ 25.01.2020ರವರೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಕೋಟ ಪಡಿಕೆರೆ ಇಲ್ಲಿ ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜ್ ತಂಡ ಪ್ರಶಸ್ತಿ ಪಡೆದುಕೊಂಡಿರುತ್ತದೆ. ಮತ್ತು ದಿನಾಂಕ 25.01.2020ರಂದು ನಡೆದ ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಡೆ ಸಾರ್ಮಕ ಪರ್ಯಾಯ ಪಲಕಕ್ಕಾಗಿ ನಡೆದ ಅಂತರ್ ವಲಯ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ. 2013 ರಿಂದ ಇಲ್ಲಿಯವರೆಗೆ 6 ಬಾರಿ ಪ್ರಶಸ್ತಿಯನ್ನು ಪಡೆದಿರುತ್ತದೆ. ಮತ್ತು ಉಡುಪಿವಲಯ ಪಂದ್ಯಾಟದಲ್ಲಿ
ರಾಜ್ಯಮಟ್ಟದ ಕ್ರಿಕೇಟ್ ಟಿ-20 ಪಂದ್ಯಾಟ ಆಳ್ವಾಸ್ ಪ್ರಶಸ್ತಿ
ಕಲ್ಪತರು ಕ್ರಿಕೇಟ್ ಕ್ಲಬ್ ಬಿ.ಸಿ. ಆಳ್ವ ಸ್ಮರಣಾರ್ಥ ಬಾಳೆಹೂನ್ನೂರು ಆಯೋಜಿಸಿದ 25 ವರ್ಷದ ಆಹ್ವಾನಿತ ತಂಡಗಳ ಲೆದರ್ ಬಾಲ್ ಕ್ರಿಕೇಟ್ ಪಂದ್ಯಾವಳಿ ಮೂಡಬಿದಿರೆಯ ಆಳ್ವಾಸ್ ತಂಡ ಚಾಂಪಿಯನ್ ಆಗಿ ಸತತ 8ನೇ ವರ್ಷ ಹೊರಹೊಮ್ಮಿದೆ. ಪೈನಲ್ ಪಂದ್ಯಾಯದಲ್ಲಿ ಬೆಂಗಳೂರಿನ ಮಧು ಇಲೆವೆನ್ ತಂಡವನ್ನು ಸೋಲಿಸಿ ಸತತ 8ನೇ ಬಾರಿಗೆ ಕೆ.ಸಿ.ಸಿ.ಟ್ರೋಪಿಯನ್ನು ತನ್ನದಾಗಿಸಿಕೊಂಡಿತ್ತು. ಮೂಡಬಿದಿರೆ ಆಳ್ವಾಸ್ ತಂಡದ ಅಲ್ಪೇಶ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು, ಹಾಗೂ ಭಾರತ್ಧೂರಿ ಉತ್ತಮ ಎಸೆತ್ತಗಾರ ಪ್ರಶಸ್ತಿಯನ್ನು ಹಾಗೂ ರಾಹುಲ್ ಉತ್ತಮ ವಿಕೆಟ್ ಕೀಪರ್ ಪ್ರಶಸ್ತಿಯನ್ನು
ಜೆ.ಇ.ಇ ಮೈನ್ಸ್ ಜನವರಿ 2020 ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ವಿಶೇಷ ಸಾಧನೆ
ಪ್ರಥಮ ಜೆ.ಇ.ಇ ಅರ್ಹತಾ ಪರೀಕ್ಷೆಯಲ್ಲಿ ಜೆ.ಇ.ಇ. ಅಡ್ವಾಸ್ಗೆ 806 ವಿದ್ಯಾರ್ಥಿಗಳು ಅರ್ಹತೆ ಪಡೆದು ರಾಜ್ಯದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ದಾಖಲೆ ಮಾಡಿದೆ. ಎನ್.ಪಿ. ಟಿ. ಪ್ರವೇಶಾತಿಗಾಗಿ ನಡೆದ ಜೆ.ಇ.ಇ ಮೈನ್ಸ್ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 23 ವಿದ್ಯಾರ್ಥಿಗಳು 95 ಪರ್ಸಂಟೈಲ್ಗಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದು, 123 ವಿದ್ಯಾರ್ಥಿಗಳು 90 ಪರ್ಸಂಟೈಲ್ಗಿಂತ ಅಧಿಕ ಫಲಿತಾಂಶ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಅನುಷ್ (98.92), ಸುಹಾಸ್ ಸಿ. (98.23), ರಾಹುಲ್ ಶ್ರೀಶೈಲ್ ದಳವಾಯಿ (97.89), ಆಕಾಶ್ ಮೃತುಂಜಯ
ಅಂತರ್ ವಿವಿ ಕ್ರೀಡೆಗಳಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ವಿಶೇಷ ಸಾಧನೆ
ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆಂಧ್ರ ವಿ.ವಿ ಯಲ್ಲಿ ಮುಕ್ತಾಯಗೊಂಡ ಆಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಮಂಗಳೂರು ವಿ.ವಿ ಸತತ ಆರನೇ ಬಾರಿ ಪ್ರಶಸ್ತಿಯನ್ನು ಪಡೆದುಕೊಂಡು ಡಬಲ್ ಹ್ಯಾಟ್ರಿಕ್ ಸಾಧನೆಯನ್ನು ಮಾಡಿದೆ. ಈ ವರೆಗಿನ ಆರು ಬಾರಿಯ ಚಾಂಪಿಯನ್ ತಂಡದಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಎಲ್ಲಾ ಹತ್ತು ಮಂದಿ ಆಟಗಾರರು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಉಲ್ಲೇಖನೀಯ. ಅಖಿಲ ಭಾರತ ಅಂತರ್ ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಸತತ 17ನೇ ಬಾರಿ ಲೀಗ್ ಹಂತಕ್ಕೆ