Achivements
ಜೆ.ಇ.ಇ ಮೈನ್ಸ್ ಜನವರಿ 2020 ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ವಿಶೇಷ ಸಾಧನೆ
ಪ್ರಥಮ ಜೆ.ಇ.ಇ ಅರ್ಹತಾ ಪರೀಕ್ಷೆಯಲ್ಲಿ ಜೆ.ಇ.ಇ. ಅಡ್ವಾಸ್ಗೆ 806 ವಿದ್ಯಾರ್ಥಿಗಳು ಅರ್ಹತೆ ಪಡೆದು ರಾಜ್ಯದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ದಾಖಲೆ ಮಾಡಿದೆ. ಎನ್.ಪಿ. ಟಿ. ಪ್ರವೇಶಾತಿಗಾಗಿ ನಡೆದ ಜೆ.ಇ.ಇ ಮೈನ್ಸ್ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 23 ವಿದ್ಯಾರ್ಥಿಗಳು 95 ಪರ್ಸಂಟೈಲ್ಗಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದು, 123 ವಿದ್ಯಾರ್ಥಿಗಳು 90 ಪರ್ಸಂಟೈಲ್ಗಿಂತ ಅಧಿಕ ಫಲಿತಾಂಶ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಅನುಷ್ (98.92), ಸುಹಾಸ್ ಸಿ. (98.23), ರಾಹುಲ್ ಶ್ರೀಶೈಲ್ ದಳವಾಯಿ (97.89), ಆಕಾಶ್ ಮೃತುಂಜಯ
ಆಳ್ವಾಸ್ನ ಅಸೀಮಾ ದೋಲಾ ರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಆಯ್ಕೆ
ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ ಅಸೀಮಾ ದೋಲಾ, ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಲಾಗಿರುವ ನ್ಯಾಷನಲ್ ಯುತ್ ಕಾನ್ಫರೆನ್ಸ್ನಲ್ಲಿ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ. ಜನವರಿ 10ರಂದು ಮಂಗಳೂರಿನ ಲೋಯಲಾ ಹಾಲ್ನಲ್ಲಿ ಜರುಗಲಿರುವ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ‘’ಸ್ಕಿಲಿಂಗ್ ದಿ ಯಂಗ್ ಇಂಡಿಯಾ’’ ಎಂಬ ವಸ್ತು ವಿಷಯದೊಂದಿಗೆ ಸದೃಢ ದೇಶ ನಿರ್ಮಾಣದಲ್ಲಿ ಯುವಜನತೆಯ ಯೋಚನೆ ಹಾಗೂ ಯೋಜನೆಗಳ ವಿನಿಮಯಕ್ಕೆ ಅವಕಾಶ ನೀಡಲಾಗಿದೆ. ಆನ್ಲೈನ್ ಹಾಗೂ ದೂರವಾಣಿ ಸಂದರ್ಶನದ ಮೂಲಕ ಇವರ ವಿಷಯ ಮಂಡನೆ, ವಾಕ್ಚಾತುರ್ಯ
ರಾಜ್ಯಮಟ್ಟದ ಆಶುಭಾಷಣ ಸ್ಪರ್ಧೆಯಲ್ಲಿ ಆಳ್ವಾಸ್ಗೆ ದ್ವಿತೀಯ ಸ್ಥಾನ
ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶ್ವೇತಾ ಎಸ್.ಜಿ., ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಫರ್ಧಾ ವಿಭಾಗದ ಆಶು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಕ್ರೈಸ್ತ್ ಯುನಿವರ್ಸಿಟಿಯಲ್ಲಿ ಜರುಗಿದ ರಾಜ್ಯ ಮಟ್ಟದ ಈ ಸ್ಪರ್ಧೆಯಲ್ಲಿ ಸ್ಥಾನ ಪಡೆಯುದರೊಂದಿಗೆ ರೂ 9000 ನಗದು ಬಹುಮಾನಕ್ಕೂ ಭಾಜನರಾಗಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ
ಆಳ್ವಾಸ್ ಕಾಲೇಜಿಗೆ 25 ರ್ಯಾಂಕ್
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ 2019ರ ಸಾಲಿನಲ್ಲಿ ನಡೆಸಿದ್ದ ಪದವಿ ಪರೀಕ್ಷೆಗಳ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು, ಮೂಡುಬಿದಿರೆ ಆಳ್ವಾಸ್ ಕಾಲೇಜು ಒಟ್ಟು 25 ರ್ಯಾಂಕ್ ಗಳಿಸಿ ಮಂಗಳೂರು ವಿಶ್ವವಿದ್ಯಾಲಯದಲ್ಲೇ ಅತೀ ಹೆಚ್ಚು ರ್ಯಾಂಕ್ ಗಳಿಸಿದ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ. ಒಟ್ಟು 25 ರ್ಯಾಂಕ್ಗಳಲ್ಲಿ 7 ಪ್ರಥಮ, 6 ದ್ವಿತೀಯ, 6 ತೃತೀಯ, ನಾಲ್ಕನೇ ರ್ಯಾಂಕ್ 1, ಆರನೇ ರ್ಯಾಂಕ್ 1, ಏಳನೇ ರ್ಯಾಂಕ್ 1, ಒಂಬತ್ತನೇ ರ್ಯಾಂಕ್ 1 ಹಾಗೂ ಹತ್ತನೇ ರ್ಯಾಂಕ್ 2 ಗಳಿಸಿದೆ. ಬಿಕಾಂನ
ಆಳ್ವಾಸ್ ವಿಕಿಪೀಡಿಯ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಕೊಡುಗೆ
ಮೂಡುಬಿದಿರೆ: ಸ್ಥಳೀಯ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ವಿಷಯಗಳನ್ನು ವಿಕಿಪೀಡಿಯಾದಲ್ಲಿ ಸೇರಿಸುವ ಸಲುವಾಗಿ ಭಾರತೀಯ ವಿಕಿ ಸಮುದಾಯಗಳಿಗೆ ವಿಕಿಮೀಡಿಯ ಫೌಂಡೇಶನ್ ಮತ್ತು ಗೂಗಲ್ ಸದಾ ಬೆಂಬಲ ನೀಡುತ್ತಿದೆ. ಈ ನಿಟ್ಟಿನಲ್ಲಿ ಸೆಂಟರ್ ಫಾರ್ ಇಂಟರ್ನೆಟ್ ಆ್ಯಂಡ್ ಸೊಸೈಟಿಯ ಸಹಕಾರದೊಂದಿಗೆ ಪ್ರಾಜೆಕ್ಟ್ ಟೈಗರ್ 2.0 ಯೋಜನೆಯಡಿಯಲ್ಲಿ ವಿಕಿಸಮುದಾಯಗಳಿಗೆ ಸ್ಥಳೀಯ ಮಾಹಿತಿಯನ್ನು ಸೇರಿಸಬೇಕೆಂಬ ಉದ್ದೇಶದಿಂದ ಆಯ್ದ ವಿಕಿ ಸಂಪಾದಕರಿಗೆ ಲ್ಯಾಪ್ಟಾಪ್ ಮತ್ತುಇಂಟರ್ನೆಟ್ ವಿತರಿಸಿ ಪ್ರೋತ್ಸಾಹಿಸಲಾಯಿತು. ಆಳ್ವಾಸ್ ವಿಕಿಪೀಡಿಯಾ ಅಸೋಸಿಯೇಷನ್ ವಿದ್ಯಾರ್ಥಿಗಳು ಕನ್ನಡ ಹಾಗೂ ತುಳು ವಿಕಿಪೀಡಿಯಾಕ್ಕೆ ಮಾಹಿತಿಗಳನ್ನು ಸೇರಿಸುತ್ತಿದ್ದಾರೆ. ಪ್ರಾಜೆಕ್ಟ್
ಆಳ್ವಾಸ್ನ ವೈಷ್ಣವಿ ಗೋಪಾಲ್ಗೆ ರಾಜ್ಯಮಟ್ಟದ ಎನ್ಸಿಸಿ ಚಿನ್ನದ ಪದಕ
ಮೂಡುಬಿದಿರೆ: ಎನ್ಸಿಸಿ ಜ್ಯೂನಿಯರ್ ಅಂಡರ್ ಆಫೀಸರ್, ಆಳ್ವಾಸ್ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ರಾಜ್ಯಮಟ್ಟದ ಉತ್ತಮ ಎನ್ಸಿಸಿ ಕೆಡೆಟ್- ಚಿನ್ನದ ಪದಕವನ್ನು ಪಡೆದಿರುತ್ತಾರೆ. ದೆಹಲಿಯಲ್ಲಿ 2020ರ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಆಯ್ಕೆ ಶಿಬಿರದ ಹಿರಿಯ ವಿಭಾಗದಲ್ಲಿ ಬೆಸ್ಟ್ ಕೆಡೆಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿರುತ್ತಾರೆ. ಮೂಡುಬಿದಿರೆಯಲ್ಲಿ ನಡೆದ ಮೂರು ಹಂತದ ಶಿಬಿರದಲ್ಲಿ ಪ್ರಥಮ ಸ್ಥಾನ ಪಡೆದು, ಬೆಂಗಳೂರಿನ ಆಯ್ಕೆ ಶಿಬಿರಕ್ಕೆ ಆಯ್ಕೆಯಾಗಿದ್ದರು. ಈಕೆ ಶೈಕ್ಷಣಿಕ,
ಪ.ಪೂ. ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಪ.ಪೂ. ಕಾಲೇಜಿಗೆ 32 ಪದಕ
ಮೂಡುಬಿದಿರೆ : ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ಶಿವಮೊಗ್ಗ ಹಾಗೂ ಡಿ.ಎಸ್.ಪದವಿ ಪೂರ್ವ ಕಾಲೇಜ್ ಶಿವಮೊಗ್ಗ ಇವರ ಆಶ್ರಯದಲ್ಲಿ ನವೆಂಬರ್ 23, ರಿಂದ 25, 2019ರವರೆಗೆ ನಡೆದ ಪದವಿಪೂರ್ವ ಕಾಲೇಜ್ಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜ್ 12ಚಿನ್ನದ ಪದಕ, 12ಬೆಳ್ಳಿ ಪದಕ ಮತ್ತು 08ಕಂಚಿನ ಪದಕ ಪಡೆಯಿತು. ಹಾಗೂ ರಾಷ್ಟ್ರೀಯ ಕ್ರೀಡಾಕೂಟಕ್ಕೆ 20ಕ್ರೀಡಾಪಟುಗಳ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ಆಳ್ವಾಸ್ ಪ.ಪೂ. ಕಾಲೇಜಿನ (ನಾಗೇಂದ್ರ ಅಣಪ್ಪ ಗುಂಡುಎಸೆತ ಪ್ರಥಮ, ಚಕ್ರಎಸೆತ ದ್ವಿತೀಯ), (ಮಹತೇಶ್ 400ಮೀ ಪ್ರಥಮ,
ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ನಲ್ಲಿ ಎರಡು ಚಿನ್ನ
ವಿದ್ಯಾಗಿರಿ:ಇತ್ತೀಚೆಗೆ ಮಲೇಷ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್ನಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ತೃತೀಯ ವರ್ಷದ ಬಿಕಾಂ ವಿದ್ಯಾರ್ಥಿ ಬಿ. ಪ್ರಶಾಂತ್ ಅಥ್ಲೆಟಿಕ್ ಯೋಗ ಮತ್ತು ಆರ್ಟಿಸ್ಟಿಕ್ ಯೋಗ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ, ಎರಡು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಮ್ ಮೋಹನ ಆಳ್ವ ಹಾಗೂ ಮ್ಯಾನೆಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಕುರಿಯನ್ ಇವರ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಪ.ಪೂ. ಕಾಲೇಜುಗಳ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಪ.ಪೂ. ಕಾಲೇಜಿಗೆ 59 ಪದಕ
ಮೂಡುಬಿದಿರೆ : ಪದವಿಪೂರ್ವ ಶಿಕ್ಷಣ ಇಲಾಖೆ, ದ.ಕ. ಹಾಗೂ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜ್ ಎಡಪದವು ಇದರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 15ರಂದು ನಡೆದ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಂಗಳೂರು ಗ್ರಾಮಾಂತರವನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜು ಒಟ್ಟು 27ಚಿನ್ನ, 21 ಬೆಳ್ಳಿ ಮತ್ತು 11 ಕಂಚಿನ ಪದಕಗಳೊಂದಿಗೆ 59 ಪದಕಗಳನ್ನು ಪಡೆದು ಬಾಲಕರ ವಿಭಾಗದಲ್ಲಿ 100 ಅಂಕ ಹಾಗೂ ಬಾಲಕಿಯರ ವಿಭಾಗದಲ್ಲಿ 123 ಅಂಕ ಪಡೆದು ಒಟ್ಟು
ರಾಜ್ಯಮಟ್ಟದ ಪ.ಪೂ. ಕಾಲೇಜುಗಳ ವಾಲಿಬಾಲ್ ಪಂದ್ಯಾಟ ಆಳ್ವಾಸ್ನ ಬಾಲಕರಿಗೆ ಪ್ರಶಸ್ತಿ
ಮೂಡುಬಿದಿರೆ: ಪದವಿಪೂರ್ವ ಶಿಕ್ಷಣ ಇಲಾಖೆ ಮಂಡ್ಯ ಹಾಗೂ ಶ್ರೀ ಗಂಗಾಧರೇಶ್ವರ ಸ್ವಾಮಿ ಪದವಿಪೂರ್ವ ಕಾಲೇಜು ಆದಿಚಂಚನಗಿರಿ ಜಂಟಿ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಫೈನಲ್ ಪಂದ್ಯದಲ್ಲಿ ಬೆಂಗಳೂರು ದಕ್ಷಿಣವನ್ನು ಪ್ರತಿನಿಧಿಸಿದ ಸುರಾನ ಪದವಿ ಪೂರ್ವ ಕಾಲೇಜು ತಂಡವನ್ನು 25-15, 25-15 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.